ರಾಜ್ಯಮಟ್ಟದ ಯುವಜನೋತ್ಸವ ಸಮಾರೋಪ
Team Udayavani, Dec 3, 2017, 1:13 PM IST
ಉಡುಪಿ: ಜಿಲ್ಲಾಡಳಿತ, ಜಿ.ಪಂ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಮತ್ತು ಜಿಲ್ಲಾ ಯುವ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಉಡುಪಿ – ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯುವಜನೋತ್ಸವದ ಸಮಾರೋಪ ಮತ್ತು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ಶನಿವಾರ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ದಿನಕರ ಬಾಬು ಅವರು ಸ್ಪರ್ಧಾಳುಗಳು ಕೇವಲ ಬಹುಮಾನ ಗಿಟ್ಟಿಸುವ ಇರಾದೆಯನ್ನಿರಿಸಿಕೊಳ್ಳದೇ ಸ್ಪರ್ಧಾ ಮನೋಭಾವದಿಂದ ಭಾಗವಹಿಸುವುದೂ ಕೂಡ ಮುಂದಿನ ಗೆಲುವಿಗೆ ಸ್ಫೂರ್ತಿಯಾಗಲಿದೆ ಎಂದರು.
ಮುಖ್ಯ ಅತಿಥಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅವರು ಕಾರ್ಯಕ್ರಮ ಸಂಘಟಕರು ಮತ್ತು ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಯುವಜನ ಸಬಲೀಕರಣ ಇಲಾಖೆ ಜಂಟಿ ನಿರ್ದೇಶಕ ಅಭಿಜಿನ್ ಶೆಟ್ಟಿ, ಅಜ್ಜರಕಾಡು ಸ.ಪ್ರ.ದ. ಮಹಿಳಾ ಕಾಲೇಜಿನ ಪ್ರಾಂಶುಪಾಲ ಜಗದೀಶ ರಾವ್, ಜಿ.ಪಂ. ಉಪಕಾರ್ಯದರ್ಶಿ ನಾಗೇಶ್ ರಾಯ್ಕರ್, ಉಪನಿರ್ದೇಶಕ ರಂಗಯ್ಯ ಗೌಡ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧಾ ವಿಜೇತರಿಗೆ ಅತಿಥಿ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರಾಧ್ಯಾಪಕ ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಫಲಿತಾಂಶ
ಜಾನಪದ ನೃತ್ಯ – ಸರಸ್ವತಿ ಯುವಕ ಮಂಡಲ ಮಲ್ಪೆ – ಉಡುಪಿ (ಪ್ರಥಮ), ಕಲಾಸೂರ್ಯ ಯುವಕ ಸಂಘ ಹಾನಬಾಳು ಹಾಸನ (ದ್ವಿತೀಯ), ಕೆವಿಎಸ್‌ಎಸ್ ಕಲಾ ಬಳಗ ಕಿಲಾರ ಮಂಡ್ಯ (ತೃತೀಯ), ಜಾನಪದ ಹಾಡು – ಮಾತೃಭೂಮಿ ಯುವಕ ಸಂಘ ಲಗ್ಗೇರಿ ಬೆಂಗಳೂರು (ಪ್ರಥಮ), ಗುರುಕೃಷ್ಣ ಸಂಗೀತ ಪಾಠ ಶಾಲೆ ಸೊರಬ ಶಿವಮೊಗ್ಗ (ದ್ವಿತೀಯ), ಶರೀಫ್ ದೊಡ್ಡಮನೆ ತಂಡ ಧಾರವಾಡ (ತೃತೀಯ), ಏಕಾಂಕ ನಾಟಕ – ಸ.ಪ್ರ.ದ. ಕಾಲೇಜು ಕಡೂರು ಚಿಕ್ಕಮಗಳೂರು (ಪ್ರಥಮ), ಬೀನಾ ವೈದ್ಯ ಕಾಲೇಜಿನ ತಂಡ ಉತ್ತರಕನ್ನಡ (ದ್ವಿತೀಯ), ನಟವರಿ ಕಲಾ ಪರಿಷತ್ ಗದಗ (ತೃತೀಯ) ಬಹುಮಾನ ಪಡೆದಿದ್ದಾರೆ.
