“ಗ್ರಾಮೀಣ ಬದುಕು ಭಾವನೆಗಳ ಅಧ್ಯಯನ ಅಗತ್ಯ’
Team Udayavani, Jul 10, 2017, 3:05 AM IST
ತೆಕ್ಕಟ್ಟೆ (ಕನ್ನುಕೆರೆ): ಮುಂದುವರಿದ ಆಧುನಿಕತೆ ನಡುವೆ ಮರೆಯಾಗುತ್ತಿರುವ ನಮ್ಮ ಮೂಲ ಗ್ರಾಮೀಣ ಸಂಸ್ಕೃತಿಗಳನ್ನು ಪ್ರೋತ್ಸಾಹಿಸುವ ಜೊತೆಗೆ ಗ್ರಾಮೀಣ ಬದುಕು ಭಾವನೆಗಳನ್ನು ಅರಿತು ಅವರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಮಹತ್ತರ ಕಾರ್ಯ ನಮ್ಮಂತಹ ಸಂಘ ಸಂಸ್ಥೆಗಳಿಂದಾಗಬೇಕಾಗಿದೆ ಈ ನಿಟ್ಟಿನಲ್ಲಿ ಚಿಂತನೆ ಅಗತ್ಯ ಎಂದು ತೆಕ್ಕಟ್ಟೆ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಸುರೇಶ್ ಬೇಳೂರು ಹೇಳಿದರು.
ಅವರು ಜು. 7ರಂದು ತೆಕ್ಕಟ್ಟೆ ಕನ್ನುಕೆರೆ ಶ್ರೀ ನವಶಕ್ತಿ ಕಲ್ಯಾಣ ಮಂಟಪದಲ್ಲಿ ತೆಕ್ಕಟ್ಟೆ ರೋಟರಿ ಕ್ಲಬ್‌ನಲ್ಲಿ ನಡೆದ ನಮ್ಮ ಚಿತ್ತ ಗ್ರಾಮದತ್ತ ಎನ್ನುವ ಮುಂದಿನ ಕಾರ್ಯಯೋಜನೆಯ ಕುರಿತಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬೇಳೂರು ಸ್ಫೂರ್ತಿಧಾಮದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ| ಕೇಶವ ಕೋಟೇಶ್ವರ ಮಾತನಾಡಿ ಸಮಾಜದಲ್ಲಿ ನಮ್ಮ ಗುರುತನ್ನು ನಮ್ಮ ಕರ್ತವ್ಯದ ಮೂಲಕವೇ ಸಾಧನೆ ಮಾಡಿ ತೋರಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಜನಪರ ಕಾಳಜಿಯಿಂದ ಸಮಾಜದ ಪ್ರತಿಯೊಬ್ಬರ ಅಭಿಪ್ರಾಯಗಳಿಗೆ ಪೂರಕವಾಗಿ ಕಾರ್ಯ ಯೋಜನೆ ಗಳನ್ನು ರೂಪಿಸಿದಾಗ ಮಾತ್ರ ಸಂಸ್ಥೆಗಳು ಪರಿಣಾಮಕಾರಿಯಾಗಿ ಸಂಘಟನೆ ಯಲ್ಲಿ ತೊಡಗಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಪ್ರೀತಿ ಜುವೆಲ್ಲರ್ ನ ಮಾಲೀಕ ಎಂ.ಶ್ರೀಧರ ಆಚಾರ್ಯ, ಕಾರ್ಯದರ್ಶಿ ಜಗದೀಶ್ ರಾವ್ ಹಾಗೂ ರೋಟರಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.