ಬಡ ಮಕ್ಕಳ ಬದುಕಿನೊಂದಿಗೆ ರಾಜ್ಯ ಸರಕಾರದ ಚೆಲ್ಲಾಟ: ಬಿಜೆಪಿ
Team Udayavani, Aug 19, 2017, 7:40 AM IST
ಉಡುಪಿ: ಕಲ್ಲಡ್ಕದ ಶ್ರೀರಾಮ ಪ್ರೌಢಶಾಲೆ ಹಾಗೂ ಪುಣಚದ ಶ್ರೀದೇವಿ ಪ್ರೌಢಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡುತ್ತಿದ್ದ ನೆರವನ್ನು ರದ್ದುಗೊಳಿಸಿದ ರಾಜ್ಯ ಸರಕಾರ ಬಡ ಮಕ್ಕಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪಿಸಿದರು.
ಜಿಲ್ಲಾ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶೇ. 70 ರಷ್ಟು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳೇ ಇರುವ ಈ 2 ಶಾಲೆಗಳಿಗೆ 2007 ರಿಂದ ಅನುದಾನ ನೀಡಲಾಗುತ್ತಿದೆ. ಆದರೆ ಮಂಗಳೂರಿನಲ್ಲಿ ನಡೆದ ಗಲಭೆ ವಿಚಾರವಾಗಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಗುರಿಯಾಗಿಸಿ ಈಗ ಸರಕಾರ ಅನುದಾನ ಕಡಿತಗೊಳಿಸಿದೆ. ಆದರೆ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಹಣವನ್ನು ಕ್ರಿಶ್ಚಿಯನ್ ಮಿಷನರಿಗಳಿಗೆ, ದರ್ಗಾ, ಮಸೀದಿಗಳ ಅಭಿವೃದ್ಧಿಗೆ ನೀಡುತ್ತಿದೆ. ಉಡುಪಿಯಲ್ಲಿಯೂ ಬಿಜೆಪಿ ಭಿಕ್ಷೆ ಬೇಡಿ ಆ ಮಕ್ಕಳ ಅನ್ನಕ್ಕೆ ನೆರವು ನೀಡುವುದಾಗಿ ತಿಳಿಸಿದರು.
ಪಿಎಫ್ಐ -ಕೆಎಫ್ಡಿ ನಿಷೇಧಿಸಿ
ಬಿಜೆಪಿ ಹಾಗೂ ಹಿಂದೂ ಕಾರ್ಯಕರ್ತರ ಕೊಲೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ವ್ಯವಸ್ಥಿತ ಸಂಚು ರೂಪಿಸುತ್ತಿರುವ ಪಿಎಫ್ಐ ಹಾಗೂ ಕೆಎಫ್ಡಿಯನ್ನು ರಾಜ್ಯ ಸರಕಾರ ತತ್‌ಕ್ಷಣ ನಿಷೇಧಿಸಿ ಜನ ಸಾಮರಸ್ಯದಿಂದ ಬದುಕಲು ವ್ಯವಸ್ಥೆ ಮಾಡಬೇಕಿದೆ. ಮೂಲ್ಕಿ ಸುಂದರಾಂ ಶೆಟ್ಟಿ ಹೆಸರನ್ನು ರಸ್ತೆಗೆ ನಾಮಕರಣಗೊಳಿಸುವ ವಿಚಾರದಲ್ಲಿ ರಾಜಕೀಯ ಬೇಡ. ಮೂಡಬಿದಿರೆಯ ಕಾವ್ಯ ಸಾವಿನ ಸಂಬಂಧ ನಿಷ್ಪಕ್ಷಪಾತ ತನಿಖೆಯಾಗಲಿ. ನಗರಸಭಾ ವ್ಯಾಪ್ತಿಯ ಹೈಟೆಕ್ ಮೀನು ಮಾರುಕಟ್ಟೆಯ ನಿರ್ವಹಣೆ ಸರಿಯಿಲ್ಲ. ಉಡುಪಿಯಲ್ಲಿ ಸುಮಾರು ಆರು ಸಾವಿರ ಪಡಿತರ ಚೀಟಿಗಳನ್ನು ಬೇರೆ ಬೇರೆ ಕಾರಣಗಳಿಗಾಗಿ ರದ್ದುಗೊಳಿಸಲಾಗಿದೆ. ಬಡವರಿಗೆ ಸಮಸ್ಯೆಗಳಾಗುತ್ತಿದ್ದು, ಸರಕಾರ ಶೀಘ್ರ ಕಾರ್ಡ್ ವ್ಯವಸ್ಥೆ ಮಾಡಬೇಕಿದೆ ಎಂದು ಮಟ್ಟಾರು ಒತ್ತಾಯಿಸಿದರು.
