ಯಶಸ್ವಿ ಮತದಾನ ಮುಗಿಸಿದ ಸಂತೃಪ್ತಿ
Team Udayavani, May 13, 2018, 9:21 AM IST
ಉಡುಪಿ: “ಒಂದು ಕೈಯಲ್ಲಿ ಮತಯಂತ್ರ ಬಾಕ್ಸ್, ಇನ್ನೊಂದು ಕೈಯಲ್ಲಿ ದಾಖಲೆಪತ್ರಗಳು ಮತ್ತು ಮತಗಟ್ಟೆಯಲ್ಲಿ ಬಳಸಿದ ಇತರ ಪರಿಕರಗಳು… ಮಸ್ಟರಿಂಗ್ ಕೇಂದ್ರಕ್ಕೆ ಬಂದು ಮತಯಂತ್ರಗಳನ್ನು ಒಪ್ಪಿಸಿ ದಾಖಲೆಗಳನ್ನು ನೀಡಿ ಸಹಿ ಹಾಕಿ ಮನೆ ಕಡೆಗೆ ತೆರಳುವ ಧಾವಂತ.
ಮತದಾನವನ್ನು ಯಶಸ್ವಿಯಾಗಿ ಮುಗಿಸಿದ ಸಾವಿರಾರು ಮಂದಿ ಸಿಬಂದಿ ಮೇ 12ರ ರಾತ್ರಿ ಉಡುಪಿ ಮತ್ತು ಕಾಪು ಕ್ಷೇತ್ರಗಳ ಮಸ್ಟರಿಂಗ್ ಕೇಂದ್ರವಾದ ಉಡುಪಿ ಸೈಂಟ್ ಸಿಸಿಲೀಸ್ ಆಂಗ್ಲಮಾಧ್ಯಮ ಶಾಲೆಗೆ ವಾಪಸಾದರು. ಇದೇ ರೀತಿ ಕುಂದಾಪುರ ಮತ್ತು ಕಾರ್ಕಳ ತಾಲೂಕಿನ ಮಸ್ಟರಿಂಗ್ ಕೇಂದ್ರಕ್ಕೂ ತರಲಾಯಿತು. ಇಲ್ಲಿಂದ ಮತಯಂತ್ರಗಳನ್ನು ತಡರಾತ್ರಿ ವೇಳೆಗೆ ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರವಾದ ಉಡುಪಿ ಕುಂಜಿಬೆಟ್ಟು ಟಿ.ಎ.ಪೈ ಆಂಗ್ಲಮಾಧ್ಯಮ ಶಾಲೆಗೆ ಕೊಂಡೊಯ್ಯಲಾಯಿತು. ಕುಂದಾಪುರ, ಬೈಂದೂರು, ಕಾರ್ಕಳ ಕಡೆಗೆ ತೆರಳುವ ಸಿಬಂದಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ 9.30ರ ವೇಳೆಗೆ ಹೆಚ್ಚಿನ ಸಿಬಂದಿ ಮಸ್ಟರಿಂಗ್ ಕೇಂದ್ರದಿಂದ ನಿರ್ಗಮಿಸಿದರು.
ಯಶಸ್ಸಿನ ಸಂತೃಪ್ತಿ
ಕಳೆದೆರಡು ದಿನಗಳಿಂದ ಮತದಾನ ಪ್ರಕ್ರಿಯೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದ ಸಿಬಂದಿ ಮತ್ತು ಅಧಿಕಾರಿಗಳು ಮತಯಂತ್ರಗಳನ್ನು ಮಸ್ಟರಿಂಗ್ ಕೇಂದ್ರಕ್ಕೆ ವಾಪಸು ನೀಡುವಾಗ ನಿಟ್ಟುಸಿರುಬಿಡುವ ಸ್ಥಿತಿಯಲ್ಲಿದ್ದರು. ಮಂಗಳೂರು, ಬೈಂದೂರು, ಕುಂದಾಪುರ ಸೇರಿದಂತೆ ನಗರದಿಂದ ದೂರದ ಊರುಗಳಿಗೆ ಹೋಗ
ಬೇಕಾದವರು ಭಾರಿ ಅವಸರವಸರವಾಗಿ ದಾಖಲೆಗಳನ್ನು ನೀಡಿದರು. ಆದರೆ ಕೆಲವು ಮಂದಿ ಸಹಿ ಮಾಡದೆ ತೆರಳಿದ್ದರಿಂದ ಅಧಿಕಾರಿಗಳು ಮತ್ತೆ ಮತ್ತೆ ಕೂಗಿ ಕರೆಯುವಂತಾಯಿತು.
ಮೊದಲಾಗಮನ
ಉಡುಪಿ ಕ್ಷೇತ್ರದ ಚಾಂತಾರು ಮತಗಟ್ಟೆಯವರು ಮೊದಲಿಗರಾಗಿ ವಾಪಸಾದರೆ ಕಾಪುವಿನ ಪೆರ್ಡೂರಿನವರು ಮೊದಲಿಗರಾಗಿ ಮಸ್ಟರಿಂಗ್ ಕೇಂದ್ರ ತಲುಪಿದರು.
ಮತ ಎಣಿಕೆ ಕೇಂದ್ರ ಸಿದ್ದ
ಜಿಲ್ಲೆಯ 5 ಕ್ಷೇತ್ರಗಳ ಮತ ಎಣಿಕೆ ಕೇಂದ್ರವಾಗಿರುವ ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆಯ ಹೊರಭಾಗ ಅಗತ್ಯ ಬ್ಯಾರಿಕೇಡ್ ಅಳವಡಿಸುವ, ಪೆಂಡಾಲ್ ಹಾಕುವ ಕೆಲಸಗಳು ಪೂರ್ಣಗೊಂಡಿವೆ. ಮೇ 12ರಂದು ರಾತ್ರಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರು ಭದ್ರತಾ ವ್ಯವಸ್ಥೆಯ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.