ವಿದ್ಯಾರ್ಥಿಗಳು ನವಭಾರತ ನಿರ್ಮಿಸಿ: ಅದಮಾರು ಶ್ರೀ
"ವಿಶ್ವ ಬಾಹ್ಯಾಕಾಶ ಸಪ್ತಾಹ': ಇಸ್ರೋ ವಿಜ್ಞಾನಿಗಳಿಂದ ಮಾಹಿತಿ
Team Udayavani, Oct 5, 2019, 4:41 AM IST
ಪಡುಬಿದ್ರಿ: ವಿದ್ಯಾರ್ಥಿಗಳು ವಿಜ್ಞಾನ ಲಾಭವನ್ನು ಅರಿತು ನವಭಾರತ ನಿರ್ಮಾಣದ ಮಹತ್ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪೋಷಕರೂ ತಮ್ಮ ಮಕ್ಕಳು ಕೇವಲ ವೈದ್ಯರು, ಎಂಜಿನಿಯರ್ ಆಗುವಂತಹ ಕನಸು ಕಾಣದೇ ವಿಜ್ಞಾನಿಗಳಾಗಿ ದೇಶ ಸೇವೆ ಮಾಡವತ್ತ ಮಕ್ಕಳನ್ನು ಪ್ರೇರೇಪಿಸ ಬೇಕು ಎಂದು ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹೇಳಿದರು.
ಅವರು ಶುಕ್ರವಾರ ಬೆಂಗಳೂರಿನ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಇಸ್ರೋದ 14 ವಿಜ್ಞಾನಿಗಳ ತಂಡವು ಅದಮಾರು ಪೂರ್ಣಪ್ರಜ್ಞ ಪ. ಪೂ. ಕಾಲೇಜಿಗೆ ಆಗಮಿಸಿ ಅ. 4ರಿಂದ ಅ. 10ರ ವರೆಗೆ ಆಚರಿಸಲ್ಪಡುವ ವಿಶ್ವ ಬಾಹ್ಯಾಕಾಶ ಸಪ್ತಾಹ ಕಾರ್ಯಕ್ರಮದ ಪ್ರಮುಖ ಅಂಗ ಪ್ರೌಢಶಾಲಾ ಮಕ್ಕಳಿಗೆ ಒಂದು ದಿನದ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಸ್ರೋ ನಮ್ಮ ಹೆಮ್ಮೆ
ಮುಖ್ಯಅತಿಥಿಯಾಗಿದ್ದ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ, ಖಗೋಳ ವಿಜ್ಞಾನಿ ಡಾ| ಎ.ಪಿ. ಭಟ್ ಮಾತನಾಡಿ, ಭಾರತೀಯ ಖಗೋಳ ವಿಜ್ಞಾನದ ಮೇರು ವ್ಯಕ್ತಿ ಉಡುಪಿ ರಾಮಚಂದ್ರ ರಾಯರ ಹುಟ್ಟೂರಿಗೆ ಇಸ್ರೋ ವಿಜ್ಞಾನಿಗಳು ಆಗಮಿಸಿರುವುದು ನಮ್ಮ ಹೆಮ್ಮೆ. ಚಂದ್ರಯಾನ 2ರ ಶೇ. 98ರಷ್ಟು ಯಶಸ್ಸಿನಿಂದಾಗಿ ಇಡಿಯ ವಿಶ್ವವೇ ಇಂದು ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳನ್ನು ಅಭಿನಂದಿಸಿದೆ. ಅಂತಹ ಚಂದ್ರಯಾನದ ಯಶಸ್ಸಿನ ಸಹಾಯಕ ನಿರ್ದೇಶಕ ಸುರೇಶ್ ಕುಮಾರ್ ಅದಮಾರಿಗೆ ಬಂದಿ ರುವುದೂ ನಮ್ಮ ಹೆಮ್ಮೆ ಎಂದರು.
ಚಂದ್ರಯಾನ 2ರ ಸಹಾಯಕ ನಿರ್ದೇಶಕ ಎಚ್.ಎನ್. ಸುರೇಶ್ ಕುಮಾರ್ ಮಾತನಾಡಿ, “ಚಂದ್ರ ನಕ್ಷತ್ರಗಳಿಗೆ ಹೆಬ್ಟಾಗಿಲು’ ಆಗಿದ್ದು ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ಇಸ್ರೋ ಸಾಧನೆಗಳು ಹಾಗೂ ಉಪಗ್ರಹಗಳು ಜನಸೇವೆಯಲ್ಲಿ ವಹಿಸುವ ಪಾತ್ರಗಳ ಬಗೆಗೆ ಮಾಹಿತಿ ಕಾರ್ಯಕ್ರಮದಲ್ಲಿ ವಿವರಿಸಲಾಗುವುದೆಂದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ, ನ್ಯಾಯವಾದಿ ಪ್ರದೀಪ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅದಮಾರು ಶಿಕ್ಷಣ ಮಂಡಳಿಯ ಕೋಶಾಧಿಕಾರಿ ಪ್ರವೀಣ್ ಕುಮಾರ್ ಪಿ.ಎಚ್. ಉಪಸ್ಥಿತರಿದ್ದರು.
ಅದಮಾರು ಪೂರ್ಣಪ್ರಜ್ಞ ಪ.ಪೂ. ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಪೈ ಸ್ವಾಗತಿಸಿದರು. ನೀಶಾ ಕಾರ್ಯಕ್ರಮ ನಿರ್ವಹಿಸಿದರು. ಪ್ರಜ್ಞಾ ಶೆಟ್ಟಿ ವಂದಿಸಿದರು. ಉಡುಪಿ ಜಿಲ್ಲೆಯ 32 ವಿವಿಧ ಪ್ರೌಢಶಾಲೆಗಳ 158 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿಜ್ಞಾನಿಗಳೊಂದಿಗೆ ಸಂವಾದ ನಡೆಯಿತು.
ದೂರ ಸಂವೇದಿ ಉಪಗ್ರಹ ವಾಹಕಗಳು, ಚಂದ್ರಯಾನ 2, ಮಂಗಳಯಾನ, ರಿಸೋರ್ಸ್ ಸ್ಯಾಟ್ ಉಪಗ್ರಹಗಳ ಸಹಿತ ವಿವಿಧ ಮಾಡೆಲ್‌ಗಳು, ಇಸ್ರೋ ಸಾಧನೆಗಳು, ಬಾಹ್ಯಾಕಾಶದಲ್ಲಿ ಸಾಧನೆಗಳ ಪಟ್ಟಿ, ಇಸ್ರೋ ಉಡ್ಡಯನದ ಬಳಿಕ ಅಂತರಿಕ್ಷದಲ್ಲಿ ನಮಗಿಂದು ವಿಶ್ವದ ಬೇರೆ ಬೇರೆ ದೇಶಗಳ ಟಿವಿ ಚಾನಲ್‌ಗಳನ್ನು ನೋಡಲು ಅನುಕೂಲವಾಗುವ, ಹವಾಮಾನದ ಕುರಿತಾಗಿ ಮಾಹಿತಿ ನೀಡುವ, ಕೃಷಿ ಸಂಬಂಧಿ ಮಾಹಿತಿಯನ್ನು ನೀಡುವ ಬೇರೆ, ಬೇರೆ ಉಪಗ್ರಹಗಳ ಪಟ್ಟಿಯನ್ನು ವೀಕ್ಷಿಸಿದ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.