ಭ್ರಷ್ಟ ಸರಕಾರ
ಆಡಳಿತ ವೈಫಲ್ಯವನ್ನು ಮರೆಮಾಚುವ ಸಲುವಾಗಿ ಲಿಂಗಾಯಿತ ಧರ್ಮವನ್ನು ಬೇರೆ ಬೇರೆ ಮಾಡಲು ಹೊರಟಿರುವ ಸರಕಾರ ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಡಿಕೆಶಿ ಬಳಿ 3,000 ಕೋ. ರೂ. ಗೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದ್ದು, ರಮೇಶ ಜಾರಕಿಹೊಳಿ, ಲಕ್ಷ್ಮೀ ಹೆಬ್ಟಾಳ್ಕರ್ ಬಳಿಯೂ ಅಕ್ರಮ ಆಸ್ತಿ ಸಿಕ್ಕಿತ್ತು. ರಾಜ್ಯ ಸರಕಾದರಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಮುಖಂಡರಾದ ಕುಯಿಲಾಡಿ ಸುರೇಶ್ ನಾಯಕ್, ಕಟಪಾಡಿ ಶಂಕರ ಪೂಜಾರಿ, ಯಶ್‌ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ರವಿ ಅಮೀನ್ ಉಪಸ್ಥಿತರಿದ್ದರು.
“ಹೆಜಮಾಡಿ ಬಂದರು: ರಾಜ್ಯದ ಪಾಲು ನೀಡಲಿ’
ಹೆಜಮಾಡಿ ಬಂದರು ನಿರ್ಮಾಣ ಸಂಬಂಧ ಜಿಲ್ಲೆಯ ಮೀನುಗಾರಿಕಾ ಮುಖಂಡರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿದಾಗ 140 ಕೋ. ರೂ. ವೆಚ್ಚದ ಯೋಜನೆಯ ಶೇ. 50 ರಷ್ಟು ಅಂದರೆ 70 ಕೋ. ರೂ. ಯನ್ನು ತತ್‌ಕ್ಷಣ ಬಿಡುಗಡೆಗೊಳಿಸುವ ಭರವಸೆ ನೀಡಿದ್ದಾರೆ. ಉಳಿದ 70 ಕೋ.ರೂ. ಅನ್ನು ರಾಜ್ಯ ಸರಕಾರ ಬಿಡುಗಡೆಗೊಳಿಸಲಿ. ಇದೇ ವೇಳೆ ಮೀನುಗಾರರನ್ನು ಕೃಷಿಕರಂತೆ ಪರಿಗಣಿಸಿ ಸವಲತ್ತು ನೀಡಲು ಹಾಗೂ ಮೀನುಗಾರಿಕಾ ಸಲಕರಣೆಗಳಿಗೆ ಹೆಚ್ಚಿರುವ ಜಿಎಸ್‌ಟಿಯನ್ನು ಶೇ. 5 ರಷ್ಟು ಇಳಿಕೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ಮಟ್ಟಾರು ಹೇಳಿದರು.
ಕಾಂಗ್ರೆಸ್‌ನಿಂದ ಮರಳು ದಂಧೆ
ಜಿಲ್ಲೆಯಲ್ಲಿ ಕಡೆಗೂ ಮರಳುಗಾರಿಕೆಗೆ ಅವಕಾಶ ನೀಡಲಾಗಿದ್ದು, ಆದರೆ ಸಾಂಪ್ರದಾಯಿಕ ಮರಳುಗಾರಿಕೆಗೆ ಜಿಲ್ಲಾಡಳಿತ ವಿಧಿಸಿರುವ ಕೆಲವೊಂದು ನಿರ್ಬಂಧ ಸರಿಯಲ್ಲ. ಅರ್ಜಿ ಸಲ್ಲಿಸಲು ಕಾಂಗ್ರೆಸ್‌ನವರಿಗೆ ಮಾತ್ರ ಅವಕಾಶ ನೀಡಲಾಗಿದೆ. ಕರಾವಳಿಗೆ ಪ್ರತ್ಯೇಕ ಮರಳು ನೀತಿ ಇನ್ನೂ ರೂಪಿಸಿಲ್ಲ. ಮರಳು ದಂಧೆ ಮೂಲಕ ಕಾಂಗ್ರೆಸ್ ಹಣ ಮಾಡಲು ಹೊರಟಿದೆ ಎಂದು ಮಟ್ಟಾರು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿದ ಶಿವಮೊಗ್ಗ ಲೋಕಸಭೆ ಕ್ಷೇತ್ರದ ಸಂಸದ ಬಿ.ವೈ. ರಾಘವೇಂದ್ರ
Padubidiri: ಸಾಲ ವಾಪಸ್ ನೀಡದ್ದಕ್ಕೆ ಯಕ್ಷಗಾನ ಕಲಾವಿದನಿಗೆ ದೈಹಿಕ ಹಲ್ಲೆ
Karnataka Kreedakoota: ಮಕ್ಕಳ ಕ್ರೀಡೆಗಳಿಗೆ ಮನೆಯಿಂದಲೇ ಪ್ರೋತ್ಸಾಹ ಅಗತ್ಯ: ರಾಜ್ಯಪಾಲ
Manipal: ಪಡುತೋನ್ಸೆ: ಮರಳು ಅಕ್ರಮ ಸಾಗಾಟ ಪತ್ತೆ
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