ಅತಿಥಿ ಉಪನ್ಯಾಸಕರ ಸೇವಾ ಭದ್ರತೆಗೆ ಆಗ್ರಹಿಸಿ ಸಾಂಕೇತಿಕ ಧರಣಿ
Team Udayavani, Mar 23, 2018, 7:30 AM IST
ಉಡುಪಿ: 2016-17 ಮತ್ತು 2017-18ನೇ ಸಾಲಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲ ಅತಿಥಿ ಉಪನ್ಯಾಸಕರನ್ನು ಸೇವಾ ಭದ್ರತೆ ವ್ಯಾಪ್ತಿಗೆ ತಂದು ತಜ್ಞರ ಸಮಿತಿ ವರದಿ ತರಿಸಿಕೊಂಡು ಸಂಪುಟ ಸಭೆಯ ಮುಂದೆ ತಂದು ಇತ್ಯರ್ಥಪಡಿಸಿ ಸೂಕ್ತ ವೇತನ ಹೆಚ್ಚಳ ಮಾಡಿ ಸೇವಾ ಭದ್ರತೆ ಘೋಷಿಸಬೇಕು ಎಂದು ಆಗ್ರಹಿಸಿ ಮಾ.20ರಂದು ಅಜ್ಜರಕಾಡು ಹುತಾತ್ಮರ ಸ್ಮಾರಕದ ಎದುರು ಸರಕಾರಿ ಪ.ಪೂ. ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಉಡುಪಿ ಜಿಲ್ಲಾ ಘಟಕ ಧರಣಿ ನಡೆಸಿತು.
ರಾಜ್ಯದ 13 ಸಾವಿರಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದರೂ ಪ್ರಸಕ್ತ 2017-18ರಲ್ಲಿ ನಿಯಾಮವಳಿ ಉಲ್ಲಂ ಸಿ 2160 ಸಹಾಯಕ ಪ್ರಾಧ್ಯಾಪಕರನ್ನು ನೇಮಕ ಮಾಡಿರುವುದರಿಂದ ಪ್ರಸಕ್ತ ಸಾಲಿನಲ್ಲಿ 4,320ಕ್ಕೂ ಹೆಚ್ಚು ಉಪನ್ಯಾಸಕರು ಈಗ ತಾತ್ಕಾಲಿಕ ಹುದ್ದೆಯಿಂದ ಹೊರಬಿದ್ದಿದ್ದಾರೆ. ಪರ್ಯಾಯ ಉದ್ಯೋಗ ಸಿಗದೆ ಕಂಗಾಲಾಗಿದ್ದಾರೆ.
ಪ್ರಸಕ್ತ ನೇಮಕಾತಿಯಲ್ಲಿ ಶೇ.40ರಷ್ಟು ಅಕ್ರಮದಿಂದ ಕೂಡಿದ್ದು ಎಂಬ ವಿಚಾರವನ್ನು ಸ್ವತಃ ಆಯುಕ್ತರು ಕಾಲೇಜು ಶಿಕ್ಷಣ ಇಲಾಖೆ ಸರಕಾರಕ್ಕೆ ವರದಿ ನೀಡಿದ್ದರೂ ಅದನ್ನು ಬದಿಗಿಟ್ಟು ನಿಯಮಬಾಹಿರ ನೇಮಕಾತಿ ಮಾಡಲಾಗಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿದೆ. ಅಲ್ಲದೇ ಅನೇಕ ವರ್ಷಗಳಿಂದ ಸೇವೆ ಸಲ್ಲಿಸು ತ್ತಿರುವ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡುವ ಸಂಬಂಧ ಕಡತವನ್ನು ಕೂಡಲೇ ಸಂಪುಟ ಸಭೆಯ ಮುಂದೆ ತಂದು ಇತ್ಯರ್ಥಗೊಳಿಸಬೇಕು ಎಂದು ಆಗ್ರಹಿಸಿ ಮನವಿ ನೀಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.