ಬೆಳ್ಮಣ್ ಜಂತ್ರದ ಗುಡ್ಡದಲ್ಲಿ ಗುಟ್ಟಾಗಿ ಸರ್ವೇ: ಗ್ರಾಮಸ್ಥರಲ್ಲಿ ಆತಂಕ
ಸ್ಪಷ್ಟ ಮಾಹಿತಿ ನೀಡದ ಅಧಿಕಾರಿಗಳು
Team Udayavani, Jul 27, 2022, 6:25 AM IST
ಕಾರ್ಕಳ: ಬೆಳ್ಮಣ್‌ನ ಜಂತ್ರ ಪರಿಸರದ ಗುಡ್ಡದಲ್ಲಿ ಖಾಸಗಿ ಏಜೆನ್ಸಿಯೊಂದು ಒಂದು ವಾರದಿಂದ ಅನಧಿಕೃತವಾಗಿ ಸರ್ವೇಯಲ್ಲಿ ತೊಡಗಿರುವುದು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿದೆ.
ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಹಾಗೂ ಗ್ರಾಮಕರಣಿಕರಿಗೂ ಯಾವುದೇ ಮಾಹಿತಿ ಇಲ್ಲ. ಗ್ರಾಮಸ್ಥರು ಸರ್ವೇ ನಿರತರಲ್ಲಿ ವಿಚಾರಿಸಿದಾಗ ಕೇಂದ್ರ ಸರಕಾರದ ಜಿಲೋಲಾಜಿಕಲ್ ಸರ್ವೇ ಆಫ್ ಇಂಡಿಯಾ ವತಿಯಿಂದ ರಾಷ್ಟ್ರೀಯ ಜಿಯೋಫಿಸಿಕಲ್ ಮ್ಯಾಪಿಂಗ್ ಪ್ರೋಗ್ರಾಂ ಅಡಿ ನೆಲದ ಗುರುತ್ವ ಮತ್ತು ಕಾಂತೀಯ ಸರ್ವೇ ಕಾರ್ಯ ಇದಾಗಿದೆ ಎಂದು ತಿಳಿಸಿದ್ದಾರೆ.
ಸರ್ವೇ ನಡೆಸುವವರಿಗೆ ಸಹಕರಿಸುವಂತೆ ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳ ಕಂದಾಯ ಅಧಿಕಾರಿಗಳಿಗೆ ಅಪಾರ ಜಿಲ್ಲಾಧಿಕಾರಿ ನೀಡಿರುವ ಪತ್ರವೂ ಅವರ ಬಳಿ ಯಿದೆ. ಮಹಾರಾಷ್ಟ್ರ ನಾಗ್ಪುರದ ಮಿನರಲ್ ಎಕ್ಸ್‌ಪ್ಲೋರೇಶನ್ ಹಾಗೂ ಕನ್ಸಲ್ಟನ್ಸಿ ಲಿಮಿಟೆಡ್ ಖಾಸಗಿ ಸಂಸ್ಥೆಯ ಸಿಬಂದಿ ಅವರು ಎಂದು ತಿಳಿದುಬಂದಿದೆ. ಬೆಳ್ಮಣ್‌ನ ಲಾಡ್ಜ್ ನಲ್ಲಿ ಅವರು ತಂಗಿದ್ದಾರೆ. 8-10 ಮಂದಿಯ ತಂಡವಾಗಿ ಅವರ ನಡೆ ಸಂಶಯಕ್ಕೆಡೆ ಮಾಡುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಂಟಕಲ್ಲಿನಲ್ಲಿ ವಿರೋಧ
ಉಡುಪಿಯ ಕೆಲವು ಕಡೆ ಗಳಲ್ಲಿ ಈಗಾಗಲೇ ಈ ತಂಡ ಸರ್ವೇ ಪೂರೈ ಸಿದೆ. ಶಿರ್ವ ಬಂಟಕಲ್ಲು ಭಾಗದಲ್ಲಿ ಸರ್ವೇಗೆ ತೊಡಗಿದಾಗ ಗ್ರಾಮಸ್ಥರು ವಿರೋಧ ಮಾಡಿದ್ದರಿಂದ ಕಾಲ್ಕಿತ್ತ ತಂಡ ಬೆಳ್ಮಣ್‌ನಲ್ಲಿ ಸರ್ವೇಗೆ ಮುಂದಾಗಿದೆ.
ಬೆಳ್ಮಣ್‌ನಲ್ಲಿ ನಡೆಯುವ ಸರ್ವೇ ಬಗ್ಗೆ ಈವರೆಗೆ ನನಗೆ ಯಾವುದೇ ಮಾಹಿತಿ ಇಲ್ಲ. ಮಾಹಿತಿ ಪಡೆದು ಬಳಿಕ ಸ್ಪಷ್ಟ ಮಾಹಿತಿ ನೀಡುವೆ.
– ಪ್ರದೀಪ್ ಕುರ್ಡೆಕರ್, ಕಾರ್ಕಳ ತಹಶೀಲ್ದಾರ್
ನನಗೂ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ವಿಚಾರಿಸಿಕೊಂಡು ನಾಳೆ ತಿಳಿಸುವೆ.
– ಕಿರಣ್ ಗೌರಯ್ಯ ಕುಂದಾಪುರ ತಹಶೀಲ್ದಾರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.