ಉಪನೋಂದಾವಣೆ ನೌಕರರ ವರ್ಗಾವಣೆ: ಪ್ರತಿಭಟನೆ
Team Udayavani, Apr 28, 2017, 12:18 PM IST
ಬ್ರಹ್ಮಾವರ: ಉಪ ನೊಂದಾವಣೆ ಕಚೇರಿಗಳಲ್ಲಿರುವ ಗುತ್ತಿಗೆ ಆದಾರಿತ ಸಿಬಂದಿಗಳ ವರ್ಗಾ ವಣೆಯನ್ನು ಖಂಡಿಸಿ ಗುರುವಾರ ಬ್ರಹ್ಮಾವರ ಉಪ ನೊಂದಾವಣಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಉಪನೊಂದಾವಣಾಧಿಕಾರಿ ಕಚೇರಿ ಯಲ್ಲಿರುವ ತಾತ್ಕಾಲಿಕ ಸಿಬಂದಿಗಳನ್ನು ವರ್ಗಾಯಿಸಿ ಕಂದಾಯ ಸಚಿವರು ಗುರುವಾರ ಬೆಳಗ್ಗೆ ದಿಢೀರ್ ಆದೇಶ ಹೊರಡಿಸಿದ್ದರು. ಅದರಂತೆ ಉಡುಪಿ ಜಿಲ್ಲೆಯ ಬ್ರಹ್ಮಾವರ, ಕಾರ್ಕಳ, ಶಂಕರನಾರಾಯಣ, ಬೈಂದೂರು ಮತ್ತಿತರರ ಉಪನೊಂದಾವಣಾಧಿಕಾರಿ ಕಚೇರಿಗಳ ತಾತ್ಕಾಲಿಕ ಸಿಬಂದಿಗಳನ್ನು ಪರಸ್ಪರ ವರ್ಗಾವಣೆ ಮಾಡಲಾಯಿತು.
ಉಡುಪಿ ಜಿ.ಪಂ. ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ ಅವರು ಮಾತನಾಡಿ, ಆಯಾ ಉಪನೊಂದಾ ವಣಾಧಿಕಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸು ತ್ತಿರುವವರು ಪರಿಸರದವರಾಗಿದ್ದಾರೆ. ಕಡಿಮೆ ವೇತನದೊಂದಿಗೆ ಕರ್ತವ್ಯ ನಿರ್ವಹಿಸುತ್ತಿರುವ ಅವರನ್ನು ದೂರ ದೂರದ ಕಡೆಗೆ ವರ್ಗಾಯಿಸಿರುವುದು ತೀರಾ ಅನ್ಯಾಯ. ಆದೇಶವನ್ನು ಶೀಘ್ರ ಹಿಂಪಡೆಯಬೇಕೆಂದು ಆಗ್ರಹಿಸಿದರು.
ತಾ.ಪಂ. ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ಪ್ರಮುಖರಾದ ಜ್ಞಾನವಸಂತ ಶೆಟ್ಟಿ, ಆಲ್ವಿನ್ ಅಂದ್ರಾದೆ, ರವಿಪ್ರಕಾಶ್ ಗೋನ್ಸಾಲ್ವಿಸ್, ಮನೋಹರ ಶೆಟ್ಟಿ, ಲಕ್ಷ್ಮಣ ಶೆಟ್ಟಿ, ಸದಾನಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
Hunsur: ಬಸ್ ಡಿಕ್ಕಿಯಾಗಿ ಪಾದಾಚಾರಿ ಸಾವು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Meena Ganesh: ಮಲಯಾಳಂನ ಹಿರಿಯ ನಟಿ ಮೀನಾ ಗಣೇಶ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.