ಅಧ್ಯಯನಕ್ಕಾಗಿ ಗದ್ದೆಗಿಳಿದ ಮಾಹೆ ವಿದ್ಯಾರ್ಥಿಗಳು
Team Udayavani, Oct 18, 2018, 12:26 PM IST
ಕಟಪಾಡಿ: ಮಟ್ಟುಗುಳ್ಳದ ಮಾರ್ಕೆಟಿಂಗ್ ಸ್ಪೆಶಲೈಸೇಶನ್ ಅಧ್ಯಯನಕ್ಕಾಗಿ ಮಾಹೆಯ ಸೆಂಟರ್ ಫಾರ್ ಕನ್ಸಲ್ಟೆನ್ಸಿ ಟ್ರೈನಿಂಗ್, ಕಾರ್ಪರೇಟ್ ಇಂಟರ್‌ಫೇಸ್ ಡಿಪಾರ್ಟ್‌ಮೆಂಟ್ ಆಫ್ ಕಾಮರ್ಸ್ ಇದರ ವಿದ್ಯಾರ್ಥಿಗಳ ತಂಡವು ಅಧ್ಯಯನ ಕ್ಷೇತ್ರ ಪ್ರವಾಸದನ್ವಯ ಕಟಪಾಡಿ ಬಳಿಯ ಮಟ್ಟುವಿಗೆ ಬುಧವಾರ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಟ್ಟುಗುಳ್ಳದ ಗದ್ದೆಗಿಳಿದ ವಿದ್ಯಾರ್ಥಿಗಳ ತಂಡವು ಮಾರ್ಗದರ್ಶಕರಲ್ಲಿ ಮತ್ತು ಬೆಳೆಗಾರರಲ್ಲಿ ಮಟ್ಟುಗುಳ್ಳವು ಪಡೆದಿರುವ ಜಿ.ಐ. ಮಾನ್ಯತೆ, ರಫ್ತಾಗುವ ಮಾರುಕಟ್ಟೆ, ಗ್ರಾಮೀಣ ಮಾರುಕಟ್ಟೆ, ಬ್ರಾಂಡಿಂಗ್, ಗ್ರೇಡಿಂಗ್, ಮಾರುಕಟ್ಟೆ ಸ್ಟ್ರಾ ಟಜಿ, ಬೀಜ ತಯಾರಿ, ಬಿತ್ತನೆ, ಗಿಡ ತಯಾರಿ, ಬೆಳೆಸುವ ವಿಧಾನ, ನಾಟಿ, ಮಾರುಕಟ್ಟೆಗೆ ದರ ನಿಗದಿ, ಪ್ರಮೋಶನ್, ಲೇಬಲಿಂಗ್, ಮಟ್ಟುಗುಳ್ಳಕ್ಕಿರುವ ಕಲ್ಚರಲ್ ಹೆರಿಟೇಜ್ ಸಹಿತ ಮಟ್ಟುಗುಳ್ಳದ ಬೆಳೆ ಮತ್ತು ಮಾರುಕಟ್ಟೆಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದರು.
ಬಿಬಿಎ ಮಾರ್ಕೆಟಿಂಗ್ ವಿಭಾಗದ ಬಿ.ಕಾಂ. ಬಿಪಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳ ತಂಡದಲ್ಲಿ ನೆದರ್ ಲ್ಯಾಂಡ್ ದೇಶದ ವಿದ್ಯಾರ್ಥಿಗಳೂ ಅಧ್ಯಯನಶೀಲರಾಗಿದ್ದರು. ತಂಡದ ಪ್ರಮುಖರಾಗಿ ಮಟ್ಟು ಗುಳ್ಳದ ಬಗ್ಗೆ ಪಿ.ಹೆಚ್.ಡಿ. ನಡೆಸಿರುವ ಮಾಹೆಯ ಡಾ|ವಿಕ್ರಮ್ ಬಾಳಿಗ, ಪ್ರವೀಣ್ ಕುಮಾರ್, ಮಟ್ಟುಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಲಕ್ಷ್ಮಣ್ ಮಟ್ಟು, ಮಟ್ಟುಗುಳ್ಳ ಬೆಳೆಗಾರ ಜೋಸೆಫ್ ಮೊಂತೆರೋ ಮಾರ್ಗದರ್ಶನ ನೀಡಿದ್ದರು.
ಕುತೂಹಲಕಾರಿ ಅಂಶ
ಗ್ರಾಮೀಣ ಭಾಗದ ಬೆಳೆಗಾರರ ಬಗ್ಗೆ ಅಧ್ಯಯನಕ್ಕೆ ಅವಕಾಶ ಲಭಿಸಿತು. ಬಹು ಬೇಡಿಕೆಯುಳ್ಳ ಮಟ್ಟುಗುಳ್ಳದ ಮಾರುಕಟ್ಟೆ ಪದ್ಧತಿ ಬಗ್ಗೆ, ಜಿಯೋಗ್ರಾಫಿಕಲ್ ಐಡೆಂಟಿμಕೇಶನ್ ಪಡೆದ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಸ್ಥಳೀಯ ಮಾರುಕಟ್ಟೆ, ರಫ್ತು ಬಗ್ಗೆ ತಿಳಿದುಕೊಳ್ಳಲಾಯಿತು. ಪ್ರಾಡಕ್ಟ್, ಪ್ರೈಸ್, ಪ್ರೊಮೋಶನ್, ಪ್ಲೇಸಸ್ ಬಗ್ಗೆ ಸಮಗ್ರ ವಿಷಯಗಳನ್ನು ಅಧ್ಯಯನ ನಡೆಸಿದ್ದು, ಇಲ್ಲಿನ ಮಣ್ಣಿನ ಗುಣದಿಂದ ಪಡೆದಿರುವ ಸ್ವಾದದ ಬಗ್ಗೆ ಕುತೂಹಲಕಾರಿ ಅಂಶ ಗ್ರಹಿಸಿಕೊಂಡಿರುವೆನು.
–ತನುಶ್ರೀ ಶಿವರಾಮ್, ಬೆಂಗಳೂರು
ಹೆಸರುವಾಸಿ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಮಟ್ಟುಗುಳ್ಳದ ಬಿತ್ತನೆ ಬೀಜದಿಂದ ಬೆಳೆ ಬೆಳೆಯುವ ಬಗ್ಗೆ ಮಾಹಿತಿ ಲಭ್ಯವಾಯಿತು. ಇಲ್ಲಿನ ಬೆಳೆಗಾರರ ಸಂಘದ ಮುಖಾಂತರ ನಡೆಸುವ ಮಾರುಕಟ್ಟೆ ವಿಧಾನದ ಬಗ್ಗೆ ಪರಿಶೀಲಿಸಲಾಯಿತು. ಬೆಳೆಗಾರರು ಸ್ವಂತವಾಗಿ ಅಭಿವೃದ್ಧಿ ಹೊಂದುವ ರೀತಿಯ ಬಗ್ಗೆ ಅಧ್ಯಯನ ನಡೆಸಲಾಯಿತು.
– ಆಕಾಶ್ ಎಂ. ನಥಾನಿ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
KLE Technological University: ಮುರುಗೇಶ್ ನಿರಾಣಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!
Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್!
Kiran Raj: ಸೂಪರ್ ಹೀರೋ ಆಗಲಿದ್ದಾರೆ ಕಿರಣ್ ರಾಜ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.