ಸಾಧಿಸುವ ಛಲವೇ ಯಶಸ್ಸಿನ ಗುಟ್ಟು
Team Udayavani, Feb 18, 2019, 1:00 AM IST
ಉಡುಪಿ: ಆಕೆ ನಕ್ಕರೆ ಹಾಲು ಬೆಳದಿಂಗಳು. ಮಾತು ಅರಳು ಹುರಿದಂತೆ. ಈಕೆ ಮಿಸೆಸ್ ಸೌತ್ ಇಂಡಿಯಾ 2019, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಉಡುಪಿ ಮೂಲದ ಡಾ| ಪದ್ಮಾ ಗಡಿಯಾರ್. ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆ ತೋರಿದ ಇವರು ಆ.1ರಿಂದ 7ರ ವರೆಗೆ ಮೆಕ್ಸಿಕೋದಲ್ಲಿ ನಡೆಯಲಿರುವ “ಮಿಸೆಸ್ ಯೂನಿವರ್ಸ್’ ಸ್ಪರ್ಧೆಗೆ ತಯಾರಿ ನಡೆಸುತ್ತಿದ್ದಾರೆ.
ಗುರುವಾರ ಉಡುಪಿಗೆ ಆಗಮಿಸಿದ ಇವರೊಂದಿಗೆ “ಉದಯವಾಣಿ’ ನಡೆಸಿದ ಕಿರು ಸಂದರ್ಶನವಿದು.
– ಮಾಡೆಲಿಂಗ್ ಕ್ಷೇತ್ರಕ್ಕೆ ಪಾದಾರ್ಪಣೆ ಹೇಗಾಯಿತು?
ಚಿಕ್ಕಂದಿನಲ್ಲೇ ಆಸಕ್ತಿ ಇತ್ತು. ಮದುವೆಯ ಅನಂತರ ಇದಕ್ಕೆ ಸಹಕಾರ ಸಿಕ್ಕಿತು. ಬರೀ ಆಕಾಶಕ್ಕೆ ಲಗ್ಗೆಯಿಡುವ ಕನಸು ಕಾಣಬಾರದು. ಅದಕ್ಕಿಂತ ದೂರವಿರುವ ನಕ್ಷತ್ರವನ್ನು ನಮ್ಮದಾಗಿಸುವ ಕನಸು ಕಾಣಬೇಕು. ಇದೇ ನನ್ನ ಯಶಸ್ಸಿಗೆ ಕಾರಣ.
– ಮಾಡೆಲಿಂಗ್ ಕ್ಷೇತ್ರದಲ್ಲಿ ಮೈಬಣ್ಣವೇ ಮುಖ್ಯ ಎಂದು ನಿಮಗೆ ಅನಿಸುತ್ತಾ?
ಖಂಡಿತ ಇಲ್ಲ. ಸೌಂದರ್ಯವನ್ನು ಕೇವಲ ಮೈಬಣ್ಣದಿಂದ ಅಳೆಯಲು ಸಾಧ್ಯವಿಲ್ಲ. ಕಪ್ಪು ಬಣ್ಣದ ರೂಪದರ್ಶಿಯರು ಕೂಡ ಮಾಡೆಲಿಂಗ್ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ.
– ಈ ಕ್ಷೇತ್ರದಲ್ಲಿ ನೀವು ತುಂಬಾ ಒತ್ತಡ ಎದುರಿಸಿದ್ದೀರಾ?
ಅತಿ ಒತ್ತಡ ನಾನು ಎದುರಿಸಿಲ್ಲ. ಈ ಕ್ಷೇತ್ರದಲ್ಲಿ ತುಂಬಾ ಸ್ಪರ್ಧೆಯಿದೆ ನಿಜ. ಮಾಡೆಲಿಂಗ್‌ನ ಆರಂಭದ ದಿನಗಳಲ್ಲಿ ನಾನೂ ಕಷ್ಟಪಟ್ಟಿದ್ದೇನೆ. ನನಗೆ ಪ್ರೋತ್ಸಾಹ ನೀಡಿದ್ದು ನನ್ನ ಪತಿ ಹಾಗೂ ಸಹೋದರಿ.
– ಮಹಿಳಾ ಸಶಕ್ತೀಕರಣಕ್ಕೆ ನಿಮ್ಮ ನಡೆ ಏನು?
ಮಹಿಳೆಯರು ಮನಸ್ಸು ಮಾಡಿದರೆ ಜಗವನ್ನೇ ಗೆಲ್ಲಬಹುದು. ಮಹಿಳೆಯರು ಬಹುಮುಖ ಪ್ರತಿಭಾನ್ವಿತರು. ಅವರಿಗೆ ಹಲವಾರು ಕೆಲಸಗಳನ್ನು ಒಂದೇ ಸಲ ಮಾಡುವ ಸಾಮರ್ಥ್ಯ ಇದೆ. ಕುಟುಂಬ ನೋಡುವುದರೊಂದಿಗೆ ಸಂಪಾದನೆಯನ್ನೂ ಮಾಡಬಲ್ಲರು.
