ಸಿಂಡಿಕೇಟ್ ಸರ್ಕಲ್ ಟವರ್ ಬೀಳುವ ಆತಂಕ
Team Udayavani, May 22, 2019, 6:00 AM IST
ಉಡುಪಿ: ಉಡುಪಿ- ಮಣಿಪಾಲ 169ಎ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಲ್ಲಿ ಹಳೆಯ ರಸ್ತೆಯ ಹಲವೆಡೆ ಅಗೆದು ಹಾಕಲಾಗಿದ್ದು. ಇಲ್ಲಿರುವ ಸಿಸಿಟಿವಿ ಟವರ್‌ನ ಸುತ್ತಲಿನ ಮಣ್ಣು ಕೂಡ ತೆಗೆದು ಹಾಕಲಾಗಿದ್ದು ಟವರ್ ಅಪಾಯದಂಚಿನಲ್ಲಿದೆ.
ಒಂದು ತಿಂಗಳ ಹಿಂದೆಯೇ ಹಳೆಯ ರಸ್ತೆ ಮತ್ತು ವೃತ್ತದ ಭಾಗ ತೆರವು ಮಾಡಲಾಗಿತ್ತು. ಇದೇ ಸಂದರ್ಭ ಸಿಸಿ ಟಿವಿ ಟವರ್‌ನ ಬುಡದ ಸುತ್ತಲಿನ ಮಣ್ಣು ಕೂಡ ತೆಗೆಯಲಾಗಿದೆ. ಟವರನ್ನು ತೆರವುಗೊಳಿಸಿಲ್ಲ. ಇದುವರೆಗೆ ರಸ್ತೆಯ ಕಾಮಗಾರಿಯನ್ನೂ ನಡೆಸಿಲ್ಲ. ಇದೀಗ ಮಳೆಗಾಲ ಸಮೀಪಿಸುತ್ತಿರುವುದರಿಂದ ಟವರ್‌ನ ಬುಡದ ಮಣ್ಣು ಕೊಚ್ಚಿ ಹೋಗಿ ಟವರ್ ಬೀಳುವ ಅಪಾಯವಿದೆ. ಪಕ್ಕದಲ್ಲೇ ಸೂಪರ್ ಮಾರ್ಕೆಟ್, ಇತರ ಅಂಗಡಿ, ಕಚೇರಿಗಳು ಇವೆ. ಜನನಿಬಿಡ ಸ್ಥಳದಲ್ಲಿ ಅಪಾಯಕಾರಿಯಾಗಿರುವ ಈ ಟವರ್‌ನ್ನು ಕೂಡಲೇ ತೆರವುಗೊಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಳೆ ನೀರಿನ ಆತಂಕ
ಇದೇ ಜಾಗದಲ್ಲಿ ರಸ್ತೆ ಮೇಲ್ಭಾಗದಿಂದ ಹಾದು ಹೋಗಿದ್ದು ತಳಭಾಗದಲ್ಲಿರುವ ಅಂಗಡಿ, ಕಚೇರಿಗಳಿಗೆ ಮಳೆ ನೀರು ನುಗ್ಗುವ ಆತಂಕ ಎದುರಾಗಿದೆ. ಮಣ್ಣು ಹಾಕಿ ಬಿಟ್ಟು ಹೋದವರು ಮತ್ತೆ ಕಾಮಗಾರಿ ನಡೆಸಿಲ್ಲ. ಒಂದು ಮಳೆ ಬಂದರೂ ಮಣ್ಣು ಅಂಗಡಿ ಸೇರಲಿದೆ. ಇಲ್ಲಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸುವಂತೆ ಈಗಾಗಲೇ ಶಾಸಕರಿಗೂ ಮನವಿ ಮಾಡಿದ್ದೇವೆ ಎಂದು ಸ್ಥಳೀಯ ವ್ಯಾಪಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.