ಉಡುಪಿ: “ಸ್ವರಾಮೃತ’ದಲ್ಲಿ ಸಂಗೀತ ಸುಧೆ
Team Udayavani, Dec 11, 2022, 5:25 AM IST
ಉಡುಪಿ: ಹರ್ಷ ಸಂಸ್ಥೆಯ ಸಂಸ್ಥಾಪಕ ದಿ| ಕಪ್ಪೆಟ್ಟು ಬೋಳ ಪೂಜಾರಿ ಅವರ ಜನ್ಮಶತಮಾನೋತ್ಸವ ಪ್ರಯುಕ್ತ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಆಯೋ ಜಿಸ ಲಾದ ಸಂಗೀತ ಸರಣಿ “ಸ್ವರಾಮೃತ’ ಸಂಭ್ರಮದ ದ್ವಿತೀಯ ದಿನ ಶನಿವಾರ ಸಂಗೀತ ಸುಧೆ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿತು.
ವಿ| ಮಹಾಬಲೇಶ್ವರ್ ಭಾಗವತ್‌ರಿಂದ ನಡೆದ ಹಿಂದೂ ಸ್ಥಾನಿ ಗಾಯನಕ್ಕೆ ಹಾರ್ಮೋನಿಯಂನಲ್ಲಿ ಶ್ರೀಧರ್ ಭಟ್, ತಬಲಾದಲ್ಲಿ ಗುರುರಾಜ್ ಹೆಗಡೆ ಸಹಕರಿಸಿದ್ದರು. ಸರ್ವರ್ ಹುಸೇನ್ ಅವರ ಸಾರಂಗಿ ವಾದನಕ್ಕೆ ರಾಜೇಂದ್ರ ನಾಕೋಡ್ ತಬಲಾದಲ್ಲಿ ಸಾಥ್ ನೀಡಿದರು. ರಮಾಕಾಂತ್ ಗಾಯಕ್‌ವಾಡ್, ಆದಿತ್ಯ ಮೋದಕ್ ಅವರಿಂದ ಹಿಂದೂಸ್ಥಾನಿ ಗಾಯನ ಜರಗಿದ್ದು, ಹಾರ್ಮೋನಿಯಂನಲ್ಲಿ ಸುಧೀರ್ ನಾಯಕ್, ತಬಲಾದಲ್ಲಿ ಮಯಾಂಕ್ ಬಿಡೇಕರ್ ಸಹಕರಿಸಿದ್ದರು. ಅಪಾರ ಸಂಖ್ಯೆಯಲ್ಲಿ ನೆರೆದ ಸಂಗೀತಾಸಕ್ತರು ಸಂಗೀತ ರಸಧಾರೆ ಸವಿದರು.
ಇಂದು ದಿನಪೂರ್ತಿ ಸಂಗೀತ ವೈಭವ
ಡಿ. 11ರ ಬೆಳಗ್ಗೆ 10ರಿಂದ 11.30ರ ವರೆಗೆ ವಿ| ಮಧೂರು ಪಿ. ಬಾಲಸುಬ್ರಹ್ಮಣ್ಯಂ ಅವರ ಕರ್ನಾಟಕ ಸಂಗೀತ ಕಛೇ ರಿ ಇರಲಿದೆ. ವಯೋಲಿನ್‌ನಲ್ಲಿ ವಿ| ಕೆ. ವೇಣುಗೋಪಾಲ್ ಶ್ಯಾನುಭೋಗ್, ಮೃದಂಗದಲ್ಲಿ ಡಾ| ಅಕ್ಷಯ್ ನಾರಾಯಣ್ ಕಾಂಚನ್, ಘಟಂನಲ್ಲಿ ವಿ| ಮಂಜುನಾಥ್ ಸಹ ಕರಿಸುವರು. 11.45ರಿಂದ 1.15ರ ವರೆಗೆ ಉಡುಪಿಯ ಗಾಯಕ ಶಾಂತೇರಿ ಕಾಮತ್ ಹಿಂದೂಸ್ಥಾನಿ ಗಾಯನ ನಡೆಸಿ ಕೊಡಲಿದ್ದಾರೆ. ಹಾರ್ಮೋನಿ ಯಂನಲ್ಲಿ ಶಂಕರ್ ಶೆಣೈ, ತಬಲಾದಲ್ಲಿ ರಾಜೇಂದ್ರ ನಾಕೋಡ್ ಸಾಥ್ ನೀಡಲಿದ್ದಾರೆ. 2.30ರಿಂದ 4ರ ವರೆಗೆ ರಿಂಪಾ ಶಿವಾ ಅವರ ತಬಲಾ ವಾದನ ಇರಲಿದ್ದು, ಹಾರ್ಮೋನಿಯಂನಲ್ಲಿ ಪಂ| ಸತೀಶ್ ಕೊಲ್ಲಿ ಸಾಥ್ ನೀಡುವರು.
ಸಂಜೆ 4.15ರಿಂದ 5.45ರ ವರೆಗೆ ಅದಿತಿ ಜೋಷಿಯವರ ಹಿಂದೂಸ್ಥಾನಿ ಗಾಯನ ಇರಲಿದ್ದು, ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್, ತಬಲಾದಲ್ಲಿ ಯಶ್ವಂತ್ ವೈಷ್ಣವ್ ಸಹಕರಿಸುವರು. ಸಂಜೆ 6.15 ರಿಂದ 7.45ರ ವರೆಗೆ ಸಿತಾರ್ ಮಾಂತ್ರಿಕ ಶಕೀರ್ ಖಾನ್ ಅವರ ಸಿತಾರ್ ವಾದನ ಇರಲಿದ್ದು, ತಬಲಾದಲ್ಲಿ ರಾಜೇಂದ್ರ ನಾಕೋಡ್ ಸಹಕರಿಸುವರು. ರಾತ್ರಿ 8ರಿಂದ 10ರ ವರೆಗೆ ಪ್ರಸಿದ್ಧ ಗಾಯಕ ಜಯತೀರ್ಥ ಮೇವುಂಡಿ ಅವರ ಹಿಂದೂಸ್ಥಾನಿ ಸಂಗೀತ ಇರ ಲಿದ್ದು, ಹಾರ್ಮೋನಿಯಂನಲ್ಲಿ ಸುಧೀರ್ ನಾಯಕ್, ತಬಲಾದಲ್ಲಿ ಯಶ್ವಂತ್ ವೈಷ್ಣವ್ ಸಹಕರಿಸಲಿದ್ದಾರೆ. ಸಂಗೀತಾ ಸಕ್ತ ರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ಹರ್ಷ ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.