ಮ್ಯಾನೇಜ್‌ಮೆಂಟ್‌ನಲ್ಲಿ ಮೊದಲ ಫ್ರಾನ್ಸ್- ಭಾರತ ಪಿಎಚ್.ಡಿ.
Team Udayavani, Mar 27, 2018, 9:20 AM IST
ಉಡುಪಿ: ವಿಶ್ವವಿದ್ಯಾನಿಲಯಗಳು, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರಕ್ಕಾಗಿ ಮೊದಲ ಭಾರತ- ಫ್ರಾನ್ಸ್ ಜ್ಞಾನ ಶೃಂಗಸಭೆಯು ಈಚೆಗೆ ಹೊಸದಿಲ್ಲಿಯಲ್ಲಿ ನಡೆದ ಸಂದರ್ಭ ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ಸಂಸ್ಥೆಯು ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಮೊದಲ ಫ್ರಾನ್ಸ್ -ಭಾರತ ಪಿಎಚ್.ಡಿ. ವಿನಿಮಯ ಒಡಂಬಡಿಕೆಗೆ ಫ್ರಾನ್ಸ್‌ನ ರೆನೆಸ್ ಸ್ಕೂಲ್ ಆಫ್ ಬಿಸಿನೆಸ್ ಸಂಸ್ಥೆಯೊಂದಿಗೆ ಸಹಿ ಹಾಕಿತು.
ಇದರಡಿ ಪ್ರತೀ ವರ್ಷ ಟ್ಯಾಪ್ಮಿಯ ಆಯ್ದ ವಿದ್ಯಾರ್ಥಿಗಳು ತಮ್ಮ ಪ್ರಬಂಧ ಅಧ್ಯಯನಗಳನ್ನು ನಡೆಸುವುದರ ಜತೆಗೆ ಸಂಭಾವ್ಯ ಜಂಟಿ ಸಂಶೋಧನ ಸಹಭಾಗಿತ್ವ ಸಂಬಂಧಗಳನ್ನು ಅಭಿವೃದ್ಧಿಪಡಿಸಲು ಮುಂದಾಗಲಿದ್ದಾರೆ. ಒಪ್ಪಂದ ಭಾಗಿ ಫ್ರೆಂಚ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಪಿಎಚ್.ಡಿ. ವಿದ್ಯಾರ್ಥಿಗಳು ಟ್ಯಾಪ್ಮಿಯಲ್ಲಿ ಎರಡು ಸೆಮಿಸ್ಟರ್‌ಗಳ ಕಾಲ ಅಧ್ಯಯನ ನಡೆಸಲಿದ್ದಾರೆ. ಇದು ದೀರ್ಘಕಾಲೀನ ಅಂತಾರಾಷ್ಟ್ರೀಯ ಜಂಟಿ ಸಂಶೋಧನೆಗಳ ಕಡೆಗೆ ಮುನ್ನಡೆಯುವ ಅವಕಾಶವಾಗಿದೆ. ತಮ್ಮ ಪ್ರಯಾಣದ ಆರಂಭ ಹಂತದಲ್ಲಿ ಸಂಶೋಧಕರು ಸಹಭಾಗಿತ್ವ ನಡೆಸಲಿದ್ದಾರೆ. ಜಗತ್ತಿನ 40 ದೇಶಗಳಿಂದ ಬಂದ ಸಿಬಂದಿ ಸದಸ್ಯರು ಶೇ. 90ರಷ್ಟಿರುವ ಹಾಗೂ ಫ್ರೆಂಚ್ ಟ್ರಿಪಲ್ ಅಕ್ರೆಡಿಟೆಡ್ ಸ್ಕೂಲ್‌ಗಳು ಟ್ಯಾಪ್ಮಿ ಮಾದರಿಯ ಪಾಲುದಾರರಾಗಲಿವೆ. ಕೇವಲ ಶೈಕ್ಷಣಿಕ ಉತ್ಕೃಷ್ಟತೆಯ ಖಾತರಿ ಮಾತ್ರವಲ್ಲದೆ ದೀರ್ಘಕಾಲದಲ್ಲಿ ಅಂತಾರಾಷ್ಟ್ರೀಯ ಸಿಬಂದಿಯನ್ನು ಸ್ವಾಗತಿಸುವ ಸಾಮರ್ಥ್ಯದಲ್ಲೂ ಇವೆರಡೂ ಸಂಸ್ಥೆಗಳು ಉತ್ತಮ ಪಾಲುದಾರರಾಗಲಿವೆ ಎಂದು ಟ್ಯಾಪ್ಮಿ ಅಂತಾರಾಷ್ಟ್ರೀಯ ಸಂಬಂಧಗಳ ವಿಭಾಗದ ಮುಖ್ಯಸ್ಥ ಪ್ರೊ| ದಯಾಶಂಕರ್ ಹೇಳಿದ್ದಾರೆ. ಶೃಂಗಸಭೆಯಲ್ಲಿ ಫ್ರಾನ್ಸ್‌ನ ಉನ್ನತ ಶಿಕ್ಷಣ ಮತ್ತು ಸಂಶೋಧನ ಇಲಾಖೆಯ ಸಚಿವ ಫ್ರೆಡರಿಕ್ ವಿಡಾಲ್ ಮತ್ತು ಭಾರತದ ಮಾನವ ಸಂಪದಭಿವೃದ್ಧಿ ಸಚಿವ ಪ್ರಕಾಶ್ ಜಾಬ್ಡೇಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Telugu actor: ಸಹ ನಟಿಗೆ ಲೈಂಗಿಕ ಕಿರುಕುಳ; ಖ್ಯಾತ ನಟನ ಬಂಧನ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.