ಗ್ರಾ.ಪಂ. ಚುನಾವಣೆಗೆ 194 ಮುಕ್ತ ಚಿಹ್ನೆಗಳ ಆಯ್ಕೆ: ಯಾವ ಯಾವ ಚಿಹ್ನೆಗಳು, ಇಲ್ಲಿದೆ ಮಾಹಿತಿ
Team Udayavani, Oct 29, 2020, 3:56 PM IST
ಉಡುಪಿ: ಸದ್ಯದಲ್ಲಿಯೇ ನಡೆಯುವ ಗ್ರಾಮ ಪಂಚಾಯತ್ ಚುನಾವಣೆ ರಾಜಕೀಯ ಪಕ್ಷರಹಿತವಾಗಿ ನಡೆಯಲಿದ್ದು ರಾಜ್ಯ ಚುನಾವಣ ಆಯೋಗ 194 ಮುಕ್ತ ಚಿಹ್ನೆಗಳನ್ನು ಆಯ್ಕೆ ಮಾಡಿದೆ. ಮೇಲ್ನೋಟಕ್ಕೆ 197 ಚಿಹ್ನೆಗಳನ್ನು ಆಯ್ದುಕೊಂಡಿದ್ದರೂ ಇದರಲ್ಲಿ ಮೂರನ್ನು ಕೈಬಿಡಲಾಗಿದೆ.
ಹವಾನಿಯಂತ್ರಕ, ಅಲಮೇರ, ಆಟೋರಿಕ್ಷಾ, ಬೇಬಿ ವಾಕರ್, ಬಲೂನ್, ಬಳೆ, ಹಣ್ಣು ಇರುವ ಬಾಸ್ಕೆಟ್, ಬ್ಯಾಟ್, ಬಾಟ್ಸಮನ್, ಬ್ಯಾಟರಿ ಟಾರ್ಚ್, ಮುತ್ತಿನ ಹಾರ, ಬೆಲ್ಟ್, ಬೆಂಚ್, ಬೈಸಿಕಲ್ ಪಂಪು, ದುರ್ಬೀನು, ಬಿಸ್ಕತ್ತು, ಕಪ್ಪು ಹಲಗೆ, ಹಾಯಿ ದೋಣಿ ಮತ್ತು ನಾವಿಕ, ಪೆಟ್ಟಿಗೆ, ಬ್ರೆಡ್, ಬ್ರಿಕ್ಸ್, ಸೂಟ್‌ಕೇಸ್, ಬ್ರಶ್, ಬಕೆಟ್, ಕೇಕ್, ಕ್ಯಾಲ್ಕುಲೇಟರ್, ಕೆಮರಾ, ಕ್ಯಾನ್, ದಪ್ಪ ಮೆಣಸಿನಕಾಯಿ (ದೊಣ್ಣೆ ಮೆಣಸು), ಕಾರ್ಪೆಟ್, ಕೇರಂ ಬೋರ್ಡ್, ಹೂಕೋಸು, ಚೈನ್, ಬೀಸುವ ಕಲ್ಲು, ಲಟ್ಟಣಿಗೆ, ಪಾದರಕ್ಷೆ, ಚದುರಂಗ ಫಲಕ, ಚಿಮಣಿ, ಕ್ಲಿಪ್, ಕೋಟು, ತೆಂಗಿನ ತೋಟ, ಬಣ್ಣದ ತಟ್ಟೆ, ಮಂಚ, ಕ್ರೇನ್, ಕ್ಯೂಬ್, ಕಪ್ ಮತ್ತು ಸಾಸರ್, ಕಟ್ಟಿಂಗ್ ಫ್ಲೈಯರ್, ವಜ್ರ, ಡೀಸೆಲ್ ಪಂಪು, ಡಿಶ್ ಆ್ಯಂಟೆನ, ಡೋಲಿ, ಡೋರ್ ಬೆಲ್, ಡ್ರಿಲ್ ಮೆಶಿನ್, ಡಂಬೆಲ್ಸ್, ವಿದ್ಯುತ್ ಕಂಬ, ಲಕೋಟೆ, ಎಕ್ಸ್‌ಟೆನ್ಶನ್ ಬೋರ್ಡ್, ಕೊಳಲು, ಕಾರಂಜಿ, ಲಂಗ, ಫ್ರೈಯಿಂಗ್ ಪಾನ್, ಲಾಳಿಕೆ, ಗ್ಯಾಸ್ ಸಿಲಿಂಡರ್, ಗ್ಯಾಸ್ ಒಲೆ, ಗಿಫ್ಟ್ ಪ್ಯಾಕ್, ಗಾಜಿನ ಲೋಟ, ಗ್ರಾಮ ಫೋನ್, ದ್ರಾಕ್ಷಿ, ಹಸಿ ಮೆಣಸಿನ ಕಾಯಿ, ಹಾರ್ಮೋನಿಯಂ, ಟೋಪಿ, ಹೆಡ್‌ಫೋನ್, ಹೆಲ್ಮೆಟ್, ಹಾಕಿ ಮತ್ತು ಚೆಂಡು, ಐಸ್‌ಕ್ರೀಂ, ನೀರು ಬಿಸಿ ಮಾಡುವ ರಾಡ್, ಇಸ್ತ್ರೀ ಪೆಟ್ಟಿಗೆ, ಬೆಂಡೆಕಾಯಿ, ಲಾಚ್, ಅಂಚೆ ಪೆಟ್ಟಿಗೆ, ಲೈಟರ್, ಊಟದ ಡಬ್ಬಿ, ಬೆಂಕಿ ಪೊಟ್ಟಣ, ಮೈಕ್, ಮಿಕ್ಸಿ, ನೇಲ್ ಕಟ್ಟರ್, ನೆಕ್ ಟೈ, ನೂಡಲ್ಸ್ ಬೌಲ್, ಬಾಣಲೆ, ಪ್ಯಾಂಟ್, ಕಡಲೆಕಾಯಿ, ಪೀಯರ್ಸ್, ಬಟಾಣಿ, ಏಳು ಕಿರಣಗಳ ಪೆನ್ ನಿಬ್, ಪೆನ್ ಸ್ಟಾಂಡ್, ಪೆನ್ಸಿಲ್ ಬಾಕ್ಸ್, ಪೆನ್ಸಿಲ್ ಶಾರ್ಪನರ್, ಲೋಲಕ, ಕುಟ್ಟಾಣಿ, ಪೆಟ್ರೋಲ್‌ಪಂಪ್, ಫೋನ್ ಚಾರ್ಜರ್, ತಲೆದಿಂಬು, ಅನಾನಸ್, ಕರಣಿ (ಪ್ಲಾಸ್ಟರಿಂಗ್ ಟ್ರೊವಲ್), ಆಹಾರ ತುಂಬಿದ ತಟ್ಟೆ, ತಟ್ಟೆ ಸ್ಟಾಂಡ್, ಮಡಕೆ, ಪ್ರಶರ್ ಕುಕ್ಕರ್, ಪಂಚಿಂಗ್ ಮೆಶಿನ್, ರೇಜರ್, ರೆಫ್ರಿಜರೇಟರ್, ಉಂಗುರ, ರೋಡ್‌ರೋಲರ್, ರೂಮ್ ಕೂಲರ್, ರೂಮ್ ಹೀಟರ್, ಸೆಫ್ಟಿ ಪಿನ್, ಗರಗಸ, ಸ್ಕೂಲ್ ಬ್ಯಾಗ್, ಕತ್ತರಿ, ಹೊಲಿಗೆಯಂತ್ರ, ಬೂಟ್, ಸ್ಕಿಪ್ಪಿಂಗ್ ರೋಪ್, ಸ್ಲೇಟು, ಸೋಪ್ ಡಿಶ್, ಕಾಲು ಚೀಲ, ಸ್ಟಾಪ್ಲರ್, ಸ್ಟೆತೋಸ್ಕೋಪ್, ಸ್ಟೂಲ್, ಉಯ್ನಾಲೆ, ಸಿರಿಂಜ್, ಮೇಜು, ಟೀ ಫಿಲ್ಟರ್, ದೂರವಾಣಿ, ದೂರದರ್ಶನ, ಟೆನ್ನಿಸ್ ರಾಕೆಟ್- ಚೆಂಡು, ಟೆಂಟ್, ಟಿಲ್ಲರ್, ಟಾಫೀಸ್, ಹಲ್ಲುಜ್ಜುವ ಬ್ರಶ್, ಹಲ್ಲುಜ್ಜುವ ಪೇಸ್ಟ್, ಟ್ರ್ಯಾಕ್ಟರ್ ಓಡಿಸುವ ರೈತ, ಟ್ರೇ, ತ್ರಿಕೋನ, ಟ್ರಕ್, ತುತ್ತೂರಿ, ಟೈಪ್‌ರೈಟರ್, ಟಯರ್, ವಾಕ್ಯೂಮ್ ಕ್ಲೀನರ್, ಪಿಟೀಲು, ವಾಕಿಂಗ್ ಸ್ಟಿಕ್, ವಾಲ್ ಹುಕ್, ವ್ಯಾಲೆಟ್, ವಾಲ್ನಟ್, ಕಲ್ಲಂಗಡಿ, ಬಾವಿ, ವೀಲ್ ಬ್ಯಾರೋ, ಸೀಟಿ (ವಿಜಿಲ್), ಕಿಟಕಿ, ಉಣ್ಣೆ-ಸೂಜಿ, ಬ್ರೆಡ್ ಟೋಸ್ಟರ್, ಸಿಸಿಟಿವಿ ಕ್ಯಾಮರ, ಗಣಕಯಂತ್ರ, ಗಣಕಯಂತ್ರದ ಮೌಸ್, ಬಾಗಿಲ ಹಿಡಿ, ಕಾಲ್ಚೆಂಡು (ಫುಟ್ಬಾಲ್), ಕಾಲ್ಚೆಂಡು ಆಟಗಾರ, ಕಬ್ಬಿನ ರೈತ, ಶುಂಠಿ, ಕೈಗಾಡಿ, ಹೆಲಿಕಾಪ್ಟರ್, ಗಂಟೆ ಲೋಟ (ಹವರ್ ಗ್ಲಾಸ್), ಹಲಸಿನ ಹಣ್ಣು, ಕೆಟಲ್, ಅಡುಗೆ ಮನೆ ಸಿಂಕ್, ಮಹಿಳೆಯ ಕೈಚೀಲ, ಲ್ಯಾಪ್‌ಟಾಪ್, ಲೂಡೋ, ಕಹಳೆ ಊದುವ ವ್ಯಕ್ತಿ, ಪೆನ್‌ಡ್ರೈವ್, ರೋಬೋಟ್, ರಬ್ಬರ್ ಸ್ಟಾಂಪ್ (ಠಸ್ಸೆ), ಹಡಗು, ಶಟ್ಟರ್, ಸಿತಾರ್, ಸೋಫಾ, ಸ್ಪಾನರ್, ಸ್ಟಂಪ್ಸ್, ಸ್ವಿಚ್ ಬೋರ್ಡ್, ಟಿವಿ ರಿಮೋಟ್, ಜಾವಲಿನ್ ಎಸೆತ, ಇಕ್ಕಳ (ಟಾಂಗ್ಸ್), ಟ್ಯೂಬ್ ಲೈಟ್, ನೀರಿನ ತೊಟ್ಟಿ, ಮೊರ (ವಿನೋವರ್) ಇವಿಷ್ಟು ಚಿಹ್ನೆಗಳಲ್ಲಿ ಯಾವುದಾದರೂ ಒಂದನ್ನು ಅಭ್ಯರ್ಥಿಗಳು ಆಯ್ದುಕೊಳ್ಳಬೇಕಾಗಿದೆ.
ಇದನ್ನೂ ಓದಿ:ಬೆಳಪು ನಲ್ಲಿ ಪೊಲೀಸ್ ಸಂಶೋಧನಾ ಕೇಂದ್ರ, ವಸತಿ ಗೃಹ, ಕವಾಯತು ಮೈದಾನ ನಿರ್ಮಾಣಕ್ಕೆ ಚಿಂತನೆ
ಒಂದು ಕ್ಷೇತ್ರದಲ್ಲಿ ಹಲವು ಅಭ್ಯರ್ಥಿಗಳಿರುವಾಗ ಹಲವು ಚಿಹ್ನೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಇದರಲ್ಲಿ ಬ್ಯಾಟ್, ಬ್ಯಾಟರಿ ಟಾರ್ಚ್, ಕೊಳಲು, ಸಿರಿಂಜ್‌ನಂತಹ ಚಿಹ್ನೆಗಳು ಒಂದೇ ರೀತಿ ಕಾಣುವುದರಿಂದ ಮತದಾನ ಮಾಡುವ ಮತದಾರರಿಗೆ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆಗಳಿವೆ. ಒಂದೊಂದು ವಾರ್ಡ್‌ನಲ್ಲಿ ಸಾಮಾನ್ಯ, ಸಾಮಾನ್ಯ ಮಹಿಳೆ, ಹಿಂದುಳಿದ ವರ್ಗ ಎ, ಬಿ, ಪರಿಶಿಷ್ಟ ಜಾತಿ/ ಪಂಗಡ ಹೀಗೆ ಮೂರ್‍ನಾಲ್ಕು ಅಭ್ಯರ್ಥಿಗಳಿರಬಹುದು. ಒಂದು ವಾರ್ಡ್‌ನಲ್ಲಿ ನಾಲ್ಕು ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದಲ್ಲಿ ಎಲ್ಲ ಅಭ್ಯರ್ಥಿಗಳು ಪ್ರತ್ಯೇಕ ಚಿಹ್ನೆ ಆಯ್ದುಕೊಳ್ಳಬೇಕು. ಒಂದು ವಾರ್ಡ್‌ನಲ್ಲಿ ಒಬ್ಬ ಅಭ್ಯರ್ಥಿ ಆಯ್ದುಕೊಂಡ ಚಿಹ್ನೆಯನ್ನು ಇನ್ನೊಂದು ವಾರ್ಡ್ ಅಭ್ಯರ್ಥಿ ಆಯ್ದು ಕೊಳ್ಳಬಹುದೇ ವಿನಾ ಅದೇ ವಾರ್ಡ್‌ನಲ್ಲಿ ಸಾಧ್ಯವಿಲ್ಲ.
ಮತಗಟ್ಟೆ ಮತ್ತು ಮತದಾರರ ವಿವರಗಳನ್ನು ಸಂಗ್ರಹಿಸಲಾಗಿದ್ದು ಗ್ರಾಮ ಪಂಚಾಯತ್ ಚುನಾವಣೆಯನ್ನು ನಡೆಸಲು ಬೇಕಾದ ಎಲ್ಲ ಸಿದ್ಧತೆಗಳನ್ನು ಚುನಾವಣ ಆಯೋಗದ ನಿರ್ದೇಶನದಂತೆ ನಡೆಸಲಾಗಿದೆ ಎಂದು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಗಳಾದ ಸದಾಶಿವ ಪ್ರಭು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.