ಸಿಡ್ನಿ ಯುಎನ್‌ಎಸ್‌ಡಬ್ಲ್ಯು-ಮಾಹೆ ಅನುದಾನ ಘೋಷಣೆ
Team Udayavani, Dec 15, 2019, 3:56 AM IST
ಉಡುಪಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷೆಯನ್ನು ಸುಧಾರಿಸಲು ಮತ್ತು ಉಡುಪು ಕೈಗಾರಿಕೆಯ ಅವಕಾಶ ಬಳಸಿಕೊಳ್ಳುವ ಮೊದಲ ಪ್ರಾಜೆಕ್ಟ್ಗೆ ಸಿಡ್ನಿಯ ಯುಎನ್‌ಎಸ್‌ಡಬ್ಲ್ಯು- ಮಣಿಪಾಲ ಮಾಹೆ ಸಹಭಾಗಿತ್ವದ ಸಂಶೋಧನೆಗೆ ಬೀಜ ಧನ ಕಾರ್ಯಕ್ರಮವಾಗಿ ಅನುದಾನ ಮಂಜೂರಾಗಿದೆ.
ಶನಿವಾರ ಮಣಿಪಾಲದಲ್ಲಿ ಯುಎನ್‌ಎಸ್‌ಡಬ್ಲ್ಯು ಅಧ್ಯಕ್ಷ ಮತ್ತು ಕುಲಪತಿ ಪ್ರೊ| ಐಯಾನ್ ಜಾಕೋಬ್ಸ್ ಮತ್ತು ಮಾಹೆ ಕುಲಪತಿ ಡಾ| ಎಚ್. ವಿನೋದ ಭಟ್ ಅವರು 10 ಜಂಟಿ ಅನುದಾನ ಕಾರ್ಯಕ್ರಮಗಳನ್ನು ಘೋಷಿಸಿದರು. ನಮ್ಮೆರಡು ಪಾಲುದಾರಿಕೆ ಬಗ್ಗೆ ಸಂತಸವಾಗುತ್ತಿದೆ. ನಮ್ಮೆರಡೂ ವಿ.ವಿ.ಗಳಲ್ಲಿ ಈ ಹೊಸ ಅನುದಾನ ಶೈಕ್ಷಣಿಕವಾಗಿ ಅನುಕೂಲವಾಗಲಿದೆ. ಸಂಕೀರ್ಣ ಮತ್ತು ಜಾಗತಿಕ ಸಂಶೋಧನ ಸವಾಲುಗಳನ್ನು ಬಗೆ ಹರಿಸಲು ಬುದ್ಧಿವಂತರನ್ನು ಸಮೀಪಕ್ಕೆ ತರಲಾಗುತ್ತಿದೆ ಎಂದು ಜಾಕೋಬ್ಸ್ ಹೇಳಿದರು.
ಎರಡು ಪ್ರಮುಖ ಸಂಸ್ಥೆಗಳು ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕರ ಜೀವಗಳು, ಸಂಶೋಧನೆ ಮತ್ತು ಶಿಕ್ಷಣದಲ್ಲಿ ಬದಲಾವಣೆಗಳನ್ನು ತಂದು ಉತ್ತಮ ಭವಿಷ್ಯವನ್ನು, ಭಾರತ ಮತ್ತು ಆಸ್ಟ್ರೇಲಿಯ ಸಂಬಂಧಗಳನ್ನು ಎತ್ತರಕ್ಕೆ ಏರಿಸಲಿವೆ ಎಂದು ಡಾ| ವಿನೋದ ಭಟ್ ತಿಳಿಸಿದರು.
ಕಾರ್ಯಕ್ರಮಗಳ ರೂಪರೇಖೆ, ಮಾರ್ಗ, ಜ್ಞಾನ ವಿನಿಮಯಗಳ ಸುಧಾರಣೆ ಅವಕಾಶ, ಸಂದರ್ಶಕ ಫೆಲೋ, ವಿದ್ಯಾರ್ಥಿ ಮತ್ತು ಸಿಬಂದಿಗಾಗಿ ಸಿಬಂದಿ ಮಾರ್ಗದರ್ಶನ ಅಭಿವೃದ್ಧಿಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ.
ಡಾ| ಭಟ್ ಅವರು 2018ರ ಡಿಸೆಂಬರ್‌ನಲ್ಲಿ ಯುಎನ್‌ಎಸ್‌ಡಬ್ಲ್ಯುಗೆ ಭೇಟಿ ನೀಡಿದ ಸಂದರ್ಭ ಈ ಮಹತ್ವದ ಪಾಲುದಾರಿಕೆಗೆ ಭೂಮಿಕೆ ಸಿದ್ಧವಾಗಿತ್ತು. ಇದಾದ ಬಳಿಕ ಯುಎನ್‌ಎಸ್‌ಡಬ್ಲ್ಯು ಸಹಕುಲಪತಿ, ಸಿಇಒ ಲಾರಿ ಪರ್ಸಿ, ಎಂಜಿನಿಯರಿಂಗ್ ಪ್ರಾಧ್ಯಾಪಕ ಡೀನ್ ಮಾರ್ಕ್ ಹೋಫ್ಮ್ಯಾನ್ ಇದೇ ಜುಲೈಯಲ್ಲಿ ಮಣಿಪಾಲಕ್ಕೆ ಆಗಮಿಸಿದ್ದರು. 2019ರಲ್ಲಿ ಯುಎನ್‌ಎಸ್‌ಡಬ್ಲ್ಯು ಉಪನ್ಯಾಸಕರ ಬಳಗ ಮಣಿಪಾಲಕ್ಕೆ ಎರಡು ಬಾರಿ ಆಗಮಿಸಿತ್ತು.
ತಲಾ 20,000 ಡಾಲರ್ ಮೊತ್ತದ ಹತ್ತು ಅನುದಾನಗಳನ್ನು ಕೊಡಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.