ಆಡಳಿತ ವೈಫಲ್ಯಗಳ ಬಯಲು ಮಾಡಲು ಕಾಲ್ನಡಿಗೆ ಜಾಥಾ: ಮಟ್ಟಾರ್‌


Team Udayavani, Sep 12, 2017, 7:15 AM IST

1109ra1e.jpg

ಪಡುಬಿದ್ರಿ: ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತಗಳ ಆಡಳಿತ ವೈಫಲ್ಯವನ್ನು ಬಟ್ಟಂಬಯಲು ಮಾಡಿ ಜನತೆಗೆ ವಿವರಿಸಿ ಹೇಳಲು ಮತ್ತು ರಾಜ್ಯ ಆಡಳಿತಾರೂಢ ಕಾಂಗ್ರೆಸ್‌ ಸರಕಾರದ ವಿರುದ್ಧ ಆಡಳಿತ ವಿರೋಧಿ ಜನಾಭಿಪ್ರಾಯ ಕ್ರೋಢೀಕರಣಗಳಿಗಾಗಿ ಹಿಂದುಳಿದ ವರ್ಗ ಮೋರ್ಚಾದ ನೇತೃತ್ವದಲ್ಲಿ ಜಿಲ್ಲಾ ಗಡಿಭಾಗವಾದ ಹೆಜಮಾಡಿಯಿಂದ ಕಾಪುವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರ್‌ ರತ್ನಾಕರ ಹೆಗ್ಡೆ ಹೇಳಿದ್ದಾರೆ. 

ಅವರು ಸೆ. 11ರಂದು ಹೆಜಮಾಡಿಯ ಗಡಿಭಾಗದಲ್ಲಿ ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗವು ಸಂಯೋಜಿಸಿದ್ದ ಹೆಜಮಾಡಿ ಯಿಂದ ಕಾಪುವರೆಗಿನ 16.5ಕಿಮೀ ದೂರದ ಪಾದಯಾತ್ರೆಯನ್ನು ಉದ್ಘಾಟಿಸಿ ಹೆಜಮಾಡಿ ಗಡಿಭಾಗದಲ್ಲಿ ಮಾತನಾಡಿದರು. 55ವರ್ಷಗಳ ಆಡಳಿತ ನಡೆಸಿರುವ ಕಾಂಗ್ರೆಸ್‌ಗೆ ಇದುವರೆಗೂ ಆರಣ್ಯ ಭೂಮಿ ಅಕ್ರಮ ಸಕ್ರಮೀಕರಣ ಸಾಧ್ಯವಾಗಿಲ್ಲ. ಈ ಬಡವರಿಗೆ ಸೂರು ಇಲ್ಲವಾಗಿದೆ ಎಂದೂ ಮಟ್ಟಾರ್‌ ಹೇಳಿದರು. ಪಡುಬಿದ್ರಿಯಲ್ಲಿ ರಾಜ್ಯ ಕಾರ್ಯದರ್ಶಿ ಕೆ. ಉದಯಕುಮಾರ್‌ ಶೆಟ್ಟಿ ಹಾಗೂ ದ.ಕ., ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ಸತ್ಯಜಿತ್‌ ಸುರತ್ಕಲ್‌ಮಾತನಾಡಿದರು.

