ಮಲ್ಪೆ ಸೀ ವಾಕ್‌ವೇ : ಕಲಾಕೃತಿಯ ಬೆರಳಿಗೆ ಹಾನಿ
Team Udayavani, Feb 2, 2018, 8:48 PM IST
ಮಲ್ಪೆ: ಕಳೆದ ವಾರವಷ್ಟೇ ಲೋಕಾರ್ಪಣೆಗೊಂಡ ಮಲ್ಪೆ ಮೀನುಗಾರಿಕಾ ಬಂದರು ಸಮೀಪದ ನಿರ್ಮಾಣಗೊಂಡ ಸೀವಾಕ್‌ವೇಯಲ್ಲಿನ ಸುಂದರ ಕಲಾಕೃತಿಯಲ್ಲಿ ಮೀನುಗಾರ ಮಹಿಳೆಯ ಕೈ ಬೆರಳುಗಳು ತುಂಡಾಗಿದ್ದು ಇದು ರಾತ್ರಿಹೊತ್ತಿನ ಕಿಡಿಗೇಡಿಗಳ ಕೃತ್ಯವೋ ಅಥವಾ ಸೆಲ್ಫಿ ಪ್ರಿಯರ ಹುಚ್ಚಾಟಕ್ಕೆ ಬಲಿಯಾಗಿದೆಯೋ ಗೊತ್ತಿಲ್ಲ. ಕಡಲಿನತ್ತ ಮುಖಮಾಡಿದ ಮೀನುಗಾರ, ಬುಟ್ಟಿಯಲ್ಲಿ ಮೀನು ಹೊತ್ತು ಮಾರಲು ಹೊರಟ ಮಡದಿ, ಅಮ್ಮನ ಸೆರಗು ಹಿಡಿದು ಶಾಲೆಯತ್ತ ಮುಖ ಮಾಡಿದ ಮಗ ಈ ಸುಂದರ ಕಲಾಕೃತಿ ಎಲ್ಲರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದರಲ್ಲಿ ಮಹಿಳೆಯ ತೋರುಬೆರಳು, ಉಂಗುರಬೆರಳು ಮತ್ತು ಕಿರುಬೆರಳಿಗೆ ಹಾನಿಯಾಗಿದ್ದು ಒಳಗಿರುವ ಕಬ್ಬಿಣದ ಸರಿಗೆ ಹೊರಬಂದಿದೆ.
ಜ. 26ರ ಗಣರಾಜ್ಯೋತ್ಸವದಂದು ಉದ್ಘಾಟನೆಗೊಂಡ ಈ ಆಕರ್ಷಣೀಯ ಸೀವಾಕ್‌ವೇ ನೋಡಲು ಆ ದಿನದಿಂದಲೇ ಜನಸಾಗರವೇ ಇಲ್ಲಿಗೆ ಹರಿದು ಬರುತ್ತಿದ್ದು ಪ್ರವಾಸಿಗರು, ಸ್ಥಳೀಯರು ಸೇರಿದಂತೆ ಸೆಲ್ಫಿ ಪ್ರಿಯರು ಕಲಾಕೃತಿಗೆ ಮುಗಿಬಿದ್ದು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ. ಕಟ್ಟೆಯ ಮೇಲೆ ನಿಂತುಕೊಂಡು, ಮೂರ್ತಿಗೆ ಒರಗಿಕೊಂಡು ಫೋಟೋವನ್ನು ಕ್ಲಿಕ್ಕಿಸಿ ಕೊಳ್ಳುವುದರ ಮಧ್ಯೆಯೂ ಕಲಾಕೃತಿಗೆ ಹಾನಿಗೊಂಡಿರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಏನೇ ಆದರೂ ಮುಂದೆ ಈ ಕಲಾಕೃತಿ ಇರುವ ಸಮೀಪ ಯಾರೂ ತೆರಳದಂತೆ, ದಂಡೆ ಮೇಲೆ ಹತ್ತದಂತೆ ಅದರ ಸುತ್ತ ರ್ಯಾಲಿಂಗ್ಸ್ ಹಾಕಿ ತಡೆಗೋಡೆ ಮಾಡುವಂತಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Udupi: ಅವಕಾಶಗಳ ಸದ್ಬಳಕೆಗೆ ಮಹಿಳೆಯರು ಹಿಂಜರಿಯಬಾರದು: ಪ್ರಜ್ವಲಾ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.