ತಹಶೀಲ್ದಾರರ ಜೀಪ್ ತಡೆದು, ಘೇರಾವ್ ಹಾಕಿ ಪ್ರತಿಭಟನೆ
ಹಂಗಾರಕಟ್ಟೆ : ಫಿಶ್‌ಮಿಲ್ ತನಿಖೆಗೆ ಬಾರದ ಎ.ಸಿ.
Team Udayavani, Apr 3, 2019, 6:30 AM IST
ಕೋಟ: ಐರೋಡಿ ಗ್ರಾ.ಪಂ. ವ್ಯಾಪ್ತಿಯ ಬಾಳುRದ್ರು ಗ್ರಾಮದ ಸ.ಹಿ.ಪ್ರಾ. ಸಮೀಪ ಕಾರ್ಯನಿರ್ವಹಿಸುತ್ತಿರುವ ಯಶಸ್ವಿನಿ ಫಿಶ್‌ಕಟ್ಟಿಂಗ್ ಶೆಡ್ ವಿರುದ್ಧ ಶಾಲೆಯವರು, ಸಾರ್ವಜನಿಕರು ದೂರು ನೀಡಿದ್ದು ಸಮಸ್ಯೆಯ ಪರಿಶೀಲನೆಗಾಗಿ ಆಗಮಿಸಬೇಕಿದ್ದ ಕುಂದಾಪುರ ಉಪವಿಭಾಗಾಧಿಕಾರಿ ಮಧುಕೇಶ್ವರ್ ಅವರು ಕೊನೆಯ ಕ್ಷಣದಲ್ಲಿ ಗೈರಾದ ಕುರಿತು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ ಘಟನೆ ಎ.2ರಂದು ಬಾಳುRದ್ರುವಿನಲ್ಲಿ ನಡೆಯಿತು.
ಫಿಶ್‌ಶೆಡ್‌ನಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಈ ಕುರಿತು ಪರಿಶೀಲನೆ ನಡೆಸಿ ಶಾಶ್ವತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ದೂರು ಸಲ್ಲಿಸಿದ್ದರು.
ತಹಶೀಲ್ದಾರರಿಗೆ ಘೇರಾವ್
ಎ.ಸಿ.ಯವರ ಭೇಟಿ ರದ್ದಾದ ವಿಚಾರವನ್ನು ತಿಳಿಸಲು ಬ್ರಹ್ಮಾವರ ತಹಶೀಲ್ದಾರ ಕಿರಣ್ ಘೋರಯ್ಯ ಸ್ಥಳಕ್ಕೆ ಆಗಮಿಸಿ ಸ್ಥಳೀಯರ ಮನವೊಳಿಕೆಗೆ ಮುಂದಾದರು. ಆಗ ಆಕ್ರೋಶಗೊಂಡ ಸ್ಥಳೀಯರು ಎ.ಸಿ.ಯವರು ತತ್‌ಕ್ಷಣ ಸ್ಥಳಕ್ಕಾಗಮಿಸಬೇಕು. ಇಲ್ಲವಾದರೆ ನಿಮ್ಮನ್ನು ಇಲ್ಲಿಂದ ತೆರಳಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಎ.ಸಿ.ಯವರು ಚುನಾವಣೆ ಕರ್ತವ್ಯದಲ್ಲಿರುವ ಕಾರಣ ಅವರು ಬರಲು ಸಾಧ್ಯವಾಗುತ್ತಿಲ್ಲ ಎಂದು ತಹಶೀಲ್ದಾರರು ತಿಳಿಸಿದರು. ಆಗ ಆಕ್ರೋಶ ಗೊಂಡ ಸ್ಥಳೀಯರು ತಹಶೀಲ್ದಾರರ ಜೀಪ್ ಎದುರು ಕೂತು ಪ್ರತಿಭಟಿಸಿದರು.
