ಸಾರ್ವಜನಿಕ ಶೌಚಾಲಯಕ್ಕೆ ಟ್ಯಾಂಕರ್ ನೀರು !
Team Udayavani, May 10, 2019, 6:15 AM IST
ಉಡುಪಿ: ನೀರಿನ ಬಿಸಿ ಕೇವಲ ಮನೆ, ಹೊಟೇಲ್, ಧಾರ್ಮಿಕ ಕೇಂದ್ರಗಳಿಗೆ ಮಾತ್ರವಲ್ಲದೆ ಸಾರ್ವಜನಿಕ ಶೌಚಾಲಯಕ್ಕೂ ತಟ್ಟಿದೆ.
ಸರಕಾರಿ ಕಚೇರಿ ಕೆಲಸಗಳಿಗಾಗಿ ನಗರಕ್ಕೆ ಬರುವ ಜನರು ಹಾಗೂ ಪಟ್ಟಣದ ನಿವಾಸಿಗಳು ಬಸ್ ನಿಲ್ದಾಣದಲ್ಲಿರುವ ಶೌಚಾಲಯಕ್ಕೆ ಹೋಗುವಂತಹ ಅನಿವಾರ್ಯತೆ ಬಂದಿದೆ. ಇದಲ್ಲದೆ ನೀರಿನ ಕೊರತೆಯಾಗಿರುವುದರಿಂದ ಬಸ್ ನಿಲ್ದಾಣ ಆಸುಪಾಸಿನ ಫ್ಲ್ಯಾಟ್ ನಿವಾಸಿಗಳು “ತುರ್ತು’ ಕರೆ ಬಂದರೆ ಸಾರ್ವಜನಿಕ ಶೌಚಾಲಯವನ್ನು ಹುಡುಕಿ ಹೋಗಬೇಕಾಗಿದೆ. ನಗರಸಭೆ ಸುಪರ್ದಿಯಲ್ಲಿರುವ ಶೌಚಾಲಯ ನಿರ್ವಹಣೆಕಾರರು ಅಧಿಕ ಹಣ ನೀಡಿ ಟ್ಯಾಂಕರ್ ಮೂಲಕ ನೀರು ತರಿಸಿಕೊಂಡು ನಿರ್ವಹಿಸುತ್ತಿ¨ªಾರೆ.
ಸಾರ್ವಜನಿಕ ಶೌಚಾಲಯದವರು ಹಿಂದೆ ಪಡೆಯುತ್ತಿರುವ ದರವನ್ನೇ ಈಗಲೂ ಪಡೆದುಕೊಳ್ಳುತ್ತಿ¨ªಾರೆ. ಮಣಿಪಾಲ, ಅಲೆವೂರು, ಆತ್ರಾಡಿ, ಮಲ್ಪೆ, ಸಂತೆಕಟ್ಟೆ, ಅಂಬಾಗಿಲು, ಅಂಬಲಪಾಡಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೆರಳುವ ವಾಹನಗಳು ನಗರದ ಸಿಟಿ ಬಸ್ ನಿಲ್ದಾಣಕ್ಕೆ ಬಂದು ತೆರಳುತ್ತದೆ. ನಿತ್ಯ 500ಕ್ಕೂ ಹೆಚ್ಚಿನ ಮಂದಿ ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುತ್ತಿ¨ªಾರೆ. ಇದೇ ರೀತಿ ಇತರ ಸಾರ್ವಜನಿಕ ಶೌಚಾಲಯದವರ ಸ್ಥಿತಿಯೂ ಹೀಗೆ ಇದೆ.
ಪ್ರತಿನಿತ್ಯ ಶೌಚಾಲಯದಿಂದ 1,500 ರೂ., ಆದಾಯ ಬರುತ್ತದೆ. 2 ಸಾವಿರ ರೂ. ನೀಡಿ ಟ್ಯಾಂಕರ್ ನೀರು ತರಿಸಿಕೊಳ್ಳುತ್ತಿದ್ದೇವೆ. ನಷ್ಟವಾದರೂ ಪರವಾಗಿಲ್ಲ ಜನರ ಸೇವೆ ಮುಖ್ಯ ಎಂದು ಶೌಚಾಲಯದ ಉಸ್ತುವಾರಿ ಅಜಯಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.