ತಪ್ಪು ಕರ ನೀತಿ ಕಪ್ಪು ಹಣಕ್ಕೆ ಕಾರಣ: ಗಣೇಶ್‌ ಶೆಟ್ಟಿ

Team Udayavani, Feb 23, 2017, 12:12 PM IST

2202kde6.jpg

ಕುಂದಾಪುರ:   ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಆರಂಭಿಸಿದ ಕರ ವಸೂಲಿ ನೀತಿಯನ್ನು, ಇನ್ನಷ್ಟು ಕಠಿನವಾಗಿ ಭಾರತ ಸರಕಾರ ಜನರ ಮೇಲೆ ಹೇರಲು ಪ್ರಯತ್ನಿಸಿದುದು ಕಪ್ಪು ಹಣ ಸೃಷ್ಟಿಗೆ ಕಾರಣವಾಯಿತು. ದಶಕಗಳ ಅನಂತರ ಪ್ರಮಾದದ ಅರಿವಾಗಿ ತೆರಿಗೆ ನೀತಿಯಲ್ಲಿ ಬದಲಾವಣೆ ಮಾಡಿದರೂ ಆದಾಯ ತೆರಿಗೆ ಇಲಾಖೆಯ ಕರಕಟ್ಟುವವರ ಮೇಲೆಯೇ ಮುಗಿ ಬೀಳುವ ಮನೋ ಭಾವದಿಂದ ಜನರು ಸಂತೋಷದಿಂದ ತೆರಿಗೆ ಕಟ್ಟದಂತಾಗಿದೆ ಎಂದು ಹಿರಿಯ ಲೆಕ್ಕ ಪರಿಶೋಧಕ, ರೋಟರಿ ಜಿಲ್ಲಾ ಮಾಜಿ ಅಸಿಸ್ಟೆಂಟ್‌ ಗವರ್ನರ್‌ ಗಣೇಶ ಶೆಟ್ಟಿ ಮೊಳಹಳ್ಳಿ ಹೇಳಿದರು.

ರೋಟರಿ ಕುಂದಾಪುರ ದಕ್ಷಿಣ ಏರ್ಪಡಿಸಿದ ಕಪ್ಪು ಹಣದ ಸುತ್ತಮುತ್ತ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಬ್ರಿಟಿಷರು ಆಡಳಿತ ನಡೆಸುವಾಗ ಗರಿಷ್ಠ ಶೇ. 25 ತೆರಿಗೆ ಇತ್ತು. ಅವರು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಮುನ್ನ ಅದನ್ನು ಶೇ. 63ಕ್ಕೆ ಏರಿಸಿದರು. ಅದರ ಕಾರಣ ಆದಷ್ಟು ಹೆಚ್ಚು ಹಣ ಪಡೆದುಕೊಳ್ಳುವುದು ಅಥವಾ ಇಲ್ಲಿಯ ಕೈಗಾರಿಕೋದ್ಯಮದ ಅಭಿ ವೃದ್ಧಿಗೆ ತಡೆ ಒಡ್ಡುವುದು. ಆದರೆ ಭಾರತದಲ್ಲಿ ನಮ್ಮದೇ ನೂತನ ಸಹಕಾರ ರಚನೆಗೊಂಡಾಗ ಇದೇ ಕರಮಟ್ಟವನ್ನು ಶೇ. 79ರಿಂದ 94ಕ್ಕೆ ಕೊಂಡೊಯ್ದರು. ಉದ್ಯಮ, ವ್ಯವಹಾರ ನಡೆಸುವುದಾದರೂ ಹೇಗೆ, ತನಗಾಗಿ ಏನಾದರೂ ಉಳಿಸಿಕೊಳ್ಳುವುದಾದರೂ ಹೇಗೆ? ಹಾಗಾಗಿ ಸರಕಾರಕ್ಕೆ ತಪ್ಪು ಲೆಕ್ಕ ನೀಡಿ ನಿಶ್ಚಿತವಾದ ಕರ ಕಟ್ಟುವುದನ್ನು ತಪ್ಪಿಸಿಕೊಳ್ಳುವ ಮನೋಭಾವ ಸಹಜ ವಾಗಿ ಉದ್ಭವವಾಯಿತು. ಜನರ ಮೇಲೆ ತೆರಿಗೆ ಹೊರೆಯಿಂದ ಅರ್ಥ ವ್ಯವಸ್ಥೆಯಲ್ಲಿ ಆಗಿರುವ ಪ್ರಮಾದದ ಅರಿವು ಆಗಬೇಕಾದರೆ ಸರಕಾರಕ್ಕೆ 15 ವರ್ಷಗಳೇ ಬೇಕಾಯಿತು. ಆನಂತರವೂ ಈ ತೆರಿಗೆ ಕ್ರಮದಿಂದಾದ ಅವ್ಯವಸ್ಥೆ ಸರಿಪಡಿಸುತ್ತ ಬರಲು ಹಲವು ಸರಕಾರಗಳು ಬರಬೇಕಾಯಿತು,  ಇಂದೂ ಸಹ ಕರ ಪದ್ಧತಿ ನ್ಯಾಯಯುತವಾಗಿಲ್ಲ. ಕಂಪೆನಿಗಳಿಗೆ ಇರುವ ಅನುಕೂಲತೆ. ವೈಯಕ್ತಿಕವಾಗಿ ವ್ಯವಹಾರ ನಡೆಸು ವವರಿಗಿಲ್ಲ. ಆದಾಯ ತೆರಿಗೆ ಇಲಾಖೆ ಯವರೂ ಆದಾಯ ಕಟ್ಟುತ್ತಿ ದ್ದವರ ಮೇಲೆ ಒತ್ತಡದ ಕ್ರಮ ಕೈಗೊಳ್ಳುತ್ತಿದ್ದಾರೆ ವಿನಾ ಸಾಕಷ್ಟು ಸಂಪಾದನೆ ವಿವಿಧ ಭಾಗಗಳಿಂದ ಕ್ರೋಡೀಕರಿಸುತ್ತಿರುವ ಜನರತ್ತ ಗಮನವೇ ಹರಿಸುತ್ತಿಲ್ಲ. ಕರಕಟ್ಟು ವವರು ಸಂಕಟ ಪಡುತ್ತಿದ್ದರೆ, ಕಟ್ಟದವರು ಸಂತೃಪ್ತಿಯಲ್ಲಿದ್ದಾರೆ ಎಂದರು.

ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಓಝಲಿನ್‌ ರೆಬೆಲ್ಲೊ ಅಧ್ಯಕ್ಷತೆ ವಹಿಸಿದ್ದರು. ಕೆ.ಕೆ. ಕಾಂಚನ್‌ ಅತಿಥಿ ಯನ್ನು ಪರಿಚಯಿಸಿದರು. ಕಾರ್ಯ ದರ್ಶಿ ಫ್ಲೆ ವಿನ್‌ ವಂದಿಸಿದರು.

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

Siddakatte Kodange Kambala: ಈ ಸೀಸನ್‌ ನ ಮೊದಲ ಕಂಬಳದ ಫಲಿತಾಂಶ ಇಲ್ಲಿದೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.