“ಸಂಚಾರಿ ನಿಯಮ ಪಾಲನೆ ಪರಿಶೀಲನೆಗೆ ತಂಡ’


Team Udayavani, Mar 15, 2019, 1:00 AM IST

udupi-dc-5.jpg

ಉಡುಪಿ: ಸಂಚಾರ ನಿಯಮ ಸಮರ್ಪಕವಾಗಿ ಪಾಲಿಸುವು ದನ್ನು ಪರಿಶೀಲಿಸಲು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹೇಳಿದರು.

ಗುರುವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ  ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸುವುದು, ಕಾರು ಚಾಲಕರು ಸೀಟ್‌ ಬೆಲ್ಟ್ ಧರಿಸುವುದು, ಚಾಲನಾ ಸಮಯದಲ್ಲಿ ಮೊಬೈಲ್‌ ಬಳಸದೆ ಇರುವುದು, ರೋಡ್‌ ಕ್ರಾಸ್‌ 
ಮಾಡುವಾಗ ಪಾಲಿಸಬೇಕಾದ ನಿಯಮ ಸೇರಿದಂತೆ ಸಂಚಾರಿ ನಿಯಮಗಳ ಸಮರ್ಪಕ ಪಾಲನೆ ಆಗಬೇಕು. ಎಪ್ರಿಲ್‌ನಿಂದ 9 ತಿಂಗಳುಗಳ ಕಾಲ ಇವುಗಳ ಪರಿಶೀಲನೆ ನಡೆಯಲಿದೆ. ಇದಕ್ಕಾಗಿ 9 ತಂಡಗಳನ್ನು ರಚಿಸಲಾಗಿದ್ದು ಪ್ರತಿ ತಿಂಗಳು 1 ತಂಡ ಕಾರ್ಯ ನಿರ್ವಹಿಸಲಿದೆ ಎಂದರು.  

ಜನಜಾಗೃತಿಗೆ ಸೂಚನೆ
ಸಂಚಾರ ಪರಿಶೀಲನೆಗೆ ರಚಿಸ ಲಾಗಿರುವ ತಂಡಗಳು ಸೀಟ್‌ ಬೆಲ್ಟ್ ಹಾಕುವುದರ ಮಹತ್ವ ತಿಳಿಸುವ ಕ್ಯಾಂಪೇನ್‌ ಮಾಡಬೇಕು, ಅವಶ್ಯವಿರುವ ಸುರûಾ ಸಾಧನಗಳಾದ ಅಲ್ಕೊಮೀಟರ್‌ ಸ್ಪೀಡ್‌ಗನ್ಸ್‌, ಇಂಟರ್‌ ಸೆಪ್ಟರ್‌, ಸಿಸಿಟಿವಿ, ಕ್ಯಾಮೆರಾ ಇತರೆ ವಸ್ತುಗಳ ಅವಶ್ಯಕತೆಯನ್ನು ಪಟ್ಟಿ ಮಾಡಿ ವಾರ್ಷಿಕ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು ಹಾಗೂ ಅಂತಹ ಎಲ್ಲ ಸಾಧನಗಳ ಬಳಕೆಗೆ ತರಬೇತಿಗೊಂಡ ಸಿಬಂದಿ ನಿಯೋಜಿಸಿ ಎಲ್ಲ ಸಾಧನಗಳು ಕಾರ್ಯೋನ್ಮುಖವಾಗಿದೆಯೇ ಎಂದು ನಿಗಾವಹಿಸಬೇಕು ಎಂದು ಹೇಳಿದರು.

