ರಾಜ್ಯದ 300 ಶಾಲೆಗಳಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಯೋಜನೆ
Team Udayavani, Aug 2, 2019, 10:06 AM IST
ಉಡುಪಿ: ಪ್ರೌಢಶಾಲಾ ಮಕ್ಕಳಲ್ಲಿ ಸ್ವಯಂಶಿಸ್ತು ಅಳವಡಿಸಲು ಪ್ರೇರಕವಾಗುವ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸಲು ರಾಜ್ಯ ಸರಕಾರ ಯೋಜಿಸಿದೆ.
ನವ ನಾಗರಿಕ ಸಮಾಜದ ಸುಧಾರಣೆಗೆ ನಾಯಕತ್ವ, ನಾಗರಿಕ ಜ್ಞಾನ, ಕಾನೂನು, ಸ್ವಯಂ ಶಿಸ್ತು, ಧೈರ್ಯ, ಪರಾನುಭೂತಿ, ನೈತಿಕತೆ, ಮೌಲ್ಯ, ಸಾಮಾಜಿಕ ದುಷ್ಪರಿಣಾಮಗಳಿಗೆ ಪ್ರತಿರೋಧದಂತಹ ಸಕಾರಾತ್ಮಕ ಚಿಂತನೆಗಳ ದಾರಿ ತೋರುವ ತರಬೇತಿ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರಕಾರಿ ಶಾಲೆಗಳ 8, 9ನೇ ತರಗತಿ ವಿದ್ಯಾರ್ಥಿಗಳನ್ನು ಯೋಜನೆಗೆ ಸೇರಿಸಿಕೊಳ್ಳಲಾಗುತ್ತಿದೆ. ಮಂಗಳೂರು ಕೆಎಸ್‌ಆರ್‌ಪಿ ಸಿಬಂದಿ ಸಹಕಾರದಲ್ಲಿ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ. ಮಂಗಳೂರಿ ನಲ್ಲಿ 10 ಪಿಸಿ, ಎಚ್‌ಸಿಗಳಿಗೆ ತರಬೇತಿ ನೀಡಿ ಪ್ರತಿ ಶಾಲೆಗೆ ಒಬ್ಬರಂತೆ ತರಬೇತಿ ನೀಡಲು ನಿಯೋಜಿಸಲಾಗಿದೆ. ತಿಂಗಳಲ್ಲಿ 3 ವಾರಗಳಂತೆ ಶನಿವಾರ ಅಪರಾಹ್ನ ಒಳಾಂಗಣ, ಹೊರಾಂಗಣ ಮತ್ತು ಕ್ಷೇತ್ರ ಭೇಟಿ ವಿಷಯಗಳನ್ನು ಬೋಧಿಸಲಾಗು ವುದು. ಕೆಎಸ್‌ಆರ್‌ಪಿ ಕಮಾಂಡೆಂಟ್ ಜನಾರ್ದನ ಆರ್. ಅವರು ದ.ಕ., ಉಡುಪಿ, ಉ.ಕ. ಜಿಲ್ಲೆಗಳ ನೋಡಲ್ ಅಧಿಕಾರಿಯಾಗಿದ್ದಾರೆ.
ದ.ಕ. ಜಿಲ್ಲೆಯ ಶಾಲೆಗಳು
ಮಂಗಳೂರು ಬೈಕಂಪಾಡಿಯ ಕೇಂದ್ರೀಯ ವಿದ್ಯಾಲಯ, ಪುತ್ತೂರು ಕೊಂಬೆಟ್ಟಿನ ಸ.ಪ.ಪೂ. ಕಾಲೇಜು, ಬಂಟ್ವಾಳದ ಮಂಚಿ ಕೊಲಾ°ಡು ಸರಕಾರಿ ಪ್ರೌಢ ಶಾಲೆ, ಕುರ್‍ನಾಡು ಸ.ಪ.ಪೂ. ಕಾಲೇಜು, ಮಂಗಳೂರು ಎಕ್ಕೂರಿನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂಬರ್ 2, ಸುಳ್ಯ ತಾಲೂಕಿನ ಎಲಿಮಲೆ ಸರಕಾರಿ ಪ್ರೌಢಶಾಲೆ, ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಸವಣೂರು ಸ.ಪ.ಪೂ. ಕಾಲೇಜು, ಗುತ್ತಿಗಾರು ಸ.ಪ.ಪೂ. ಕಾಲೇಜು ಮತ್ತು ಮೂಡುಬಿದಿರೆಯ ಅಳಿಯೂರು ಸರಕಾರಿ ಪ್ರೌಢ ಶಾಲೆ.
