ಸುವರ್ಣಾ ನದಿ ತಟ ಪ್ರವಾಸಿ ತಾಣವಾಗಲು ಸುವರ್ಣಾವಕಾಶ
Team Udayavani, Mar 8, 2019, 1:00 AM IST
ಅಜೆಕಾರು: ಕಾರ್ಕಳ ತಾಲೂಕಿನ ಪ್ರಮುಖ ಜೀವ ನದಿ ಎಣ್ಣೆಹೊಳೆ ಸುವರ್ಣಾ ನದಿ ತಟದಲ್ಲಿ ಸುಮಾರು ಒಂದು ಎಕರೆ ಬಯಲು ಪ್ರದೇಶದ್ದು ಇಲ್ಲಿ ಉದ್ಯಾನವನ ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸಬಹುದಾಗಿದೆ.
ಈ ಜಾಗ ಪಂ. ಅಧೀನದಲ್ಲಿದ್ದು, ಅಭಿವೃದ್ಧಿಯತ್ತ ಗಮನ ಹರಿಸಿದಲ್ಲಿ ಆಕರ್ಷಕ ಪ್ರವಾಸಿ ಕ್ಷೇತ್ರವಾಗಬಹುದು.
ಎಲ್ಲಿದೆ ಪ್ರದೇಶ
ತಾಲೂಕು ಕೇಂದ್ರದಿಂದ 10 ಕಿ.ಮೀ. ದೂರದಲ್ಲಿ ಎಣ್ಣೆಹೊಳೆಯ ಹಚ್ಚ ಹಸುರಿನ ಮಧ್ಯೆ ಈ ಪ್ರದೇಶವಿದೆ. ಜತೆಗೆ ಕಾರ್ಕಳ-ಹೆಬ್ರಿ ರಾಜ್ಯ ಹೆದ್ದಾರಿಗೆ ತಾಗಿಕೊಂಡಿದೆ. ಈ ಮಾರ್ಗವಾಗಿಯೇ ಶಿವಮೊಗ್ಗ, ಧರ್ಮಸ್ಥಳಕ್ಕೆ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಎಣ್ಣೆಹೊಳೆಯಲ್ಲಿ ಉದ್ಯಾನವನ ನಿರ್ಮಿಸಿದಲ್ಲಿ ಈ ಪ್ರದೇಶವನ್ನೂ ಪ್ರವಾಸಿ ಕೇಂದ್ರವನ್ನಾಗಿಸಬಹುದಾಗಿದೆ.
ಪಾಳುಬಿದ್ದ ಜಾಗ
ಈಗ ಪಾಳು ಬಿದ್ದಿರುವ ನದಿ ತಟದಲ್ಲಿ ಕಸಕಡ್ಡಿ ತ್ಯಾಜ್ಯಗಳೇ ತುಂಬಿವೆೆ. ಉದ್ಯಾನವನ ನಿರ್ಮಿಸಿದಲ್ಲಿ ಸ್ವತ್ಛತೆ ಕಾಪಾಡುವ ಜತೆಗೆ ಪರಿಸರವನ್ನು ಆಕರ್ಷಣೀಯಗೊಳಿಸಬಹುದಾಗಿದೆ.ಉದ್ಯಾನವನ ನಿರ್ಮಾಣ
ಸ್ಥಳೀಯ ದಾನಿಗಳು, ಗ್ರಾಮಸ್ಥರು, ಸರಕಾರದ ಅನುದಾನ ಸೇರಿಸಿ ಸುಂದರ ಉದ್ಯಾನವನ ಎಣ್ಣೆಹೊಳೆಯಲ್ಲಿ ಹಾಗೂ ತಾಲೂಕಿನ 3-4 ಕಡೆಗಳಲ್ಲಿ ನಿರ್ಮಾಣ ಮಾಡುವ ಕನಸಿದ್ದು ಈ ಬಗ್ಗೆ ಈಗಾಗಲೇ ಸ್ಥಳೀಯ ಪಂಚಾಯತ್ ಪ್ರತಿನಿಧಿಗಳು ಹಾಗೂ ಗ್ರಾಮದ ಹಿರಿಯರೊಂದಿಗೆ ಸಮಾಲೋಚನೆ ನಡೆಸಲಾಗಿದೆ.
-ಸುನಿಲ್ ಕುಮಾರ್, ಶಾಸಕರು, ಕಾರ್ಕಳ
ಪ್ರಸ್ತಾವನೆ ಸಲ್ಲಿಕೆ
ನದಿ ತಟದಲ್ಲಿ ಉದ್ಯಾನವನ, ವಾಕಿಂಗ್ ಟ್ರ್ಯಾಕ್, ಓಪನ್ ಜಿಮ್, ಬಯಲು ರಂಗಮಂದಿರ ನಿರ್ಮಾಣ ಮಾಡುವ ಬಗ್ಗೆ ಈಗಾಗಲೇ ಪಂಚಾಯತ್‌ನಲ್ಲಿ ನಿರ್ಣಯ ಕೈಗೊಂಡು ಶಾಸಕ ಸುನಿಲ್ ಕುಮಾರ್ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅನುದಾನದ ಭರವಸೆ ನೀಡಿದ್ದಾರೆ.
-ಗೌತಮ್ ನಾಯಕ್, ಸ್ಥಳೀಯ ಪಂಚಾಯತ್ ಸದಸ್ಯರು, ಮರ್ಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.