ಬೀದಿ ನಾಯಿಗಳಿಗೆ ಬೀಡಿನಗುಡ್ಡೆಯಲ್ಲಿ ಮುಕ್ತಿ?


Team Udayavani, Apr 13, 2018, 6:15 AM IST

gk3.jpg

ಉಡುಪಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಬಗ್ಗೆ ಸಾರ್ವಜನಿಕ ರಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಲೇ ಇವೆ. ಆದರೆ ಪರಿಹಾರವೆಂಬುದು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ನಾಯಿ ಪಾಲನಾ ಕೇಂದ್ರದ ಬಗ್ಗೆ ಪ್ರಸ್ತಾವನೆಯಾಗಿದೆ.

ಉಡುಪಿ ನಗರ ಮತ್ತು ಆಸುಪಾಸಿನಲ್ಲಿ ರಸ್ತೆ, ಮನೆಗಳ ಆವರಣ, ಶಾಲಾ ಕಾಲೇಜುಗಳ ಮೈದಾನ, ಕಚೇರಿಗಳ ಬಾಗಿಲುಗಳು, ಬಸ್‌ನಿಲ್ದಾಣಗಳ ಒಳಗೆ, ಪುಟ್‌ಪಾತ್‌, ಪಾರ್ಕ್‌ಗಳು ಹೀಗೆ ಎಲ್ಲಡೆ ಬೀದಿನಾಯಿಗಳ ದರ್ಶನವಾಗುತ್ತಿದೆ. ದಾರಿಹೋಕರಿಗೆ, ದ್ವಿಚಕ್ರ ಸವಾರರಿಗೆ ಕಂಟಕವಾಗುತ್ತಿರುವ ಬೀದಿನಾಯಿಗಳ ನಿಯಂತ್ರಣ ಈಗಲೂ ನಗರಸಭೆಗೆ ಸವಾಲಾಗಿದೆ. ನಾಯಿ ಕಚ್ಚಿದ ಪ್ರಕರಣಗಳು ನೇರವಾಗಿ ವರದಿಯಾಗುತ್ತಿಲ್ಲವಾದರೂ ರೇಬಿಸ್‌ನ ಭೀತಿ ಸದಾ ಕಾಡುತ್ತಲೇ ಇದೆ.
 
ಈ ಬಾರಿಯಾದರೂ 
ಪರಿಹಾರ ಸಿಕ್ಕೀತೆ?

ಬೀದಿ ನಾಯಿಗಳನ್ನು ನಿಯಂತ್ರಿಸುವುದು ಹೇಗೆಂಬ ಪ್ರಶ್ನೆಗೆ ಸೂಕ್ತ ಉತ್ತರ ನಗರಸಭೆ ಅಧಿಕಾರಿಗಳು, ಸದಸ್ಯರ ಬಳಿ ಇಲ್ಲ. ಕಳೆದ 5-6 ವರ್ಷಗಳಲ್ಲಿ ನಗರಸಭೆ ನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುತ್ತಿದೆ. ಇದರ ಹೊರತಾಗಿ “ಡಾಗ್‌ ಕೇರ್‌ ಸೆಂಟರ್‌’ (ನಾಯಿ ಪಾಲನಾ ಕೇಂದ್ರ) ಸ್ಥಾಪನೆಯ ಪ್ರಸ್ತಾವನೆ ಕೇಳಿಬಂದಿದೆ. ಬೀದಿನಾಯಿಗಳನ್ನು ಹಿಡಿದು ತಂದು ಈ ಕೇಂದ್ರದಲ್ಲಿ ಸಾಕುವ ಯೋಜನೆ-ಯೋಚನೆ ಇದು. 

ಪ್ರತಿ ವರ್ಷ 4 ಲ.ರೂ. ಖರ್ಚು?
ಈಗ ನಡೆಯುತ್ತಿರುವ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆ್ಯಂಟಿ ರೇಬೀಸ್‌ ಲಸಿಕೆಗೆ ಪ್ರತಿ ವರ್ಷ ನಗರಸಭೆ ಸರಿಸುಮಾರು 4 ಲ.ರೂ.ಗಳಷ್ಟು ಹಣ ಖರ್ಚು ಮಾಡುತ್ತಿದೆ. ಕಳೆದ ವರ್ಷವೂ ಸುಮಾರು 800ರಷ್ಟು ನಾಯಿಗಳಿಗೆ ರೇಬಿಸ್‌ ತಡೆ ಲಸಿಕೆ ನೀಡಲಾಗಿದೆ. “ನಾಯಿಗಳ ಸಮಸ್ಯೆ ಕಡಿಮೆ ಮಾಡುವಲ್ಲಿ ಡಾಗ್‌ಕೇರ್‌ನಂತಹ ಕೇಂದ್ರಗಳು ಪರಿಹಾರವೀದೀತು’ ಎಂಬುದು ಅಧಿಕಾರಿಗಳ ವಿಶ್ವಾಸ. ಆದರೂ ನಗರದ ಅಕ್ಕಪಕ್ಕದಿಂದ ನೂರಾರು ನಾಯಿಗಳು ಬರುತ್ತಿರುತ್ತವೆ. ಹೀಗೆ ಬರುವ ನಾಯಿಗಳದ್ದೂ ಸಮಸ್ಯೆ ಇದೆ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.  