ಶಾಸ್ತ್ರೀಯ ಗಾಯನ ವಿಭಾಗದಲ್ಲಿ ಹಿಂದೂಸ್ಥಾನಿ – ಸರಸ್ವತಿ ಸಬರದ ವಿಜಯಪುರ (ಪ್ರಥಮ), ಬಸವರಾಜ ವಂದಳಿ ರಾಯಚೂರು (ದ್ವಿತೀಯ), ವಿಶ್ವನಾಥ ವಸ್ತ್ರದಮಠ ಕಲಬುರ್ಗಿ (ತೃತೀಯ), ಕರ್ನಾಟಕ ಸಂಗೀತ – ಅದಿತಿ ಎನ್. ಪ್ರಹ್ಲಾದ ಬೆಂಗಳೂರು ಗ್ರಾಮಾಂತರ (ಪ್ರಥಮ), ಸ್ವಾತಿ ಎನ್. ಬಳ್ಳಾರಿ (ದ್ವಿತೀಯ), ಅಖೀಲಾ ದ.ಕ. (ತೃತೀಯ), ತಬಲಾ – ಸುದರ್ಶನ್ ವಿ. ಅಸಕಿಹಾಳ ರಾಯಚೂರು (ಪ್ರಥಮ), ಪ್ರಸಾದ್ ಎಂ. ಧಾರವಾಡ (ದ್ವಿತೀಯ), ಸಂತೋಷ್ ಎಂ. ದಾವಣಗೆರೆ (ತೃತೀಯ), ಸಿತಾರ್ – ಪ್ರವೀಣ ಹೂಗಾರ ಧಾರವಾಡ (ಪ್ರಥಮ), ಅರವಿಂದ ಎಸ್.ಕೆ. ಗದಗ (ದ್ವಿತೀಯ), ಚೈತ್ರಾ ಪತ್ತಾರ ಬಾಗಲಕೋಟೆ (ತೃತೀಯ), ಕೊಳಲು – ಮಣಿಕಂಠ ವಿ. ಕುಲಕರ್ಣಿ ಕಲಬುರ್ಗಿ (ಪ್ರಥಮ), ಕೃತಿಕಾ ವಿ. ಜಂಗಿನಮಠ ವಿಜಯಪುರ (ದ್ವಿತೀಯ), ವಿ. ಚೇತನ್ ನಾಯಕ್ ಉಡುಪಿ (ತೃತೀಯ), ವೀಣೆ – ಪೃಥ್ವಿ ಬಿ.ಎಂ. ದಾವಣಗೆರೆ (ಪ್ರಥಮ), ಕೃಷ್ಣ ಕುಮಾರಿ ಬೆಂಗಳೂರು ಗ್ರಾಮಾಂತರ (ದ್ವಿತೀಯ), ಭುವನಶ್ರೀ ಬೆಂಗಳೂರು ನಗರ (ತೃತೀಯ), ಮೃದಂಗ – ದಶರಥಿ ದಾವಣಗೆರೆ (ಪ್ರಥಮ), ಅಮೋಘ ಕೆ.ಎಂ. ಬೆಂಗಳೂರು ನಗರ (ದ್ವಿತೀಯ), ಎಸ್.ಎನ್. ಲಕ್ಷ್ಮೀನಾರಾಯಣ ಚಿಕ್ಕಬಳ್ಳಾಪುರ (ತೃತೀಯ), ಹಾರ್ಮೋನಿಯಂ – ಗಂಗಾಧರ ಗದಗ (ಪ್ರಥಮ), ವಿಶ್ವನಾಥ ವಸ್ತ್ರದಮಠ ಕಲಬುರ್ಗಿ (ದ್ವಿತೀಯ), ಬಸವರಾಜ ಪಲ್ಲೇದ ಹಾವೇರಿ (ತೃತೀಯ), ಗಿಟಾರ್ – ಕೆವಿನ್ ಚಾಮರಾಜನಗರ (ಪ್ರಥಮ), ದೀಕ್ಷಿತ್ ನೆಲ್ಲಿತಾಮ ಕೊಡಗು (ದ್ವಿತೀಯ), ಶಿವರಾಮ ಭಾಗÌತ್ ಉತ್ತರಕನ್ನಡ (ತೃತೀಯ) ಬಹುಮಾನ ಪಡೆದರು.
