ಬೀದಿನಾಯಿ ಕಾಟಕ್ಕೆ ಬಣ್ಣದ ಬಾಟಲಿ ಟ್ರಿಕ್!
Team Udayavani, Dec 29, 2017, 6:00 AM IST
ಉಡುಪಿ: ನಿಮ್ಮ ಮನೆ ಅಕ್ಕಪಕ್ಕ ಬೀದಿನಾಯಿ ಕಾಟ ಮಿತಿಮೀರಿದೆಯೇ? ಹಾಗಾದರೆ ಇನ್ನು ಚಿಂತೆ ಬೇಡ. ಬಣ್ಣದ ಬಾಟಲಿ ನೀರು ನಿಮ್ಮ ಕೌಂಪೌಂಡ್‌ನಲ್ಲಿಟ್ಟರೆ ಸಾಕು. ಬೀದಿನಾಯಿ ಕಾಟದಿಂದ ಸಂಪೂರ್ಣ ಮುಕ್ತಿ.
ಪರ್ಕಳ ಶೆಟ್ಟಿಬೆಟ್ಟು ಬೊಬ್ಬರ್ಯ ದೈವಸ್ಥಾನಕ್ಕೆ ಸಮೀಪದ ಅನುಗ್ರಹ ಮನೆಯ ನಿವಾಸಿ ಪುಂಡಲೀಕ ಆಚಾರ್ಯ ಬಣ್ಣದ ಬಾಟಲಿ ತಂತ್ರ ಪ್ರಯೋಗಿಸಿ ಯಶಸ್ಸು ಕಂಡಿದ್ದಾರೆ. ಇವರು ಮಾಡಿದ್ದಿಷ್ಟೇ. ಉಜಾಲಾ ಹಾಕಿದ ಬಣ್ಣದ ನೀರನ್ನು 8-10 ಬಾಟಲಿಯಲ್ಲಿ ಹಾಕಿ ಮನೆ ಕೌಂಪೌಂಡ್ ಮೇಲೆ ಇಟ್ಟಿದ್ದಾರೆ. ಇದರಿಂದ ಬೀದಿನಾಯಿಗಳು ಅತ್ತ ಬರುವುದೇ ಇಲ್ಲವಂತೆ.
ಏನಿದು ಟ್ರಿಕ್?
ಉಜಾಲಾ ಇತ್ಯಾದಿ ಬಣ್ಣವನ್ನು ನೀರಿಗೆ ಮಿಶ್ರಮಾಡಿ ಬಾಟಲಿಗೆ ತುಂಬಿಸಿ ಮನೆ ಸುತ್ತಲೂ ಇಡಬೇಕು. ಇಷ್ಟೇ ದೂರದಲ್ಲಿಡಬೇಕೆಂದೇನಿಲ್ಲ. ಆದರೆ ಹೆಚ್ಚು ಬಾಟಲಿ ಇಟ್ಟಷ್ಟೂ ಉತ್ತಮ ಎಂದು ಪುಂಡಲೀಕರು ಹೇಳುತ್ತಾರೆ.
ಆ ಬೀದಿಗೇ ಬರಲ್ಲ!
ಪುಂಡಲೀಕ ಅವರು ಬಣ್ಣದ ಬಾಟಲಿ ಪ್ರಯೋಗ ಮಾಡಿದ ಬಳಿಕ ಅವರ ಮನೆ ಇರುವ ಬೀದಿಗೆ ನಾಯಿಗಳು ಬಂದಿಲ್ಲ. ಅಷ್ಟೇ ಅಲ್ಲ ಅವುಗಳೀಗ ಬೇರೆ ಬೀದಿಗೆ ಹೋಗಿವೆ. ಇದರಿಂದ ಅನ್ಯ ಬೀದಿಯ ಮನೆಯವರೂ ನೇರಳೆ ಬಣ್ಣದ ಬಾಟಲಿ ಪ್ರಯೋಗ ಮಾಡುವ ಉದ್ದೇಶ ಹೊಂದಿದ್ದಾರೆ.
ನಾಯಿಗೆ ಬಣ್ಣ ಕಂಡರೆ ಏನಾಗುತ್ತದೆ?
ಯಾವುದೇ ಬಣ್ಣಕ್ಕೆ ಶ್ವಾನಗಳು ಹೆದರುವುದಿಲ್ಲ. ಅವುಗಳು ಬಣ್ಣಗಳನ್ನು ಗ್ರಹಿಸುವುದೂ ಇಲ್ಲ. ಆದರೆ ಬಾಟಲಿ ಮತ್ತು ಅದರಲ್ಲಿರುವ ಬಣ್ಣದ ನೀರಿನಿಂದ ಬೆಳಕು ಪ್ರತಿಫಲನವಾಗಿ ಅದರಿಂದ ಹೆದರಿ ಹತ್ತಿರ ಸುಳಿಯದಿರುವ ಸಾಧ್ಯತೆ ಹೆಚ್ಚಿದೆ ಎಂದು ಉಡುಪಿಯ ಪ್ರಾಣಿ ವೈದ್ಯ ಡಾ| ಸಂದೀಪ್ ಅಭಿಪ್ರಾಯಪಟ್ಟಿದ್ದಾರೆ.
ಶೇ.98ರಷ್ಟು ಫಲಿತಾಂಶ
ಶಿವಮೊಗ್ಗದ ಸ್ನೇಹಿತರೊಬ್ಬರು ನೀಡಿದ ಸಲಹೆಯಂತೆ ಉಜಾಲದ ಮೂರ್ನಾಲ್ಕು ಹನಿ ನೀರಿನಲ್ಲಿ ಬೆರೆಸಿ ಬಾಟಲಿಯಲ್ಲಿ ಹಾಕಿ ಮನೆಯ ಕಾಂಪೌಂಡಿನ ಸುತ್ತಮುತ್ತ 1 ತಿಂಗಳಿನಿಂದ ಇಟ್ಟಿದ್ದೇನೆ. ನೀರನ್ನು ಆಗಾಗ್ಗೆ ಬದಲಿಸಬೇಕೆಂದೇನಿಲ್ಲ. ಇದು ಶೇ. 98ರಷ್ಟು ಸಕ್ಸಸ್ ಆಗಿದೆ. ಮನೆಗೆ ಮಾತ್ರವಲ್ಲ ಬೀದಿಯತ್ತಲೂ ನಾಯಿಗಳು ಸುಳಿಯುತ್ತಿಲ್ಲ.
– ಪುಂಡಲೀಕ ಆಚಾರ್ಯ
– ಚೇತನ್ ಪಡುಬಿದ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.