ಉಡುಪಿ ಜಿಲ್ಲೆಯ ಶಾಲೆಗಳು
ಹೆಬ್ರಿ ಚಾರದ ಜವಾಹರ ನವೋದಯ ವಿದ್ಯಾಲಯ, ಉಡುಪಿ ಅಲೆವೂರು ಪ್ರಗತಿ ನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ, ಗೋಳಿಯಂಗಡಿ ಸರಕಾರಿ ಪ.ಪೂ. ಕಾಲೇಜು, ಆವರ್ಸೆ ಸರಕಾರಿ ಪ್ರೌಢಶಾಲೆ, ಕಾರ್ಕಳ ತಾಲೂಕು ಪೆರ್ವಾಜೆಯ ಸರಕಾರಿ ಪ್ರೌಢ ಶಾಲೆ, ಉಪ್ಪುಂದ ಸ.ಪ.ಪೂ. ಕಾಲೇಜು, ಬಸೂರು ಸರಕಾರಿ ಪ್ರೌಢಶಾಲೆ, ಹಿರಿಯಡಕ ಸರಕಾರಿ ಪ್ರೌಢಶಾಲೆ, ತಲ್ಲೂರು ಸರಕಾರಿ ಪ್ರೌಢಶಾಲೆ ಮತ್ತು ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್.
ನಾಳೆ ಚಾಲನೆ
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಲ್ಪನೆಯನ್ನು ಮೊದಲು ಜಾರಿಗೊಳಿಸಿದ ರಾಜ್ಯ ಕೇರಳ, 2010ರಲ್ಲಿ. ಕಳೆದ ವರ್ಷ ರಾಜ್ಯದ 87 ಶಾಲೆಗಳಲ್ಲಿ ಆರಂಭಿಸಲಾಯಿತು. ಈ ವರ್ಷ ಎಲ್ಲ ಜಿಲ್ಲೆಗಳ 10 ಶಾಲೆಗಳಂತೆ ರಾಜ್ಯದ 300 ಶಾಲೆಗಳಲ್ಲಿ ಕಾರ್ಯಗತಗೊಳಿಸಲಾಗುತ್ತಿದೆ. ಆ. 3ರಂದು ಉಡುಪಿಯ ಮಣಿಪಾಲ ಅಲೆವೂರು ಪ್ರಗತಿನಗರದ ಕೇಂದ್ರೀಯ ವಿದ್ಯಾಲಯದಲ್ಲಿ ಬೆಳಗ್ಗೆ 11.30ಕ್ಕೆ ಮತ್ತು ಮಂಗಳೂರು ಎಕ್ಕೂರು ಕೇಂದ್ರೀಯ ವಿದ್ಯಾಲಯದಲ್ಲಿ ಬೆಳಗ್ಗೆ 10ಕ್ಕೆ ಉದ್ಘಾಟಿಸಲಾಗುತ್ತದೆ. ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಕಲಾಂ ಕಲ್ಪನೆ
ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಲ್ಪನೆ ಮಾಜಿ ರಾಷ್ಟ್ರಪತಿ ಡಾ| ಎಪಿಜೆ ಅಬ್ದುಲ್ ಕಲಾಂ ಅವರದು. ಚಿಕ್ಕ ಮಕ್ಕಳಲ್ಲಿ ಸ್ವಯಂ ಶಿಸ್ತು ಮೂಡಿಸುವುದು, ಭವಿಷ್ಯದ ಉತ್ತಮ ನಾಗರಿಕರನ್ನು ಪ್ರೌಢಶಾಲಾ ಹಂತದಲ್ಲಿಯೇ ಬೆಳೆಸುವುದು ಅವರ ಗುರಿ. ಇದಕ್ಕಾಗಿ ಈ ಬಾರಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ ಹತ್ತು ಸರಕಾರಿ ಶಾಲೆಗಳನ್ನು ಆಯ್ದುಕೊಳ್ಳಲಾಗಿದೆ.
– ಮುರಳಿ ಮತ್ತು ಪ್ರಮೋದ್ ಕುಮಾರ್ ಕೆಎಸ್‌ಆರ್‌ಪಿ ಅಧಿಕಾರಿಗಳು, ಉಡುಪಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.