ಶಾಲೆಯಿಂದ ಹೊರಗುಳಿದ ಮಕ್ಕಳು: ಉಡುಪಿಗೆ 8, ದ.ಕ.ಕ್ಕೆ 27ನೇ ಸ್ಥಾನ!
Team Udayavani, Nov 28, 2019, 6:15 AM IST
ಸಾಂದರ್ಭಿಕ ಚಿತ್ರ
ಉಡುಪಿ: ವಿದ್ಯಾರ್ಥಿಗಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ರಾಜ್ಯದಲ್ಲಿ 56,739 ಮತ್ತು ಅವಿಭಜಿತ ದ.ಕ. ಜಿಲ್ಲೆಯಲ್ಲಿ 3,128 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. 2018-19ನೇ ಸಾಲಿನಲ್ಲಿ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ. ಸಮೀಕ್ಷೆಯ ಮಾಹಿತಿಯಂತೆ, ರಾಜ್ಯ ಮಟ್ಟದಲ್ಲಿ ಅತೀ ಕಡಿಮೆ ಮಕ್ಕಳು ಶಾಲೆಯಿಂದ ಹೊರಗುಳಿದ ಪಟ್ಟಿಯಲ್ಲಿ ಬೆಂಗಳೂರು (ಉತ್ತರ) ಪ್ರಥಮ ಸ್ಥಾನ ಮತ್ತು ಯಾದಗಿರಿ ಜಿಲ್ಲೆ ಕೊನೆಯ ಸ್ಥಾನ ಪಡೆದುಕೊಂಡಿವೆ.
ಉಡುಪಿಗೆ 8ನೇ ಸ್ಥಾನ
ಪಟ್ಟಿಯಲ್ಲಿ ಉಡುಪಿ 8ನೇ ಸ್ಥಾನದಲ್ಲಿದೆ. ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 681 ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಕಡ್ಡಾಯ ಶಿಕ್ಷಣ ವ್ಯಾಪ್ತಿಗೆ ಒಳಪಡುವ (6ರಿಂದ 13 ವರ್ಷ) 112 ಮಕ್ಕಳು ಹೊರಗುಳಿದಿದ್ದರೆ, 14-15ರ ವಯೋಮಿತಿಯ 435 ಮತ್ತು 16-17ರ 134 ಮಕ್ಕಳು ಶಿಕ್ಷಣ ತೊರೆದಿದ್ದಾರೆ. ಈ ಸಾಲಿನಲ್ಲಿ ಶಿಕ್ಷಣಾಧಿಕಾರಿಗಳು, ಶಿಕ್ಷಕರು ಶಾಲೆಗೆ ಬಾರದ 681ರಲ್ಲಿ 142 ಮಕ್ಕಳನ್ನು ಶಾಲೆಗೆ ಮತ್ತೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದ.ಕ.ಕ್ಕೆ 27ನೇ ಸ್ಥಾನ
ದ.ಕ. ಜಿಲ್ಲೆಯಲ್ಲಿ ಇಂಥ 2,448 ಮಕ್ಕಳಿದ್ದಾರೆ. ರಾಜ್ಯ ವಾರು ಪಟ್ಟಿಯಲ್ಲಿ ದ.ಕ. 27ನೇ ಸ್ಥಾನ ಪಡೆದಿದೆ.
ಹೊರಗುಳಿಯುವುದು ಎಂದರೇನು?
1ರಿಂದ 10ನೇ ತರಗತಿಯ ವಿದ್ಯಾರ್ಥಿ 7 ದಿನ ಗೈರು ಹಾಜರಾದರೆ ಮುಖ್ಯ ಶಿಕ್ಷಕರು ಅವನನ್ನು ಮರಳಿ ಕರೆತರುವ ಪ್ರಯತ್ನ ಮಾಡಬೇಕು. ಇಷ್ಟಾದರೂ ಬಾರದೆ ಹೋದರೆ ಆ ಮಗುವನ್ನು “ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿ’ ಎಂದು ಪರಿಗಣಿಸಲಾಗುತ್ತದೆ.
ಶಾಲೆ ಬಿಡಲು ಕಾರಣ
ಉಡುಪಿಯಲ್ಲಿ ವಲಸೆಯ ಕಾರಣಕ್ಕೆ ಹೆಚ್ಚಿನ ಮಕ್ಕಳು ಶಾಲೆ ಬಿಟ್ಟಿದ್ದಾರೆ. ನಿರಾಸಕ್ತಿ, ಅನಾರೋಗ್ಯ ಶಾಲೆ ಬಿಡಲು ಮುಖ್ಯ ಕಾರಣ. ಋತುಮತಿಯಾಗಿರುವ ಕಾರಣಕ್ಕೆ ಬಾಲಕಿಯರನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕಿರುವ ಪ್ರಕರಣವೂ ದಾಖಲಾಗಿದೆ.
ವಲಸೆ ಕುಟುಂಬಗಳ ಮಕ್ಕಳು ಮಾಹಿತಿ ನೀಡದೆ ಶಾಲೆ ಬಿಡುತ್ತಾರೆ. ತ್ಯಜಿಸಿದ ಮಕ್ಕಳನ್ನು ಮರಳಿ ಕರೆತರಲು ಅಗತ್ಯ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶಾಲೆಯಿಂದ ಹೊರಗುಳಿದಿದ್ದ ಮಕ್ಕಳ ಸಂಖ್ಯೆ ಕಡಿಮೆ.
– ಶೇಷಶಯನ ಕಾರಿಂಜ, ಉಪ ನಿರ್ದೇಶಕ, ಸಾ. ಶಿಕ್ಷಣ ಇಲಾಖೆ, ಉಡುಪಿ
- ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.