ಎನ್‌ಜಿಒ ಮುಂದೆ ಬಂದಿದೆ
ಎನ್‌ಜಿಒ ಒಂದು  ಡಾಗ್‌ಕೇರ್‌ ಸೆಂಟರ್‌ ಆರಂಭಿಸಲು ಮುಂದೆ ಬಂದಿದೆ. ಇದಕ್ಕೆ ಬೀಡಿನಗುಡ್ಡೆಯಲ್ಲಿ 4-5 ಸೆಂಟ್ಸ್‌ ಜಾಗ ಒದಗಿಸಿಕೊಡುವ ಪ್ರಯತ್ನಗಳನ್ನು ನಡೆಸಲಾಗಿದೆ. ಜಿಲ್ಲಾಧಿಕಾರಿಯವರು ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕಿದೆ. ಇಲ್ಲಿ ಅವರೇ ನಾಯಿ ಪಾಲನೆ ಮಾಡುತ್ತಾರೆ. ಇದರಿಂದ ಸಮಸ್ಯೆ ಬಹುಮಟ್ಟಿಗೆ ನಿವಾರಣೆಯಾಗಬಹುದು. 
– ನಗರಸಭೆ ಅಧಿಕಾರಿಗಳು

ಬೀಡಿನಗುಡ್ಡೆಯಲ್ಲಿ ಜಾಗ
ಸರಕಾರೇತರ ಸೇವಾ ಸಂಸ್ಥೆಯೊಂದು ಉಡುಪಿ ನಗರದ ಆಸುಪಾಸಿನಲ್ಲಿ ಡಾಗ್‌ ಕೇರ್‌ ಸೆಂಟರ್‌ ಸ್ಥಾಪನೆಗೆ ಮುಂದೆ ಬಂದಿದೆ. ಈ ಕುರಿತು ನಗರಸಭೆಯ ಸಭೆಯಲ್ಲಿಯೂ ಪ್ರಸ್ತಾಪವೂ ಆಗಿದೆ. ಬೀಡಿನಗುಡ್ಡೆಯಲ್ಲಿ ಇಂತಹ ಡಾಗ್‌ಕೇರ್‌ ಸೆಂಟರ್‌ ಸ್ಥಾಪಿಸುವ ಕುರಿತು ಮಾತುಗಳು ಕೇಳಿಬಂದಿದೆಯಾದರೂ ಅಂತಿಮ ರೂಪ ಸಿಕ್ಕಿಲ್ಲ. 

ನಗರದಲ್ಲೂ ರೇಬೀಸ್‌ ಇದೆ
ಇತ್ತೀಚೆಗಷ್ಟೆ 2 ಸಾಕು ನಾಯಿಗಳಲ್ಲಿ ರೇಬಿಸ್‌ ಕಂಡುಬಂದು ಅದು ಉಲ್ಬಣ ಗೊಂಡಿತ್ತು. ಅದನ್ನು ಕೊಲ್ಲುವುದು ಅನಿವಾರ್ಯವಾಯಿತು. ಸಾಕುನಾಯಿ ಗಳನ್ನು ಹೊರಗೆ ಬಿಟ್ಟಾಗ ಒಮ್ಮೆ ಹುಚ್ಚುನಾಯಿ ಕಡಿತವಾದರೆ ಮತ್ತೆ ಅದನ್ನು ಉಳಿಸುವುದು ಕಷ್ಟ. ಕಚ್ಚಿದ ಕೂಡಲೇ ಅದಕ್ಕೆ ಚಿಕಿತ್ಸೆ ಆರಂಭಿಸಿದರೆ ಉಳಿಯುವ ಸಾಧ್ಯತೆ ಶೇ.90ರಷ್ಟಿರುತ್ತದೆ. ಆದರೆ ರೇಬೀಸ್‌ನ ಲಕ್ಷಣ ಪತ್ತೆಯಾಗಲೂ ಸುಮಾರು 30-40 ದಿನಗಳು ಬೇಕು. ನಾಯಿಯ ವರ್ತನೆ ಬದಲಾಗುವುದು ಪ್ರಮುಖ ಲಕ್ಷಣ. ನಾಲಗೆ ತಾಮ್ರದ ಬಣ್ಣಕ್ಕೆ ಬರುತ್ತದೆ. ಜೊಲ್ಲು ಸುರಿಸುತ್ತದೆ. ರೇಬಿಸ್‌ ತಡೆ ಲಸಿಕೆ ಅವಧಿ ಒಂದು ವರ್ಷಕ್ಕೆ ಮುಗಿಯುತ್ತದೆ. ಸಂತಾನಹರಣ ಚಿಕಿತ್ಸೆ, ಆ್ಯಂಟಿ ರೇಬೀಸ್‌ ಚಿಕಿತ್ಸೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದೇ ಬೀದಿ ನಾಯಿ ನಿಯಂತ್ರಣಕ್ಕೆ ಸದ್ಯಕ್ಕಿರುವ ಪರಿಹಾರ. 
-ಡಾ| ಡಿ.ವಿ. ಬಿಜೂರು
ಹಿರಿಯ ಪಶುವೈದ್ಯರು, ಉಡುಪಿ 

ಚಿತ್ರ: ಗಣೇಶ್‌ ಕಲ್ಯಾಣಪುರ
– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

byndoor

Malpe: ತೀವ್ರ ಆಸ್ವಸ್ಥಗೊಂಡ ವ್ಯಕ್ತಿ ಸಾವು

byndoor

Udupi: ಸ್ಕೂಟರ್‌ ಢಿಕ್ಕಿ; ಪಾದಚಾರಿಗೆ ಗಾಯ

8

Udupi: ಧೂಳು ತಿನ್ನುತ್ತಿದೆ ಉಡುಪಿ ಉಪ ವಿಭಾಗ ಪ್ರಸ್ತಾವ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.