ಸಜೆಯಾಗದಿರಲಿ ಬೇಸಗೆ ರಜೆ : ಮಕ್ಕಳ ನೀರಾಟದ ಬಗ್ಗೆ ಇರಲಿ ಎಚ್ಚರ
ಅಪಾಯಕಾರಿ ಹೊಂಡಗಳ ಬಗ್ಗೆ ಜಾಗೃತಿ ಇರಲಿ ; ಮೃತ್ಯುಕೂಪವಾಗಿರುವ ಗಣಿಗಾರಿಕೆ ಹೊಂಡಗಳು
Team Udayavani, Apr 6, 2019, 6:00 AM IST
ಕೋಟ: ಶಾಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅವಧಿ ಮುಗಿದು ಬೇಸಗೆ ರಜೆಯ ಮಜಾ ಆರಂಭ ಗೊಳ್ಳುತ್ತಿದೆ. ಪ್ರತಿ ವರ್ಷ ಈ ಸಂದರ್ಭಗಳಲ್ಲಿ ನೀರಿನ ಹೊಂಡ, ಕೆರೆ, ಹೊಳೆ, ಸಮುದ್ರಕ್ಕೆ ಆಡಲು ತೆರಳಿದಾಗ ಅನೇಕ ದುರಂತಗಳು ನಡೆದು ಮಕ್ಕಳ ಜೀವ ಬಲಿಯಾಗುವ ಪ್ರಕರಣಗಳು ಕರಾವಳಿಯಲ್ಲಿ ವರದಿಯಾಗುತ್ತವೆ.
ಈ ಬಾರಿ ಕೂಡ ಪುತ್ತೂರಿನಲ್ಲಿ ಈಗಾಗಲೇ ಇಂತಹದ್ದೇ ಘಟನೆ ಘಟಿಸಿ ಮೂರು ವಿದ್ಯಾರ್ಥಿಗಳು ಸಾವನ್ನಪ್ಪಿ ದ್ದಾರೆ. ಆದ್ದರಿಂದ ರಜೆಯಲ್ಲಿ ಹೆತ್ತವರು ತಮ್ಮ ಮಕ್ಕಳ ಚಟುವಟಿಕೆ ಬಗ್ಗೆ ತುಂಬಾ ಎಚ್ಚರದಿಂದಿರಬೇಕಾದ ಅಗತ್ಯವಿದೆ.
ನಿಗಾ ಇರಲಿ
ಬೇಸಗೆ ರಜೆಯಲ್ಲಿ ಹೆತ್ತವರು ಮಕ್ಕಳ ಆಟೋಟಗಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕಾದ ಅಗತ್ಯವಿರುತ್ತದೆ. ಮಕ್ಕಳು ಯಾರ ಜತೆ ಆಟವಾಡುತ್ತಾರೆ, ಎಲ್ಲಿಗೆ ತೆರಳುತ್ತಾರೆ. ಆಟವಾಡುವ ಸ್ಥಳದಲ್ಲಿ ಅಪಾಯಕಾರಿ ನೀರಿನ ಹೊಂಡಗಳಿದೆಯೇ ಎನ್ನುವ ಕುರಿತು ಕಾಳಜಿ ಅಗತ್ಯ ಮತ್ತು ನೀರಿನ ಹೊಂಡಗಳಿಗೆ ಬಟ್ಟೆ ಒಗೆಯಲು ತೆರಳುವಾಗ ಚಿಕ್ಕ ಮಕ್ಕಳನ್ನು ಕರೆದೊಯ್ಯದಿರುವುದು ಒಳಿತು.