ಸುಮಾರು 1000ಕ್ಕೂ ಹೆಚ್ಚು ಕಾರ್ಯಕರ್ತರು ಹೆಜಮಾಡಿಯಿಂದ ಕಾಪುವರೆಗಿನ ಇಂದಿನ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಬಿಸಿಲ ಝಳದಲ್ಲೂ ಕಾಪುವಿನತ್ತ ಸಾಗಿಬಂದಿರುವ ಈ ಕಾರ್ಯಕರ್ತರು ಆಡಳಿತಾರೂಢ ಕಾಂಗ್ರೆಸ್‌ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿದ್ದರು. ಪಾದಯಾತ್ರೆಯಲ್ಲಿ ರಾಜ್ಯ ಬಿಜೆಪಿ ಕಾರ್ಯದರ್ಶಿ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ರಾಜ್ಯ ಹಿಂದುಳಿದ ಮೋರ್ಚಾ ಕಾರ್ಯದರ್ಶಿ ಕಿರಣ್‌ಕುಮಾರ್‌, ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ್‌ ಕಾವೇರಿ,  ಮಾಜಿ ಶಾಸಕ ರಘುಪತಿ ಭಟ್‌, ಮಾಜಿ ಶಾಸಕ ಲಾಲಾಜಿ ಮೆಂಡನ್‌, ಉಡುಪಿ ಜಿ. ಪಂ. ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿ. ಪಂ. ಸದಸ್ಯರಾದ ಗೀತಾಂಜಲಿ ಸುವರ್ಣ, ಶಶಿಕಾಂತ್‌ ಪಡುಬಿದ್ರಿ, ಶಿಲ್ಪಾ ಜಿ. ಸುವರ್ಣ, ರೇತ್ಮಾ ಉದಯ ಶೆಟ್ಟಿ. ತಾ. ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌, ತಾ. ಪಂ. ಸದಸ್ಯೆ ನೀತಾ ಗುರುರಾಜ್‌, ಕಾಪು ಪುರಸಭೆಯ ಪ್ರತಿಪಕ್ಷ ನಾಯಕ ಅರುಣ್‌ ಶೆಟ್ಟಿ ಪಾದೂರು, ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಪಾದೆಬೆಟ್ಟು, ಜಿಲ್ಲಾ ಬಿಜೆಪಿ ವಕ್ತಾರ ಕಟಪಾಡಿ ಶಂಕರ ಪೂಜಾರಿ, ಉಪ ವಕ್ತಾರ ಶಿವಪ್ರಸಾದ ಶೆಟ್ಟಿ ಎಲ್ಲದಡಿ, ಜಿಲ್ಲಾ ಉಪಾಧ್ಯಕ್ಷ ಸುರೇಶ್‌ ಶೆಟ್ಟಿ ಗುರ್ಮೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್‌ ಶೆಟ್ಟಿ, ದ.ಕ., ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್‌ ಸುವರ್ಣ, ಮಹಿಳಾ ಮೋರ್ಚಾದ ವೀಣಾ ಶೆಟ್ಟಿ, ಬಿಜೆಪಿ ಜಿಲ್ಲಾ ನಾಯಕರಾದ ರಮಾಕಾಂತ ದೇವಾಡಿಗ, ಉದಯಕುಮಾರ್‌ ಶೆಟ್ಟಿ ಇನ್ನಾ ಪಿ. ರವೀಂದ್ರನಾಥ ಜಿ. ಹೆಗ್ಡೆ, ಮಿಥುನ್‌ ಹೆಗ್ಡೆ, ಹೆಜಮಾಡಿ ಗ್ರಾ. ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್‌, ಆಸೀಫ್‌, ಪ್ರವೀಣ್‌ ಪೂಜಾರಿ, ರವಿ ಶೆಟ್ಟಿ ಪಾದೆಬೆಟ್ಟು, ಶ್ರೀನಿವಾಸ ಶರ್ಮ ಪಾದೆಬೆಟ್ಟು, ಮಾಧವ ಶೆಟ್ಟಿ ಪಡುಬಿದ್ರಿ, ರಾಜೇಶ್‌ ಉಪಾಧ್ಯಾಯ ಪಡುಬಿದ್ರಿ, ಸತೀಶ್‌ ಶೆಟ್ಟಿ ಗುಡ್ಡೆಚ್ಚಿ ಎಲ್ಲೂರು ಮತ್ತಿತರರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಜಯಪ್ರಕಾಶ್‌ ಹೆಗ್ಡೆ, ರಾಜ್ಯದಲ್ಲಿನ ಕಾಂಗ್ರೆಸ್‌ ಸರಕಾರವು ಇಂದಿನವರೆಗೂ 94ಸಿ ಮತ್ತು 94ಸಸ ಫಲಾನುಭವಿಗಳಿಗೆ ಖಾಯಂ ಹಕ್ಕುಪತ್ರವನ್ನು ವಿತರಿಸಿಲ್ಲ. ತಾತ್ಕಾಲಿಕ ಹಕ್ಕುಪತ್ರಗಳನ್ನು ಕೆಲವರಿಗೆ ನೀಡಿದ್ದರೂ ಒಂದು ತಿಂಗಳೊಳಗಾಗಿ ಶಾಶ್ವತ ಹಕ್ಕುಪತ್ರವನ್ನು ನೀಡಬೇಕೆಂಬ ನಿಯಮವಿದ್ದರೂ ಯಾರಿಗೂ ನೀಡುತ್ತಿಲ್ಲ. ಬಡವರ ದಾರಿತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್‌ ಸರಕಾರಕ್ಕೆ ಕರಾವಳಿ ಜಿಲ್ಲೆಗಳಿಗೆ ಇನ್ನೂ ಸ್ಪಷ್ಟವಾದ ಪ್ರತ್ಯೇಕ ಮರಳು ನೀತಿಯನ್ನು  ಜಾರಿಗೊಳಿಸಲಾಗಿಲ್ಲವೆಂದರು.