ಚುನಾವಣೆ ಬಹಿಷ್ಕರಿಸುತ್ತೇವೆ, ಶಾಲೆಗೆ ಕಳುಹಿಸುವುದಿಲ್ಲ
ಎ. 10ರಂದು ಶೈಕ್ಷಣಿಕ ಅವಧಿ ಮುಗಿಯುವ ಒಳಗೆ ಎ.ಸಿ.ಅವರು ಸ್ಥಳ ಪರಿಶೀಲಿಸಿ ವರದಿ ನೀಡಬೇಕು, ಯಾವುದೇ ದಾಖಲೆ ಇಲ್ಲದೆ ಕಾರ್ಯ ನಿರ್ವಹಿಸುತ್ತಿರುವ ಫಿಶ್‌ಶೆಡ್ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಗ್ರಾಮಸ್ಥರೆಲ್ಲ ಸೇರಿ ಚುನಾವಣೆ ಬಹಿಷ್ಕರಿಸುತ್ತೇವೆ, ಮುಂದಿನ ವರ್ಷ ದಿಂದ ಯಾರೂ ಮಕ್ಕಳನ್ನು ಶಾಲೆಗೆ ಕಳುಹಿ ಸುವುದಿಲ್ಲ ಎನ್ನುವ ಎಚ್ಚರಿಕೆ ನೀಡಿದರು.
ಠಾಣಾಧಿಕಾರಿಗಳ ಮಧ್ಯಸ್ಥಿಕೆ: ರಾಜಿ
ಸುಮಾರು 1ಗಂಟೆ ಕಾಲ ತಹಶೀಲ್ದಾರರ ಜೀಪ್ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅನಂತರ ಕೋಟ ಠಾಣೆಯ ಉಪನಿರೀಕ್ಷಕ ರಫಿಕ್ ಎಂ. ಅವರು ಸ್ಥಳಕ್ಕಾಗಮಿಸಿ ಊರಿನವರೊಂದಿಗೆ ಮಾತುಕತೆ ನಡೆಸಿದರು. ಎ.ಸಿ.ಯವರು ತತ್‌ಕ್ಷಣ ಸ್ಥಳಕ್ಕೆ ಬರಲು ಸಾಧ್ಯವಿಲ್ಲ. ಆದರೆ ಮುಂದೆ ಅವರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುವ. ಅಲ್ಲಿಯ ತನಕ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಠಾಣಾಧಿಕಾರಿಗಳ ಮನವಿಗೆ ಸ್ಪಂದಿಸಿದ ಊರಿನವರು ಪ್ರತಿಭಟನೆ ಹಿಂತೆಗೆದುಕೊಂಡರು.
ಕೋಟ ಕಂದಾಯ ಅಧಿಕಾರಿ ಚಂದ್ರಹಾಸ್ ಬಂಗೇರ, ಬಾಳುRದ್ರು ಹಿತರಕ್ಷಣಾ ಸಮಿತಿ ಅಧ್ಯಕ್ಷ ಸುರೇಶ್ ಅಡಿಗ, ಅಂಥೋನಿ ಡಿ’ಸೋಜಾ, ಇಬ್ರಾಹಿಂ ಸಾಹೇಬ್, ಗ್ರಾ.ಪಂ. ಉಪಾಧ್ಯಕ್ಷೆ ಬೇಬಿ ಸಾಲ್ಯಾನ್, ರಾಜೇಶ್ ಪೂಜಾರಿ, ಇಂದಿರಾ, ರವೀಂದ್ರ ಸುವರ್ಣ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಪ್ರತಿಭಟನೆ
ಶಾಲೆಯ ಪಕ್ಕದಲ್ಲಿ ಫಿಶ್ ಮಿಶ್ ಇರುವುದರಿಂದ ಅಸಹ್ಯವಾದ ವಾಸನೆ ಬರುತ್ತಿದೆ. ಇದರಿಂದ ನಮಗೆ ಸರಿಯಾಗಿ ಪಾಠದಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ಫಿಶ್‌ಶೆಡ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದಿಕ್ಕಾರದ ಘೋಷಣೆ ಕೂಗಿ, ನ್ಯಾಯ ನೀಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತಹಶೀಲ್ದಾರರ ಜೀಪ್‌ಗೆ ಮುತ್ತಿಗೆ ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.