ಸಿಸಿಟಿವಿ ದುರಸ್ತಿಗೆ ನಿರ್ದೇಶನ
 ನಗರದಲ್ಲಿ ಹಲವೆಡೆಗಳಲ್ಲಿ ಸಿಸಿಟಿವಿ ಅಳವಡಿಸಿದ್ದರೂ ಬಹಳಷ್ಟು ಕಡೆ ಹಾಳಾಗಿವೆ. ಸಿಸಿಟಿವಿ ದುರಸ್ತಿ ಮಾಡುವ ಕುರಿತು ಗಮನ ಹರಿಸಬೇಕು ಮತ್ತು ಯಾವ ಇಲಾಖಾ ವತಿಯಿಂದ ಸಿಸಿಟಿವಿಯನ್ನು ಅಳವಡಿಸಲಾಗಿದೆ ಆ ಇಲಾಖೆಯವರೇ ಸಿಸಿಟಿವಿಗಳ ಸಮರ್ಪಕ ಕಾರ್ಯ ನಿರ್ವಹಣೆ ಕುರಿತು ಆಗಾಗ ಪರಿಶೀಲಿಸುತ್ತಿರಬೇಕು. ನಗರಸಭೆ ವತಿಯಿಂದ ಅಳವಡಿಸಲಾಗಿರುವ ಸಿಸಿಟಿವಿ ಯಾವಾಗಲೂ ಕಾರ್ಯನಿರ್ವಸುತ್ತಿರುವಂತೆ ನೋಡಿಕೊಳ್ಳಬೇಕು ಎಂದರು.

 ಹೆಚ್ಚು ಮಕ್ಕಳ ಸಾಗಾಟ ಸಲ್ಲದು
ಎತ್ತರದ ಪ್ರದೇಶಗಳಲ್ಲಿರುವ ಸೇತುವೆಗಳು ಮತ್ತು ನೀರಿನ ಪ್ರದೇಶವನ್ನೊಳ ಗೊಂಡಲ್ಲಿರುವ ಸೇತುವೆಗಳನ್ನು ಪರಿಶೀಲಿಸಬೇಕು. ಅವಶ್ಯಕತೆ ಇರುವ ಕಡೆಗಳಲ್ಲಿ ಸೇತುವೆಯನ್ನು ಅಳವಡಿಸುವ ಬಗ್ಗೆ ನಿಯಾಮಾವಳಿಗಳಿಗೆ ಅನುಗುಣವಾಗಿರದ ಸೇತುವೆಗಳನ್ನು ಬದಲಾಯಿ ಸಲು ಕ್ರಮವಹಿಸಬೇಕು.

ರಾಷ್ಟ್ರೀಯ ಹೆದ್ದಾರಿ ಮತ್ತು ಗ್ರಾಮೀಣ ಪ್ರದೇಶದ ರಸ್ತೆಗಳನ್ನು ನಿಯಾಮಾವಳಿ ಅನುಸಾರ ವಿಶ್ಲೇಷಣೆ ಮಾಡಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳು ವಾಹನ ಚಲಾಯಿಸುವ ಬಗ್ಗೆ ನಿಗಾವಹಿಸಬೇಕು ಮತ್ತು ಅಪಘಾತಗಳು ಆದ ಸಂದರ್ಭ ವಿವರವಾಗಿ ವಯಸ್ಸು, ಲಿಂಗ ಆಧಾರವಾಗಿ ವಿಶ್ಲೇಷಿಸಬೇಕು. ವಿವಿಧ ಶಾಲಾ ಬಸ್ಸುಗಳು ಮತ್ತು ತ್ರಿಚಕ್ರ ವಾಹನಗಳು ನಿಗದಿತ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯದಂತೆ ಶೈಕ್ಷಣಿಕ ವರ್ಷ ಆರಂಭದಲ್ಲಿ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಅವಘಡ ನಿಯಂತ್ರಣಕ್ಕೆ ಗುರಿ
ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ರಸ್ತೆ ಅಪಘಾತ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡುವ ಬಗ್ಗೆ ವಾರ್ಷಿಕ ಗುರಿಯನ್ನು ನಿಗದಿಪಡಿಸಿಕೊಳ್ಳಬೇಕು. ಇಂಟರ್‌ ಸೆಪ್ಟರ್‌ ವಾಹನಗಳ ಬಳಕೆ ಮಾಡಿಕೊಳ್ಳುವ ಮೂಲಕ ಅತೀ ವೇಗವಾಗಿ ಚಲಾಯಿಸುವ ವಾಹನಗಳ ಮೇಲೆ ನಿಗಾವಹಿಸಬೇಕು. ಪಡುಬಿದ್ರಿ ಜಂಕ್ಷನ್‌ ಬಳಿ ಡಿವೈಡರ್‌ಗಳ ನಡುವೆ ಹೆಚ್ಚು ಸ್ಥಳಾವಕಾಶ ಇಲ್ಲದಿರುವುದು, ವಾಹನಗಳು ಯೂಟರ್ನ್ ಮಾಡಲು ಬಹಳ ದೂರ ಹೋಗಬೇಕಾಗಿರುವುದು, 27 ಕಡೆಗಳಲ್ಲಿ ಬೀದಿ ದೀಪಗಳು ಇಲ್ಲದಿರುವುದು, ಹಂಪ್ಸ್‌ ಇಲ್ಲದಿರುವುದರಿಂದ ಅಪಘಾತ ಹೆಚ್ಚಾಗುತ್ತಿವೆ ಎಂದು ಉಡುಪಿ ಸಂಚಾರ ಠಾಣೆ ಪೊಲೀಸ್‌ ಉಪ ನಿರೀಕ್ಷಕ ನಿತ್ಯಾನಂದ ಗೌಡ ಹೇಳಿದರು.

 ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸದಸ್ಯೆ ನಿಶಾ ಜೇಮ್ಸ್‌, ನಗರಸಭೆ ಪೌರಾಯುಕ್ತ ಆನಂದ ಕಲ್ಲೋಳಿಕರ್‌, ಉಡುಪಿ ಪೊಲೀಸ್‌ ಉಪ ಅಧೀಕ್ಷಕ ಜಿ. ಆರ್‌.ಜೈಶಂಕರ್‌, ಕಾಪು ಪೊಲೀಸ್‌ಠಾಣೆ ಉಪ ನಿರೀಕ್ಷಕ ನವೀನ್‌ಎಸ್‌ ನಾಯ್ಕ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಜಾಹ್ನವಿ ಸಿ. ಮತ್ತಿತರರು ಉಪಸ್ಥಿತರಿದ್ದರು.

ಅವಘಡ ನಿಯಂತ್ರಣಕ್ಕೆ ತರಬೇತಿ
ಅಪಘಾತಗಳು ಘಟಿಸುವ ಆಧಾರದ ಮೇಲೆ ನಿಗದಿತ ಕಾಲಮಿತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂಬುಲೆನ್ಸ್‌ಗಳು ಸುಸಜ್ಜಿತವಾದ ವೈದ್ಯಕೀಯ ಪರಿಕರ ಸಿಬಂದಿಗಳನ್ನು ಹೊಂದಿರುವ ಬಗ್ಗೆ ಪರಿಶೀಲಿಸಬೇಕು. ಅಪಘಾತ ವರದಿಗಳ ವಿಶ್ಲೇಷಣೆಯ ಆಧಾರದ ಮೇಲೆ  ಶೇ.10ಕ್ಕೆ ಕಡಿಮೆ ಇಲ್ಲದಂತೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ವಾರ್ಷಿಕ ಗುರಿಯನ್ನು ನಿಗದಿಪಡಿಸಬೇಕು. ಹೆಚ್ಚು ಅಪಘಾತ ಸಂಭವಿಸುವ ಸ್ಥಳಗಳನ್ನು ಅಪಘಾತ ನಡೆಯದಂತೆ ನಿರ್ದಿಷ್ಟ ಕ್ರಮ ಕೈಗೊಳ್ಳುವ ಬಗ್ಗೆ ಗಮನ ಹರಿಸಬೇಕು. ಅಪಘಾತ ಪ್ರಕರಣಗಳಿಗೆ ಅನುಗುಣವಾಗಿ ಗುರಿಯನ್ನು ನಿಗದಿಪಡಿಸಬೇಕು. ಜಿಲ್ಲಾ ರಸ್ತೆ ಸುರಕ್ಷಾ ಸಮಿತಿ ಸಭೆಗಳನ್ನು ನಿಗದಿಯಂತೆ ನಡೆಸಬೇಕು. ಮೋಟಾರು ವಾಹನ ಕಾಯ್ದೆ ಅನ್ವಯ ಗಂಭೀರ ಗಾಯ ಹಾಗೂ ಮರಣದಂತಹ ಅಪಘಾತ ಪ್ರಕರಣಗಳನ್ನು ವಿವಿಧ ಇಲಾಖೆಯ ಪ್ರತಿನಿಧಿಗಳನ್ನೊಳಗೊಂಡ ಸಾರಿಗೆ ಇಲಾಖೆ, ಪೊಲೀಸ್‌ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಪ್ರತಿನಿಧಿಗಳ ತಂಡದಿಂದ ವೈಜ್ಞಾನಿಕವಾಗಿ ತನಿಖೆ ನಡೆಸಿ ಲೀಡ್‌ ಏಜೆನ್ಸಿ ಸಿಬಂದಿಗಳಿಗೆ ರಸ್ತೆ ಸುರಕ್ಷೆ ಬಗ್ಗೆ ತರಬೇತಿಗಳನ್ನು ಆಯೋಜಿಸಲಾಗುವುದು ಎಂದು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಜಿಲ್ಲಾ ಸದಸ್ಯ ಕಾರ್ಯದರ್ಶಿ ಆರ್‌. ಎಂ.ವರ್ಣೇಕರ್‌ ಹೇಳಿದರು.

