ಶಾಲೆಗೆ ನೀರು ಪೂರೈಸಿದ ಆಪದ್ಬಾಂಧವ ಸುಧಾಕರ ಶೆಟ್ಟಿ
ಬಜಗೋಳಿಯ ಸ.ಪ.ಪೂ. ಕಾಲೇಜು, ಪ್ರೌಢಶಾಲೆಗೆ ನೀರು ಪೂರೈಕೆ
Team Udayavani, Jun 8, 2019, 6:06 AM IST
ಬಜಗೋಳಿ: ನೀರಿನ ಸಮಸ್ಯೆ ಬಿಗಡಾಯಿಸಿ ಈ ಬಾರಿ ಶಾಲೆ-ಕಾಲೇಜುಗಳಿಗೆ ರಜೆ ಕೊಡುವಷ್ಟರ ಮಟ್ಟಿಗೆ ಸಮಸ್ಯೆ ಉಂಟಾಗಿದೆ. ಆದರೆ ಇಲ್ಲೊಬ್ಬರು ಸ್ವಂತ ಖರ್ಚಿನಿಂದ ಕಾಲೇಜು, ಶಾಲೆಗೆ ನೀರು ಪೂರೈಸಿ ವಿದ್ಯಾರ್ಥಿಗಳ ನೀರಿನ ದಾಹ ಕಡಿಮೆ ಮಾಡಿದ್ದಾರೆ.
ಬಜಗೋಳಿಯ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ಬಾವಿ ಇದ್ದು, ಅದು ಬತ್ತಿ ಹೋಗಿದೆ. ಶಾಲೆಯ ನೀರಿನ ಸಮಸ್ಯೆ ಮನಗಂಡ ಇಲ್ಲಿನ ಹಳೆವಿದ್ಯಾರ್ಥಿ ಮತ್ತು ತಾ.ಪಂ. ಸದಸ್ಯರಾದ ಮುಡಾರು ನಡುತುಂಡು ಮನೆ ಸುಧಾಕರ ಶೆಟ್ಟಿಯವರು ಮುತುವರ್ಜಿ ವಹಿಸಿ ಸ್ವಂತ ಖರ್ಚಿನಿಂದ ಶಾಲೆಗೆ ಟ್ಯಾಂಕರ್ ನೀರು ಪೂರೈಸುತ್ತಿದ್ದಾರೆ.
ನೀರು ಪೂರೈಕೆ
ಸಾಧ್ಯವಾಗದೆ ಪಂಚಾಯತ್ ಕೈ ಚೆಲ್ಲಿದಾಗ ಸುಧಾಕರ್ ಅವರು ದಿನಂಪ್ರತಿ 3 ಸಾವಿರ ಲೀ. ನೀರನ್ನು ಶಾಲೆಗೆ ಪೂರೈಸುವ ವ್ಯವಸ್ಥೆ ಮಾಡಿದ್ದಾರೆ.
ವಿದ್ಯಾಬ್ಯಾಸಕ್ಕೆ ತೊಂದರೆಯಾಗಾಬಾರಾದು
ನೀರಿನ ಸಮಸ್ಯೆಯಿಂದಾಗಿ ನಮ್ಮ ಊರಿನ ಶಾಲೆಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ನೆರವು ನೀಡುತ್ತಿದ್ದೇನೆ. ಹಳೆ ವಿದ್ಯಾರ್ಥಿಗಳು ಸಹಕರಿಸಿದರೆ, ಮಳೆಬರುವಲ್ಲಿವರೆಗೆ ನೀರು ಪೂರೈಕೆಗೆ ಸಹಕಾರಿಯಾಗುತ್ತದೆ.
-ಸುಧಾಕರ ಶೆಟ್ಟಿ ,
ತಾ.ಪಂ. ಸದಸ್ಯರು
ಪಿಡಿಒ ನೇಮಕಗೊಂಡಿಲ್ಲ
ಪಂಚಾಯತ್ ವತಿಯಿಂದ ನೀರು ಪೂರೈಸಲು ಹೊಸ ಪಿಡಿಓ ಇನ್ನೂ ನೇಮಕಗೊಂಡಿಲ್ಲದ್ದರಿಂದ ನೀರು ಪೂರೈಕೆ ವಿಳಂಬವಾಗಿದೆ.ಆಲ್ಲದೆ ಹೊಸ ಟೆಂಡರ್ ಪ್ರಕ್ರಿಯೆಯೂ ಸಾದ್ಯವಾಗುತ್ತಿಲ್ಲ.
–ಗೀತಾ ಪಾಟ್ಕರ್,
ಗ್ರಾಮ ಪಂಚಾಯತ್ ಅಧ್ಯಕ್ಷರು ಮುಡಾರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
MUST WATCH
ಹೊಸ ಸೇರ್ಪಡೆ
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.