ಶಾಸ್ತ್ರೀಯ ನೃತ್ಯ ವಿಭಾಗದ ಭರತನಾಟ್ಯ – ಶಮಾ ಪ್ರಣಮ್ಯ ದ.ಕ. (ಪ್ರಥಮ), ನೂಷಾ ಐತಾಳ್ ಶಿವಮೊಗ್ಗ (ದ್ವಿತೀಯ), ಅನಘಶ್ರೀ ಉಡುಪಿ (ತೃತೀಯ), ಒಡಿಸ್ಸಿ – ಅಮೃತಾ ಮೈಸೂರು (ಪ್ರಥಮ), ದೀಪಿಕಾ ಗದಗ (ದ್ವಿತೀಯ), ನಮಿತಾ ಶೆಣೈ ಕೊಡಗು (ತೃತೀಯ), ಮಣಿಪುರಿ – ನಿಕಿತಾ ಯೋಗೇಶ್ ಕೊಡಗು (ಪ್ರಥಮ), ಕೆ. ಕೌಸ್ತುಭ ಮಂಡ್ಯ (ದ್ವಿತೀಯ), ಮಶಾಕಾ ಅಹಮದ್ ಕಲಬುರ್ಗಿ (ತೃತೀಯ), ಕಥಕ್ – ಸಪ್ನಾ ಕಾಮತ್ ಉಡುಪಿ (ಪ್ರಥಮ), ಶ್ವೇತಾ ಸಂಡೂರು ಗದಗ (ದ್ವಿತೀಯ), ಗಾನವಿ ರಮೇಶ್ ಕೊಡಗು (ತೃತೀಯ), ಕೂಚುಪುಡಿ – ಪಿ. ರಂಜನಾ ಬಳ್ಳಾರಿ (ಪ್ರಥಮ), ಅಂಕಿತಾ ರಾವ್ ಧಾರವಾಡ (ದ್ವಿತೀಯ), ಕಾರ್ತಿಕ್ ಶೆಣೈ ಕೊಡಗು (ತೃತೀಯ), ಆಶುಭಾಷಣ – ಕಾರ್ತಿಕ್ ಎಚ್.ಎನ್. ಬೆಂಗಳೂರು ನಗರ (ಪ್ರಥಮ), ಲೋಕೇಶ್ ಬಾಬುಲಾಲ್ ರಾಯಚೂರು (ದ್ವಿತೀಯ), ವಿರಾಜ ರಾಮನಗರ (ತೃತೀಯ) ಬಹುಮಾನ ಗಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
B Z Zameer ahmed khan ಹೇಳಿಕೆ ಹಿಂದೆ ಎಚ್‌ಡಿಕೆಯದ್ದೇ ಕೈವಾಡ ಎಂದ ಕೈ ಶಾಸಕ
Supreme Court: 3 ತಿಂಗಳಿಗಿಂತ ದೊಡ್ಡ ಮಕ್ಕಳ ದತ್ತು ಪಡೆದರೆ ಹೆರಿಗೆ ರಜೆ ಏಕಿಲ್ಲ
November 20: ಲಾವೋಸ್‌ನಲ್ಲಿ ಭಾರತ, ಚೀನ ರಕ್ಷಣ ಸಚಿವರ ಸಭೆ
Marriage registration ಪ್ರಮಾಣಪತ್ರ ನೀಡುವ ಅಧಿಕಾರ ವಕ್ಫ್ ಬೋರ್ಡ್‌ಗೆ ಎಲ್ಲಿದೆ?
Libya; 8 ವರ್ಷಗಳ ಬಳಿಕ ಲಿಬಿಯಾಕ್ಕೆ ತೆರಳಲು ಭಾರತೀಯರಿಗೆ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.