– ನಿಮ್ಮ ಸೌಂದರ್ಯದ ರಹಸ್ಯವೇನು?
ಪ್ರತೀದಿನ ಒಂದರಿಂದ ಒಂದೂವರೆ ಗಂಟೆಗಳ ಕಾಲ ವ್ಯಾಯಾಮ ಮಾಡುತ್ತೇನೆ. ಅಲ್ಲದೆ ಜಿಮ್, ಆಹಾರ ಪಥ್ಯ ಕೂಡ ಮಾಡುತ್ತಿದ್ದೇನೆ.
– ಮಹಿಳೆಯರು ಸಮಯ ಹೊಂದಿಸು ವುದು ಹೇಗೆ?
ಮಹಿಳೆಯರಿಗೆ ಸಮಯ, ಶಕ್ತಿ, ಶಿಸ್ತು, ಧೈರ್ಯ, ದೃಢ ನಿರ್ಧಾರ ಅತೀ ಅಗತ್ಯ. ಸಾಧನೆ ಮಾಡುವ ಛಲ ಮನಸ್ಸಿನಲ್ಲಿ ಹೊಂದಬೇಕು. ಇಂತಹ ಮಹಿಳೆಯರಿಗೆ ಪ್ರೋತ್ಸಾಹವೂ ಬೇಕು.
– ಪ್ರೋತ್ಸಾಹವೆಂದರೆ ಯಾವ ರೀತಿಯದ್ದು?
ಇಂದು ಮಹಿಳೆಯರು ಹಲವಾರು ಕ್ಷೇತ್ರಗಳಲ್ಲಿ ಶ್ರಮಪಟ್ಟು ದುಡಿಯುತ್ತಿದ್ದಾರೆ. ಕುಟುಂಬ, ಖಾಸಗಿ ಜೀವನವನ್ನು ಸರಿದೂಗಿಸಿಕೊಂಡು ಜೀವನ ಸಾಗಿಸುತ್ತಾರೆ. ಇವರಿಗೆ ಮನೆಯವರ, ಗಂಡನ ಪ್ರೋತ್ಸಾಹ ಸಿಗಬೇಕು. ಬಹುತೇಕರು ಇಂತಹ ಸ್ಪರ್ಧೆಗಳಿಗೆ ಹೋಗಲು ಹಿಂಜರಿಯುತ್ತಾರೆ. ಇಂತಹ ಕೀಳರಿಮೆ ಬಿಟ್ಟರೆ ಯಶಸ್ಸು ನಮ್ಮದಾಗುತ್ತದೆ.
– ಸಿನೆಮಾದಲ್ಲಿ ನಟಿಸುವ ಯೋಚನೆ ಇದೆಯೇ?
ಖಂಡಿತ ಇದೆ. ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಒಳ್ಳೆಯ ಕಥೆ, ನಿರ್ದೇಶಕರು, ನಟರು ಸಿಕ್ಕಿದರೆ ನಟಿಸುತ್ತೇನೆ. ಸ್ಯಾಂಡಲ್‌ವುಡ್ ಮಾತ್ರವಲ್ಲದೆ ಬಾಲಿವುಡ್ ಮತ್ತು ಹಾಲಿವುಡ್‌ನಲ್ಲೂ ನಟಿಸಲು ಸಿದ್ಧಳಿದ್ದೇನೆ. ಪ್ರಸ್ತುತ ದಂತ ವೈದ್ಯರು ಸೇರಿದಂತೆ ವೈದ್ಯರಿಗಾಗಿ ಪುಸ್ತಕವನ್ನು ಬರೆಯುತ್ತಿದ್ದೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗೀತಾರ್ಥ ಚಿಂತನೆ-130: “ನಂದಲ್ಲ, ನಂದಲ್ಲ’ ಎಂಬ ನಿರಂತರ ಅನುಸಂಧಾನ ಮುಖ್ಯ
Buntakal Technical College: ಅಂತಾರಾಷ್ಟ್ರೀಯ ಸಮ್ಮೇಳನ ;ವಿದ್ಯಾರ್ಥಿ ವಿಚಾರ ಸಂಕಿರಣ
CT Ravi ಬಂಧನ ಪ್ರಕರಣ; ಗೃಹ ಸಚಿವರು ಸ್ಪಷ್ಟನೆ ನೀಡಲಿ: ಕೋಟ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Udupi: ಬಾಲಕಿಗೆ ಲೈಂಗಿಕ ಕಿರುಕುಳ ಆರೋಪ ಸಾಬೀತು; ಆರೋಪಿಗೆ 20 ವರ್ಷ ಜೈಲು ಶಿಕ್ಷೆ ಪ್ರಕಟ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.