ಟಾಪ್ ನ್ಯೂಸ್

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

1-indi

INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು

baby 2

Russia; 25ರ ವಿದ್ಯಾರ್ಥಿನಿ ಮಗು ಹೆತ್ತರೆ 81,000 ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi: ಗೀತಾರ್ಥ ಚಿಂತನೆ-151: ದೇಶ, ಕಾಲವೂ ಅನಾದಿ, ಅನಂತ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

Udupi ಶ್ರೀಕೃಷ್ಣಮಠ: ವಾರ್ಷಿಕ ಸಪ್ತೋತ್ಸವ ಆರಂಭ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

ಉಡುಪಿಯಲ್ಲಿ ಶ್ರೀಕೃಷ್ಣ ಕಾರಿಡಾರ್‌ ಚಿಂತನೆ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನKaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Kaup ಶ್ರೀ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ಸಿಎಂ, ಸಚಿವರಿಗೆ ಆಹ್ವಾನ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

Udupi ಸಪ್ತೋತ್ಸವ: ಭಜನೆ ಸಂಕೀರ್ತನೆ ಉದ್ಘಾಟನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

Naxal: ಶರಣಾಗತಿ ಎಂದರೆ ದ್ರೋಹ: ನಕ್ಸಲ್‌ ವಿಕ್ರಂ ಗೌಡ ಆಡಿಯೋ!

1-nurul

BPL;ಅಂತಿಮ ಓವರಿನಲ್ಲಿ 30 ರನ್‌ ಸಿಡಿಸಿದ ನುರುಲ್‌

b-l-santhosh

BJP; ಅಮಿತ್‌ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್‌ ಸೂಚನೆ

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

California: ಹತ್ತೇ ಕಿ.ಮೀ. ದೂರದಲ್ಲಿ ಧಗಧಗಿಸುತ್ತಿತ್ತು ಕಾಳ್ಗಿಚ್ಚು !

1-aaadf

Afghanistan ವಾಗ್ಧಾನ; ಭಾರತ ವಿರೋಧಿ ಚಟುವಟಿಕೆಗೆ ಅವಕಾಶ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.