ಗೇರು ಉದ್ಯಮಕ್ಕೆ ಸಿಂಡ್ ಬ್ಯಾಂಕ್ ನೆರವು: ವೈ. ನಾಗೇಸ್ವರ ರಾವ್
ಮಣಿಪಾಲ: ಗೇರುಬೀಜ ಸಂಸ್ಕರಣೆ, ರಫ್ತುದಾರರ ಸಮ್ಮೇಳನ
Team Udayavani, Mar 5, 2020, 12:35 AM IST
ಸಿಂಡಿಕೇಟ್ ಬ್ಯಾಂಕ್ ಗೇರುಬೀಜ ಸಂಸ್ಕರಣೆ, ರಫ್ತುದಾರರ ಸಮ್ಮೇಳನವನ್ನು ಬ್ಯಾಂಕಿನ ಇಡಿ ವೈ. ನಾಗೇಸ್ವರ ರಾವ್ ಉದ್ಘಾಟಿಸಿದರು.
ಉಡುಪಿ: ಗೇರುಬೀಜ ಉದ್ಯಮ ಅಭಿವೃದ್ಧಿ, ವಿಸ್ತರಣೆಗೆ ಸಿಂಡಿಕೇಟ್ ಬ್ಯಾಂಕ್ ಆರ್ಥಿಕ ನೆರವು ನೀಡಿದೆ. ಉದ್ಯಮಿಗಳು ತಮ್ಮ ಉತ್ಪನ್ನಗಳ ಗುಣಮಟ್ಟ, ಸಮಯ ಪಾಲನೆಯ ಮೂಲಕ ಇನ್ನಷ್ಟು ಅಭಿವೃದ್ಧಿ ಪಥದತ್ತ ಸಾಗಬೇಕು. ಬ್ಯಾಂಕ್ ಆರಂಭ ದಿಂದಲೂ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾ ಬಂದಿರುವುದಲ್ಲದೆ, ಕೃಷಿಕರಿಗೆ ಆರ್ಥಿಕ ಸಹಾಯ ನೀಡುವು ದರಲ್ಲಿ ಮುಂಚೂಣಿಯಲ್ಲಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಕಾರ್ಯನಿರ್ವಾ ಹಕ ನಿರ್ದೇಶಕ ವೈ. ನಾಗೇಸ್ವರ ರಾವ್ ಹೇಳಿದರು.
ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಗೇರುಬೀಜ ಸಂಸ್ಕರಣೆ ಉದ್ಯಮವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಣಿಪಾಲದ ಮಧುವನ್ ಸೆರಾಯ್ ಹೊಟೇಲ್‌ನಲ್ಲಿ ಮಂಗಳವಾರ ಆಯೋಜಿಸಲಾದ ಗೇರುಬೀಜ ಸಂಸ್ಕರಣೆ ಹಾಗೂ ರಫ್ತುದಾರರ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬ್ಯಾಂಕಿನ ಬೆಂಗಳೂರು ಆದ್ಯತಾ ವಲಯದ ಜಿಎಂ ಟಿ. ಮಣಿವಣ್ಣನ್ ಮಾತನಾಡಿ, ಪ್ರಸ್ತುತ ಗೇರು ಉದ್ಯಮ ಬೃಹತ್ ಮಟ್ಟದಲ್ಲಿ ಅಭಿವೃದ್ಧಿ ಹೊಂದಿ 15 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ. ಗೇರುಬೀಜ ಸಂಸ್ಕರಣೆಯೊಂದಿಗೆ ಜ್ಯೂಸ್, ಕ್ಯಾಂಡಿ, ಚಾಕಲೇಟ್ ಉತ್ಪನ್ನಗಳನ್ನು ತಯಾರಿಸುವ ಬಗ್ಗೆ ಹೆಚ್ಚು ಒತ್ತು ನೀಡಿದಾಗ ಉದ್ಯಮ ಇನ್ನಷ್ಟು ಅಭಿವೃದ್ಧಿಗೊಳ್ಳಲಿದೆ ಎಂದರು.
ಬ್ಯಾಂಕಿನ ಮಣಿಪಾಲ ವಲಯ ಕಚೇರಿಯ ಮಹಾಪ್ರಬಂಧಕ ಭಾಸ್ಕರ ಹಂದೆ ಸ್ವಾಗತಿಸಿ ಪ್ರಸ್ತಾವನೆಗೈದು, ಸಿಂಡಿಕೇಟ್ ಬ್ಯಾಂಕ್ ಗೇರುಬೀಜ ಉದ್ಯಮಕ್ಕೆ ನೆರವು ನೀಡುವ ಮೂಲಕ ದೇಶದ ಆರ್ಥಿಕತೆಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಾ ಬಂದಿದೆ. 1960ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಬೆಳೆದು ನಿಂತ ಬೆಳೆಗೆ ಕೃಷಿ ಸಾಲ ನೀಡಿದ ಪ್ರಥಮ ಬ್ಯಾಂಕ್ ಎಂಬ ಹೆಗ್ಗಳಿಕೆ ಬ್ಯಾಂಕಿಗಿದೆ. ಭಾರತದಲ್ಲಿ 4,064 ಶಾಖೆಗಳನ್ನು, ಲಂಡನ್‌ನಲ್ಲಿ 1 ಶಾಖೆಯನ್ನು ಹೊಂದಿರು ವುದಲ್ಲದೆ, 4,577 ಎಟಿಎಂಗಳು ಕಾರ್ಯಾ ಚರಿಸುತ್ತಿವೆ ಎಂದರು.
