ಉಡುಪಿ ಪ್ರವಾಹ ಕೇಂದ್ರ ತಂಡದಿಂದ ಸಮೀಕ್ಷೆ
Team Udayavani, Dec 15, 2020, 6:41 AM IST
ಕೇಂದ್ರ ತಂಡವು ಪ್ರಾಕೃತಿಕ ವಿಕೋಪ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಉಡುಪಿ: ಪ್ರವಾಹದಿಂದ ಸಂಭವಿಸಿರುವ ಹಾನಿಯ ಸಮೀಕ್ಷೆಗಾಗಿ ಕೇಂದ್ರ ಸರಕಾರದ ಅಧಿಕಾರಿ ಗಳ ತಂಡವು ಸೋಮವಾರ ಉಡುಪಿ ಜಿಲ್ಲೆಗೆ ಆಗಮಿಸಿ ವಿವಿಧೆಡೆ ಪರಿಶೀಲನೆ ನಡೆಸಿತು. ಇದಕ್ಕೆ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಸಂದರ್ಭದಲ್ಲಿ, ದಿಢೀರ್ ಪ್ರವಾಹ ತಲೆದೋರಿದ ರಾತ್ರಿ ಸ್ಥಳೀಯರು ಪರಿಹಾರ ಕಾರ್ಯಾಚರಣೆಯಲ್ಲಿ ಪ್ರದರ್ಶಿಸಿದ ಸಮಯಪ್ರಜ್ಞೆ, ಸಾಹಸಗಳ ಬಗ್ಗೆ ತಿಳಿದು, ಶ್ಲಾಘನೆ ವ್ಯಕ್ತಪಡಿಸಿತು.
ಉಡುಪಿ ಪೆರಂಪಳ್ಳಿಯ ಪಾಸ್‌ಕುದ್ರು ಪ್ರದೇಶಕ್ಕೆ ಭೇಟಿ ನೀಡಿದ ತಂಡವು ಹಾನಿಗೊಳಗಾದ ಪ್ರದೇಶ ವನ್ನು ಪರಿಶೀಲಿಸಿತು. ಅನಂತರ ಬಜೆ ಡ್ಯಾಂಗೆ ಭೇಟಿ ನೀಡಿ ನೆರೆ ಸಂದರ್ಭದಲ್ಲಿ ಪಂಪಿಂಗ್ ಸ್ಟೇಶನ್ ಮುಳು ಗಿದ್ದನ್ನು, ಡ್ಯಾಂ ಎತ್ತರ ಮತ್ತು ನೀರಿನ ಹರಿ ವಿನ ಪ್ರಮಾಣದ ಬಗ್ಗೆಯೂ ಪರಿಶೀಲನೆ ನಡೆಸಿತು. ಬೊಮ್ಮರಬೆಟ್ಟು ವ್ಯಾಪ್ತಿಯ ಮಾಣಾçಗೆ ಭೇಟಿ ನೀಡಿ ನೆರೆಯಿಂದ ಮೂರು ಮನೆಗಳು ಸಂಪೂರ್ಣ ಹಾಳಾಗಿದ್ದ ಪ್ರದೇಶವನ್ನು ವೀಕ್ಷಿಸಿತು.
ಸ್ಥಳೀಯರೊಂದಿಗೆ ನೆರೆ ಬಂದ ದಿನದ ಪರಿಸ್ಥಿತಿಯ ಬಗ್ಗೆ ವಿವರ ಸಂಗ್ರಹಿಸಿ, ತಾತ್ಕಾಲಿಕ ಪರಿಹಾರ ದೊರೆತಿರುವ ಬಗ್ಗೆ ಮತ್ತು ಸೂಕ್ತ ಸಮಯದಲ್ಲಿ ಜಿಲ್ಲಾಡಳಿತದಿಂದ ಅಗತ್ಯ ನೆರವು ದೊರೆತಿರುವ ಬಗ್ಗೆ ಮಾಹಿತಿ ಪಡೆಯಿತು. ಸ್ಥಳೀಯ ಕೃಷಿ ಜಮೀನಿಗೆ ಹಾನಿಯಾಗಿರುವ ಬಗ್ಗೆ ವಿವರ ಪಡೆಯಿತು. ಕಾರ್ಕಳ ತಾಲೂಕಿನ ಕುಕ್ಕುಜೆಯಲ್ಲಿ ಹಾನಿಯಾಗಿರುವ ವೆಂಟೆಡ್ ಡ್ಯಾಂ, ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದ ಬಳಿಯ ಸೇತುವೆಗೆ ಆಗಿರುವ ಹಾನಿ, ಬ್ರಹ್ಮಾವರ ಜನ್ನಾಡಿ ರಸ್ತೆ ಹಾನಿ ಮತ್ತು ಕುಂದಾಪುರ ತಾಲೂಕಿನ ತೆಕ್ಕಟ್ಟೆಯ ಸೈಕ್ಲೋನ್ ಶೆಲ್ಟರ್ ಪರಿಶೀಲನೆ ನಡೆಸಿತು.
ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಕೇಂದ್ರ ತಂಡದ ಸದಸ್ಯರಾದ ಕೇಂದ್ರರಸ್ತೆ ಸಾರಿಗೆ ಮತ್ತು ರಾ.ಹೆ. ಇಲಾಖೆಯ ಪ್ರಾದೇಶಿಕ ಮುಖ್ಯ ಎಂಜಿನಿಯರ್ ಸದಾನಂದ ಬಾಬು, ದೀಪ್ ಶೇಖರ್ ಸಿಂಘಾಲ್, ಕೆಎಸ್‌ಎನ್‌ಡಿಎಂಸಿಯ ಹಿರಿಯ ವಿಜ್ಞಾನಿ ಡಾ| ಸಿ.ಎನ್. ಪ್ರಭು, ಜಿ.ಪಂ. ಸಿಇಓ ಡಾ| ನವೀನ್ ಭಟ್, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
323 ಕೋ.ರೂ. ನಷ್ಟ
ಸೆಪ್ಟಂಬರ್‌ನಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 40.5 ಸೆಂ.ಮೀ. ಆದರೆ ಕಳೆದ ಸೆಪ್ಟೆಂಬರ್‌ನಲ್ಲಿ ಸುರಿದ ಮಳೆ 102.2 ಸೆಂ.ಮೀ. ಅಂದರೆ ಶೇ.152ರಷ್ಟು ಅಧಿಕ ಮಳೆ ಸುರಿದಿದೆ. ಅ. 10ರಿಂದ 15ರ ವರೆಗೆ ವಾಡಿಕೆ ಮಳೆ 4 ಸೆಂ.ಮೀ. ಆಗಿದ್ದು, 26.3 ಸೆಂ.ಮೀ. ಮಳೆ ಅಂದರೆ, ಶೇ. 553 ಅಧಿಕ ಮಳೆ ಆಗಿತ್ತು. ಇದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಒಟ್ಟು 77 ಗ್ರಾಮಗಳಲ್ಲಿ ಹಾನಿಯಾಗಿದ್ದು 827 ಕುಟುಂಬಗಳ 2,874 ಜನರನ್ನು ರಕ್ಷಿಸಲಾಗಿದೆ. 31 ಕಾಳಜಿ ಕೇಂದ್ರಗಳನ್ನು ತೆರೆದಿದ್ದು 1,201 ಮಂದಿಗೆ ಆಶ್ರಯ ನೀಡಲಾಗಿತ್ತು. ಒಟ್ಟು 3,694 ಮನೆಗಳಿಗೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಒಟ್ಟು 323.7 ಕೋ.ರೂ. ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಂಡಕ್ಕೆ ವಿವರಣೆ ನೀಡಿದರು.
ಸ್ಥಳೀಯರ ಪಾತ್ರಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ತಂಡ
ಸಂತ್ರಸ್ತ ಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಕೇಂದ್ರದ ತಂಡ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿತು. ಜಿಲ್ಲೆಯಲ್ಲಿ ಪ್ರವಾಹದಿಂದ ಇದು ವರೆಗೆ ಆಗಿರುವ ಹಾನಿಯ ಕುರಿತು ಸಮಗ್ರ ವಿವರಗಳನ್ನು ಪಡೆದ ತಂಡವು, ವಿಕೋಪ ಸಂದರ್ಭದಲ್ಲಿ ಸ್ಥಳೀಯರು ಸಕಾಲಿಕ ಸೂಕ್ತ ನೆರವು ನೀಡಿದ ಕಾರಣ ಜೀವ ಹಾನಿಯಾಗುವುದನ್ನು ತಡೆದಿರುವ ಕುರಿತು ಗಮನಿಸಿತು. ಸಾರ್ವಜನಿಕರ ಸ್ಪಂದನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿತು. ಮಧ್ಯರಾತ್ರಿಯಲ್ಲಿ ಉಂಟಾದ ಪ್ರವಾಹ ಸಂದರ್ಭದಲ್ಲಿ ಸ್ಥಳೀಯರು ತೋರಿದ ಧೈರ್ಯ ಎಲ್ಲ ವಿಕೋಪ ಸಂದರ್ಭಗಳಲ್ಲೂ ಮಾದರಿ ಎಂದು ಅಧಿಕಾರಿಗಳು ಶ್ಲಾ ಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.