ಗೋವಿನ ಮೇಲೆ ವಿಕೃತಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ: ಸುನಿಲ್ ಕುಮಾರ್
Team Udayavani, Jan 13, 2025, 8:00 PM IST
ಕಾರ್ಕಳ: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದು ಅನಾಗರಿಕ, ಕ್ರೌರ್ಯ ಮೆರೆದಿರುವ ಘಟನೆ ತೀವ್ರ ವೇದನೆ ಸೃಷ್ಟಿಸಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಮತ್ತು ಓಟು ಬ್ಯಾಂಕ್ ರಾಜಕೀಯ ಓಲೈಕೆಯಿಂದಾಗಿ ಇಂಥ ಘಟನೆಗಳು ನಡೆಯುತ್ತಿದೆ ಎಂದು ಶಾಸಕ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗಾವೋ ವಿಶ್ವಸ್ಯ ಮಾತರಃ ಎಂದು ನಂಬಿದ ನಾಡು ನಮ್ಮದು. ಗೋಮಾತೆ ಎಂದೇ ಕರೆಯಲಾಗುತ್ತದೆ. ಅಂಥ ತಾಯಿಯ ಕೆಚ್ಚಲನ್ನೇ ಕತ್ತರಿಸುವಂಥ ವಿಕೃತ ಸ್ಥಿತಿಗೆ ಸಮಾಜ ಜಾರಿದೆ ಎಂದರೆ ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಬೇಕು. ಆದರೆ ಈ ಸರಕಾರದಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಸನ್ನಿವೇಶ ನಿರ್ಮಾಣವಾಗಿದ್ದು ಕಾನೂನಿನ ಭಯ ಇಲ್ಲದಂತಾಗಿದೆ.
ಈ ಘಟನೆಗೆ ಕಾರಣವಾದ ವ್ಯಕ್ತಿಗಳು ಯಾರೇ ಆದರೂ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.