ಟಿ ಆ್ಯಂಡ್ ಐಬಿಡಿ ಮುಂಬಯಿಯ ಮಹಾಪ್ರಬಂಧಕ ಮೋಹನ ರಾವ್, ಗೇರುಬೀಜ ಉದ್ಯಮಿಗಳಾದ ಬೋಳ ರಮಾನಾಥ ಕಾಮತ್, ವಾಲ್ಟರ್ ಡಿ’ಸೋಜಾ, ಕರ್ನಾಟಕ ರಾಜ್ಯ ಗೇರುಬೀಜ ಸಂಸ್ಕರಣೆ ಮತ್ತು ರಫ್ತುದಾರರ ಸಂಘದ ಅಧ್ಯಕ್ಷ ಸುಬ್ರಾಯ ಪೈ ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಮಂಗಳೂರು, ಉಡುಪಿ, ಕಾರವಾರ, ಬೆಳಗಾವಿ ಜಿಲ್ಲೆಗಳ ಗೇರುಬೀಜ ಸಂಸ್ಕರಣೆ ಹಾಗೂ ರಫ್ತುದಾರರು ಭಾಗವಹಿಸಿದ್ದರು. ಗೇರು ಬೀಜ ಉತ್ಪಾದನೆ, ಆಮದು ಮತ್ತು ರಫ್ತಿಗೆ ಸಂಬಂಧ ಪಟ್ಟ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು. ಗೇರುಬೀಜ ಸಂಸ್ಕರಣೆ, ಉದ್ಯಮದ ವಿಚಾರಧಾರೆಗಳನ್ನು ಒಳಗೊಂಡ ವೀಡಿಯೋ ಪ್ರದರ್ಶಿಸ ಲಾಯಿತು. ಬ್ರಹ್ಮಗಿರಿ ಶಾಖೆಯ ಹಿರಿಯ ಶಾಖಾ ಪ್ರಬಂಧಕಿ ಅರ್ಚನಾ ಎನ್. ನಿರೂಪಿಸಿದರು. ವಲಯ ಕಚೇರಿಯ ಉಪಮಹಾಪ್ರಬಂಧಕಿ ಲೀಲಾ ಪೀಟರ್ ಪಿಂಟೋ ವಂದಿಸಿದರು.
ಪ್ರಸ್ತುತ ಜಗತ್ತನ್ನು ಭೀತಿಗೀಡು ಮಾಡಿರುವ ಕೊರೊನಾ ವೈರಸ್‌ನಿಂದಾಗಿ ಗೇರು ಉದ್ಯಮಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ತೊಡಕಾಗಿದೆ. ಇದು ತಾತ್ಕಾಲಿಕ ಹಿನ್ನೆಡೆಯಾಗಿದ್ದು, ಸದ್ಯದಲ್ಲೇ ಪರಿಹಾರ ಲಭಿಸಲಿದೆ. ದೇಶದ ಹಿತದೃಷ್ಟಿಯಿಂದ ಉದ್ಯಮಿಗಳು, ಕೃಷಿಕರಿಗೆ ನಿರಂತರ ಆರ್ಥಿಕ ನೆರವು ನೀಡಲು ಬ್ಯಾಂಕ್ ಸದಾ ಸಿದ್ಧವಿದೆ.
-ವೈ. ನಾಗೇಸ್ವರ ರಾವ್, ಕಾರ್ಯನಿರ್ವಾಹಕ ನಿರ್ದೇಶಕ, ಸಿಂಡಿಕೇಟ್ ಬ್ಯಾಂಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
ಸ್ವಚ್ಛತೆ, ಬಯಲು ಬಹಿರ್ದೆಸೆ ಮುಕ್ತ ಗ್ರಾಮ; ಕಾರ್ಕಳ ಪ್ರಥಮ, ಹೆಬ್ರಿಗೆ ದ್ವಿತೀಯ ಸ್ಥಾನ
ಗೋವಂಶ ಸುರಕ್ಷೆಗಾಗಿ ಕೋಟಿ ವಿಷ್ಣುಸಹಸ್ರನಾಮ ಪಠನ, ಜಪ ಅಭಿಯಾನ: ವಿವಿಧ ಮಠಾಧೀಶರ ಬೆಂಬಲ
Udupi: ದಿಢೀರ್ ಅಸ್ವಸ್ಥ; ಅಂಬಾಗಿಲಿನ ವ್ಯಕ್ತಿಯೊಬ್ಬರು ಸಾವು
Udupi: ವಿದೇಶದಲ್ಲಿ ಎಂಪಿಎಚ್ ಸೀಟ್ ಭರವಸೆ; ಹಣ ಪಡೆದು ವಂಚನೆ: 3 ಮಂದಿಯ ಬಂಧನ