ಎಚ್ಚರ ಅಗತ್ಯ
ಗ್ರಾಮಾಂತರ ಭಾಗದ ಹಲವು ಕಡೆಗಳಲ್ಲಿ ಗಣಿಗಾರಿಕೆ ಹೊಂಡಗಳು ಮೃತ್ಯಕೂಪವಾಗಿ ಪರಿಣಮಿಸಿವೆೆ. ಪರವಾನಿಗೆ ಇರುವ ಗಣಿಗಾರಿಕೆಗೆ ಹೊಂಡಗಳಿಗೆ ಪರವಾನಿಗೆ ದಾರರು ಬೇಲಿ ಅಳವಡಿಸಬೇಕು ಅಥವಾ ಜಾಗದ ಮಾಲಕರು ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಅಲ್ಲಿ ನಡೆಯುವ ದುರಂತಗಳಿಗೆ ಮಾಲಕರು, ಪರವಾನಿಗೆದಾರರು ಹೊಣೆಗಾರರಾಗು ತ್ತಾರೆ ಎನ್ನುವ ನಿಯಮವಿದೆ. ಆದರೂ ಕೆಲವು ಗಣಿಹೊಂಡಗಳು ಇನ್ನೂ ಅಪಾಯಕಾರಿ ಸ್ಥಿತಿಯಲ್ಲಿದೆ. ಇದರ ಜತೆಗೆ ಸರಕಾರಿ ಜಾಗದಲ್ಲಿ ನಡೆದ ಗಣಿಗಾರಿಕೆಗಳು, ಹೊಳೆ, ಕೆರೆ, ತೋಡು, ಟ್ಯಾಂಕ್‌ಗಳು ತೆರೆದ ಸ್ಥಿತಿಯಲ್ಲಿ ಅಪಾಯಕಾರಿಯಾಗಿದಲ್ಲಿ ಇವುಗಳ ಕುರಿತು ಎಚ್ಚರಿಕೆ ಅಗತ್ಯರಜಾ ದಿನ ಸದುಪಯೋಗಿಸಿ ಹಿಂದೆ ಬೇಸಗೆ ರಜೆಯಲ್ಲಿ ಸಂಬಂಧಿಗಳ ಮನೆಗೆ ತೆರಳಿ ಅಜ್ಜಿ,ತಾತ ಹಾಗೂ ಹಿರಿಯರಿಂದ ಜೀವನಕ್ಕೆ ಬೇಕಾಗುವ ಒಂದಷ್ಟು ವಿಚಾರ ಕಲಿಯುವ ಪದ್ಧತಿ ಇತ್ತು. ಆದರೆ ಇಂದಿನ ಮಕ್ಕಳಿಗೆ ಮೊಬೈಲ್, ವಿಡಿಯೋ ಗೇಮ್ ಸರ್ವಸ್ವವಾಗಿದೆ. ಹೀಗಾಗಿ ಸಂಬಂಧಿಗಳ ಮನೆಗೆ ತೆರಳುವುದು ಅಪರೂಪವಾಗಿದೆ. ಮಕ್ಕಳನ್ನು ಸಂಬಂಧಿಗಳ ಮನೆಗೆ ಕಳುಹಿಸುವ ಮೂಲಕ ಮೊಬೈಲ್, ವೀಡಿಯೋ ಗೇಮ್‌ಗಳ ದಾಸ ರಾಗುವುದನ್ನು ತಪ್ಪಿಸಬಹುದು.
ಬೇಸಗೆ , ಮಳೆಗಾಲದಲ್ಲಿ ಸಾಲು-ಸಾಲು ದುರಂತ
2015ರಿಂದ 2018 ಮೇ ತನಕ ಉಡುಪಿ ಜಿಲ್ಲೆಯಲ್ಲಿ ಬೇಸಗೆ ರಜಾ ಅವಧಿ ಹಾಗೂ ಮಳೆಗಾಲದಲ್ಲಿ ನಡೆದ ನೀರಿನ ದುರಂತಗಳು ಈ ರೀತಿ ಇವೆ. ಬ್ರಹ್ಮಾವರ ಪೊಲೀಸ್ ಠಾಣೆ 3 ಪ್ರಕರಣ 4ಸಾವು, ಹೆಬ್ರಿಯಲ್ಲಿ 2 ದುರಂತ 2 ಸಾವು, ಕೋಟದಲ್ಲಿ 7 ಘಟನೆಗಳಲ್ಲಿ 10 ಸಾವು, ಬೈಂದೂರಿನಲ್ಲಿ 1 ಘಟನೆ 1 ಸಾವು, ಕಾರ್ಕಳದಲ್ಲಿ 2 ಪ್ರಕರಣ 2ಸಾವು, ಕುಂದಾಪುರದಲ್ಲಿ 4 ದುರಂತ 5 ಸಾವು, ಮಣಿಪಾಲದಲ್ಲಿ 1 ಪ್ರಕರಣ 2 ಸಾವು, ಶಂಕರನಾರಾಯಣ 1 ಪ್ರಕರಣ 2ಸಾವು, ಕೊಲ್ಲೂರು 1 ಘಟನೆ 1ಸಾವು, ಮಲ್ಪೆ 1 ಪ್ರಕರಣ 1 ಸಾವು. ಹೀಗೆ 23 ಪ್ರಕರಣಗಳಲ್ಲಿ 30 ಜೀವಗಳು ಬಲಿಯಾಗಿವೆ.
– ರಾಜೇಶ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
MUST WATCH
ಹೊಸ ಸೇರ್ಪಡೆ
Priyanka Upendra: ಬ್ಯೂಟಿಫುಲ್ ಲೈಫ್ ನಲ್ಲಿ ಪ್ರಿಯಾಂಕಾ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.