Teacher’s Day; ದೇಶ ಮೊದಲು ಎಂಬ ಶಿಕ್ಷಣ ಅಗತ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Team Udayavani, Sep 6, 2024, 1:04 AM IST

Teacher’s Day; ದೇಶ ಮೊದಲು ಎಂಬ ಶಿಕ್ಷಣ ಅಗತ್ಯ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಜಾತಿ, ಧರ್ಮ, ವೈಯಕ್ತಿಕ ಬದುಕಿಗಿಂತ ದೇಶ ದೊಡ್ಡದು ಎಂಬ ಭಾವನೆ ಮಕ್ಕಳಲ್ಲಿ ಮೂಡಿಸುವಂಥ ಶಿಕ್ಷಣ ವ್ಯವಸ್ಥೆ ಅಗತ್ಯ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಜಿಲ್ಲಾಡಳಿತ, ಜಿ.ಪಂ., ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಇ ಹಾಗೂ ಬಿಇಒ ಕಚೇರಿ, ಅಂಬಲಪಾಡಿಯ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಸಹಯೋ ಗದಲ್ಲಿ ಗುರುವಾರ ಕಿದಿಯೂರು ಹೊಟೇಲ್‌ನಲ್ಲಿ ಜರಗಿದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮಾತ ನಾಡಿದರು.

ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಡಾ| ಜಿ. ಶಂಕರ್‌ ಮಾತನಾಡಿ, ಶಿಕ್ಷಣದಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯ. ಪ್ರತಿಯೊಬ್ಬರೂ ಶಿಕ್ಷಣ ಪಡೆಯುವಂತೆ ಆಗಬೇಕು ಎಂದು ಆಶಿಸಿದರು.

ಜಿಲ್ಲೆಯಲ್ಲಿ ಶೇ.95 ರಷ್ಟು ಶಿಕ್ಷಕರು ಪ್ರಾಮಾಣಿಕ, ಮನಃಪೂರ್ವಕವಾಗಿ ಸೇವೆ ಸಲ್ಲಿಸುತ್ತಿದ್ದು, ಕೆಲವರು ಸರಿ ಯಾಗಿ ಕಾರ್ಯ ನಿರ್ವಹಿಸದಿರುವುದು ಗಮನಕ್ಕೆ ಬಂದಿದೆ. ಎಸೆಸೆಲ್ಸಿಯಲ್ಲಿ ಶೇ.100ರಷ್ಟು ಸಾಧನೆಗೆ ಕೂಡಲೇ ಯೋಜನೆ ರೂಪಿಸಿ ಎಂದು ಡಿಸಿ ಡಾ| ಕೆ. ವಿದ್ಯಾಕುಮಾರಿ ಸೂಚಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶ್‌ಪಾಲ್‌ ಸುವರ್ಣ, ಬುದ್ಧಿವಂತರ ಜಿಲ್ಲೆ ಎಂಬ ಸಾಧನೆಯನ್ನು ಉಳಿಸಿಕೊಳ್ಳಲು ಶಿಕ್ಷಕರ ಪರಿಶ್ರಮ ಆಗತ್ಯ ಎಂದರು. ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ, ಜಿಪಂ ಸಿಇಒ ಪ್ರತೀಕ್‌ ಬಾಯಲ್‌ ಹಾಗೂ ಎಸ್‌.ಪಿ. ಡಾ| ಅರುಣ್‌ ಕೆ. ಶುಭ ಹಾರೈಸಿದರು. ಸಾಹಿತಿ ಮುನಿರಾಜ ರೆಂಜಾಳ ಉಪನ್ಯಾಸ ನೀಡಿದರು.

ಆಭರಣ ಜುವೆಲರಿ ವತಿಯಿಂದ ಶಿಕ್ಷಕರಿಗೆ ಲಕ್ಕಿ ಕೂಪನ್‌ ನೀಡಿ, ಕೊನೆಗೆ ಡ್ರಾ ನಡೆಸಿ 1 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಹಾಗೂ 25 ಗ್ರಾಂ ಬೆಳ್ಳಿಯ ಮೂರು ಬಹುಮಾನ ನೀಡಲಾಯಿತು.

ಜಿಲ್ಲಾ ಮಟ್ಟದ ಪ್ರಶಸ್ತಿ ಪುರಸ್ಕೃತರನ್ನು ಹಾಗೂ ವಲಯದ ನಿವೃತ್ತ ಶಿಕ್ಷಕರನ್ನು ಸಮ್ಮಾನಿಸಲಾಯಿತು. ಉದ್ಯಮಿ ಭುವ ನೇಂದ್ರ ಕಿದಿಯೂರು, ಡಯಟ್‌ ಪ್ರಾಂಶುಪಾಲ ಗೋವಿಂದ ಮಡಿವಾಳ, ಸಂಘ ಸಂಸ್ಥೆಯ ಪದಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಡಿಡಿಪಿಐ ಕೆ. ಗಣಪತಿ ಸ್ವಾಗತಿಸಿ, ಬಿಇಒ ಡಾ| ಯಲ್ಲಮ್ಮ ವಂದಿಸಿದರು.

ಟಾಪ್ ನ್ಯೂಸ್

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

1-vaya-big

Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್‌!

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi1

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

Malpe

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು

Karkala

Karkala: ಬಹುಭಾಷೆ, ಬಹುಶಿಸ್ತೀಯ ಶಿಕ್ಷಣ ಅತ್ಯಗತ್ಯ: ಪ್ರೊ.ಅನಿಲ್‌ ಸಹಸ್ರಬುದ್ಧೆ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Udupi: ಬೆಡ್‌ಶೀಟ್‌ ಮಾರುವ ನೆಪ; ಮನೆಗೆ ಅಕ್ರಮ ಪ್ರವೇಶ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 7ನೇ ರೀಲ್ಸ್ ಪ್ರಸಾರ

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

1-vaya-big

Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.