ಜಾಥಾವನ್ನು ಉದ್ದೇಶಿಸಿ ಮಾತನಾಡಿದ ವಿಧಾನಪರಿಷತ್‌ ಸದಸ್ಯ, ಶಾಸಕ ಕೋಟ ಶ್ರೀನಿವಾಸ ಪೂಜಾರಿ ಬಡವರಿಗೆ ಹಕ್ಕುಪತ್ರಗಳನ್ನು ನೀಡುತ್ತೇವೆಂಬ ನಾಟಕವನ್ನಷ್ಟೇ ಮಾಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಕ್ಕುಪತ್ರಗಳನ್ನು ವಿತರಿಸಲು ಸೋತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 28,000 ಹಕ್ಕುಪತ್ರಗಳು ವಿತರಣೆಗೆ ಬಾಕಿ ಇವೆ ಎಂದರು.

ಟಾಪ್ ನ್ಯೂಸ್

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

School-Chikki

Injustice: ಮೊಟ್ಟೆ ಕೇಳಿದ ಶಾಲಾ ವಿದ್ಯಾರ್ಥಿಗಳಿಗೆ ಸಿಕ್ಕಿದ್ದು ಚಿಕ್ಕ ಚಿಕ್ಕಿ!

Rangavaibhava

Golden Jubliee: ಕರುನಾಡ ರಂಗವೈಭವ ಮತ್ತೆ ಮರಳಿ ತರಬೇಕಿದೆ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karkala ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Karkala: ಅರುಣೋದಯ ವಿಶೇಷ ಶಾಲೆ ಮುಖ್ಯಸ್ಥೆ ಸಿಸ್ಟರ್‌ ಡೋನಾಲ್ಡಾ ಪಾಯಸ್‌ ನಿಧನ

Manipal ದಾಳಿ: 15 ಬುಟ್ಟಿ ಮರಳು ವಶಕ್ಕೆ

Manipal ದಾಳಿ: 15 ಬುಟ್ಟಿ ಮರಳು ವಶಕ್ಕೆ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

Udupi: ಗೀತಾರ್ಥ ಚಿಂತನೆ-87: ಎದೆಗಾರಿಕೆಗೆ ಮಾದರಿ ಮಹಿಳೆ ಕುಂತಿ

sand

Kaup: ಕೈಪುಂಜಾಲು; ಅಕ್ರಮ ಮರಳು ಸಂಗ್ರಹ; ಪ್ರಕರಣ ದಾಖಲು

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

Karkala: ಮಾನಸಿಕ ಖಿನ್ನತೆಯಿಂದ ಮಹಿಳೆ ಆತ್ಮಹ*ತ್ಯೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Sydney; ಮಿಲಿಸೆಕೆಂಡಲ್ಲೇ ವಾಸನೆ ಪತ್ತೆ ಹಚ್ಚುವ ರೋಬೋಟ್‌ ಸೃಷ್ಟಿ!

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Canada-India: ಕಾನ್ಸುಲರ್‌ ಕ್ಯಾಂಪ್‌ ರದ್ದು; ಕೆನಡಾಗೆ ಭಾರತ ತಿರುಗೇಟು

Price-Hike

Electricity Price: ರಾಜ್ಯದ ಜನತೆಗೆ ಈ ಬಾರಿಯೂ ವಿದ್ಯುತ್‌ ದರ ಏರಿಕೆ ಶಾಕ್‌?

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.