Ekkamale oil: ಎಕ್ಕಮಾಲೆ ಎಣ್ಣೆ ಉತ್ಪಾದನೆ, ಮಾರಾಟಕ್ಕೆ ತಡೆಯಾಜ್ಞೆ
Team Udayavani, Aug 4, 2024, 6:25 AM IST
ಕಾಪು: ಜಿಲ್ಲೆಯ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಸುಧಾಕರ್ ಎಂ. ಪೂಜಾರಿ ಅವರ ರಿಜಿಸ್ಟರ್ಡ್ ಟ್ರೇಡ್ ಮಾರ್ಕ್ ಹೊಂದಿರುವ ‘ಎಕ್ಕದ’ ಎಂಬ ನೋವಿನ ಎಣ್ಣೆಯ ಟ್ರೇಡ್ ಮಾರ್ಕ್‌ಗೆ ಸಂಬಂಧಪಟ್ಟಂತೆ, ಈ ಟ್ರೇಡ್ ಮಾರ್ಕ್ ಉಲ್ಲಂಘಿಸಿ ‘ಎಕ್ಕಮಾಲೆ’ ಎಂಬ ಹೆಸರಿನಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ನೋವಿನ ಎಣ್ಣೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಮೂಡುಬಿದಿರೆಯ ಸಂಜೀವಿನಿ ಆಯುರ್ವೇದಿಕ್ ಎಂಬ ಹೆಸರಿನಲ್ಲಿ ಎಕ್ಕಮಾಲೆ ಎಂಬ ನೋವಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೋಹಿದ್ದಿನ್ ಕುನ್ನಿ ಯಾನೆ ಎಂ. ಕೆ. ಗಾರ್ಡಡಿ ಅವರಿಗೆ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ತಡೆಯಾಜ್ಞೆ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ಮಾಡಿದೆ.
ಈ ಕುರಿತಂತೆ ಸುಧಾಕರ್ ಪೂಜಾರಿ ಅವರು ಉಡುಪಿ ನ್ಯಾಯಾಲಯದಲ್ಲಿ ಟ್ರೇಡ್ ಮಾರ್ಕ್ ಕಾನೂನಿನ ಅನ್ವಯ ದಾವೆಯನ್ನು ಹೂಡಿದ್ದರು. ದಾವೆದಾರ ಸುಧಾಕರ್ ಎಂ. ಪೂಜಾರಿ ಪರವಾಗಿ ನ್ಯಾಯಾಲಯದಲ್ಲಿ ಉಡುಪಿಯ ನ್ಯಾಯವಾದಿ ಮಂಜುನಾಥ್ ವಿ. ಹಾಗೂ ನವನೀತ್ ಡಿ. ಹಿಂಗಾಣಿ ವಾದಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.