“ಸುಳ್ಳೇ ಪ್ರಮೋದ್ ಮಧ್ವರಾಜ್ ನೈಜ ಬಂಡವಾಳ’
, Apr 5, 2019, 2:59 AM IST
ಉಡುಪಿ: ದಿನಕ್ಕೊಂದು ಸುಳ್ಳನ್ನು ಹೇಳಿಕೊಂಡು ತಿರುಗಾಡುತ್ತಿರುವ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ತನ್ನ ಪಕ್ಷ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳೇನು ಎಂಬ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣ ವಿಭಾಗದ ಜಿಲ್ಲಾ ಹಾಗೂ ಮಂಡಲಗಳ ಪ್ರಮುಖರ ಸಭೆಯನ್ನುದ್ದೇಶಿಸಿ ಮಾತನಾಡಿದರು.
ತನ್ನ ಪಕ್ಷದ ಕೊಡುಗೆ ತಿಳಿಸುವ ಬದಲಿಗೆ ಸಾವಿರಾರು ಕೋಟಿಯ ಅನುದಾನ, ಸಾಲ ಮನ್ನಾ ಎನ್ನುವ ಬೊಗಳೆ ಮಾತಿನಿಂದ ಕ್ಷೇತ್ರದ ಜನತೆಯ ದಾರಿ ತಪ್ಪಿಸುವ ವಿಫಲ ಯತ್ನದಲ್ಲಿದ್ದಾರೆ. 70 ವರ್ಷಗಳಿಂದ ಗರೀಬಿ ಹಠಾವೋ ಮಂತ್ರವನ್ನು ಜಪಿಸುತ್ತಿರುವ ಕಾಂಗ್ರೆಸ್ ಒಂದೆಡೆಯಾದರೆ, ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರಾಜ್ಯದ ರೈತರ ಸಾಲ ಮನ್ನಾ ಎಂಬ ಪೊಳ್ಳು ಭರವಸೆ ನೀಡಿದ್ದ ಜೆಡಿಎಸ್ ಇನ್ನೊಂದೆಡೆ. ಆದರೆ ಯೋಜನೆಗಳು ಬರೇ ಘೋಷಣೆಗೆ ಸೀಮಿತವಾಗಿದ್ದು ಅನುಷ್ಠಾನ ಮಾತ್ರ ಶೂನ್ಯವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಜನಪರ ಯೋಜನೆಗಳು ಮತ್ತು ಕ್ಷೇತ್ರದಾದ್ಯಂತ ನಡೆದಿರುವ ಅಭಿವೃದ್ಧಿ ಕೆಲಸ ಕಾರ್ಯಗಳಿಂದ ಕಂಗೆಟ್ಟಿರುವ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ಗೆ ಸುಳ್ಳೇ ನೈಜ ಬಂಡವಾಳವಾಗಿದೆ ಎಂದು ಶೋಭಾ ಹೇಳಿದರು.
ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣವು ಮತದಾರರನ್ನು ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಬಲ್ಲ ಸಾಧನವಾಗಿದೆ. ಯುವ ಜನಾಂಗವೂ ಸೇರಿದಂತೆ ದೇಶದ ಜನಸಂಖ್ಯೆಯ ಸರಾಸರಿ ಶೇ.50ಕ್ಕೂ ಮಿಕ್ಕಿದ ಜನತೆ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣವನ್ನು ನೆಚ್ಚಿಕೊಂಡಿರುವುದು ವಾಸ್ತವ. ಈ ನಿಟ್ಟಿನಲ್ಲಿ ಪಕ್ಷದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ ವಿಭಾಗದ ಪ್ರಮುಖರು ಬಹಳ ಎಚ್ಚರಿಕೆಯಿಂದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೂರಾರು ಜನಪರ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಮನೆ ಮನೆಗೆ ತಲುಪಿಸುವ ಅಗತ್ಯವಿದೆ. ಆ ಮೂಲಕ ಕ್ಷೇತ್ರದಲ್ಲಿ ನೆಲೆಯೇ ಇಲ್ಲದ ಜೆಡಿಎಸ್ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‌ರ ಸುಳ್ಳಿನ ಸರಮಾಲೆಗಳಿಗೆ ತಕ್ಕ ಉತ್ತರವನ್ನು ಕ್ಷೇತ್ರದ ಮತದಾರರು ನೀಡುವಂತಾಗಬೇಕು’ ಎಂದು ಅವರು ಕರೆ ನೀಡಿದರು.
ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ರಮೇಶ್, ಜಿಲ್ಲಾ ಸಹ ವಕ್ತಾರ ಎ.ಶಿವಕುಮಾರ್ ಅಂಬಲಪಾಡಿ, ಪ್ರಮುಖ ರಾದ ವಿಜಯ ಕೊಡವೂರು, ಗುರುಪ್ರಸಾದ್ ಶೆಟ್ಟಿ, ಪೂರ್ಣಿಮಾ ಸುರೇಶ್ ನಾಯಕ್, ಅಕ್ಷಯ್ ಪಿ. ಶೆಟ್ಟಿ, ಮಂಜುನಾಥ್ ಮಣಿಪಾಲ್, ಸಾಣೂರು ನರಸಿಂಹ ಕಾಮತ್, ಮಾಧವ ಮುದ್ರಾಡಿ, ವಿಜಯ ಭಟ್ ಕಡೆಕಾರು, ಪ್ರದೀಪ್ ರಾವ್. ಅಕ್ಷತ್ ಮಾಳ, ಸುದೀಪ್ ನಿಟ್ಟೆ, ಪ್ರಭಾಚಂದ್ರ, ರಂಜನ್‌ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.