ಶಿರ್ವ: ಬಿಗು ಬಂದೋಬಸ್ತ್; ಅನಗತ್ಯ ಓಡಾಟದ ವಾಹನ ವಶ
Team Udayavani, May 10, 2021, 12:38 PM IST
ಶಿರ್ವ: ರಾಜ್ಯ ಸರಕಾರ ಸೋಮವಾರದಿಂದ ಘೋಷಿಸಿರುವ ಕಠಿಣ ಲಾಕ್‌ಡೌನ್ ಹಿನ್ನೆಲೆಯಲ್ಲಿ ಶಿರ್ವ ಠಾಣಾ ವ್ಯಾಪ್ತಿಯ ಶಿರ್ವ ಮತ್ತು ಮೂಡುಬೆಳ್ಳೆ ಪರಿಸರದಲ್ಲಿ ಠಾಣಾಧಿಕಾರಿ ಶ್ರೀಶೈಲ ಮುರಗೋಡ ಮತ್ತು ಕ್ರೈಂ ಎಸ್‌ಐ ವೇದಾವತಿ ಅವರ ನೇತೃತ್ವದಲ್ಲಿ ಬಿಗು ಬಂದೋ ಬಸ್ತ್ ಏರ್ಪಡಿಸಲಾಗಿದ್ದು, ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಬ್ಯಾರಿಕೇಡ್ ಅಳವಡಿಸಿ ತಪಾಸಣೆ ನಡೆಸಿ ಕೆಲವು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಮುಂಜಾನೆಯಿಂದಲೇ ಬಿಗು ತಪಾಸಣೆಗೊಳಪಡಿಸಿ ವಾಹನಗಳ ಸಂಚಾರ ನಿಷೇಧಿಸಿದ ಪರಿಣಾಮ ಜನಸಂಚಾರ ಕಡಿಮೆಯಿದ್ದು ವ್ಯಾಪಾರ ವ್ಯವಹಾರ ಕಡಿಮೆಯಿತ್ತು. ಜನರು ಅಗತ್ಯವಸ್ತುಗಳನ್ನು ಹಿಡಿದುಕೊಂಡು ನಡೆದುಕೊಂಡು ಹೋಗುವ ದೃಶ್ಯ ಕಂಡುಬಂದಿದ್ದು, ಎಲ್ಲಿಯೂ ಜನಸಂದಣಿ ಇರಲಿಲ್ಲ. ವಾಹನಗಳ ಸಂಚಾರವಿಲ್ಲದೆ ಶನಿವಾರ, ರವಿವಾರ ಜನಜಂಗುಳಿಯಿಂದ ತುಂಬಿದ್ದ ಪ್ರದೇಶಗಳು ಖಾಲಿಯಾಗಿದ್ದು, ಲಾಕ್‌ಡೌನ್ ಬಹುತೇಕ ಯಶಸ್ವಿಯಾಗಿದೆ.
ಮೆಡಿಕಲ್, ತರಕಾರಿ,ದಿನಸಿ ಮತ್ತಿತರ ಅಗತ್ಯ ಸೇವೆಗಳ ಅಂಗಡಿಗಳು ತೆರೆದಿದ್ದು ಬೆಳಿಗ್ಗೆ 10ರ ಬಳಿಕ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ,ಜನ ವ್ಯವಹಾರ ಮುಗಿಸಿ ಮನೆಗೆ ತೆರಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.