ಮುಂಡ್ಕೂರು ಕನ್ನಡಬೆಟ್ಟು ನಿವಾಸಿಗಳ ನೀರಿಗಾಗಿ ಕಣ್ಣೀರು ಅಂತ್ಯ


Team Udayavani, Apr 8, 2019, 6:30 AM IST

mundkur

ಬೆಳ್ಮಣ್‌: ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾ.ಪಂ. ವ್ಯಾಪ್ರಿಯ ಪೊಸ್ರಾಲು ಸಮೀಪದ ಕನ್ನಡಬೆಟ್ಟು ನಿವಾಸಿಗಳು ಸುಮಾರು 75 ವರ್ಷಗಳಿಂದ ಕುಡಿಯುವ ನೀರಿಗಾಗಿ ಹಾಕುತ್ತಿದ್ದ ಕಣ್ಣೀರು ಕೊನೆಗೂ ಕೊನೆಯಾಗಿದೆ.

ಖಾಸಗಿಯವರ ಜಮೀನಿನಲ್ಲಿ ಪೈಪ್‌ ಆಳವಡಿಕೆ ಇದ್ದ ಸಮಸ್ಯೆಗಳನ್ನು ಪರಿಹರಿಸಿದ ಮುಂಡ್ಕೂರು ಗ್ರಾಮ ಪಂಚಾಯತ್‌ ಆಡಳಿತ ಖಾಸಗಿಯವರ ಮನವೊಲಿಸಿ ಪೈಪ್‌ ಅಳವಡಿಸಿ ನೀರಿನ ಸಂಪರ್ಕ ನೀಡಿದ್ದು, ನೀರಿನ ಸಮಸ್ಯೆ ಎದುರಿಸುತ್ತಿದ್ದ 5 ಮನೆಗಳಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಿ ಸಂತೃಪ್ತಿಯ ಸಿಂಚನ ಮೂಡಿಸಿದೆ.

ಉದಯವಾಣಿ ವರದಿ
ಈ ಹಿಂದೆ ಸುಮಾರು 75 ವರ್ಷಗಳಿಂದ ಈ ಭಾಗದಲ್ಲಿ ವಾಸವಾಗಿದ್ದ ಪದ್ದು ಪೂಜಾರ್ತಿ, ಕಮಲ ಪೂಜಾರ್ತಿ, ಯಶೋದಾ ಪೂಜಾರ್ತಿ, ಸುಶೀಲಾ ಪೂಜಾರ್ತಿ ಹಾಗೂ ಪುರುಷೋತ್ತಮ ಪೂಜಾರಿ ಎಂಬವರ ಕುಟುಂಬದ ಮಂದಿ ನಿತ್ಯ ನೀರಿಗಾಗಿ ಪರದಾಟ ನಡೆಸುತ್ತಿದ್ದರೂ ಯಾವುದೇ ಇಲಾಖೆ ಅಥವಾ ಸ್ಥಳಿಯಾಡಳಿತ ಈ ಕಾಲೋನಿಯ ನೀರಿನ ಸಮಸ್ಯೆಗೆ ಪರಿಹಾರ ನೀಡದಿರುವ ಬಗ್ಗೆ ಉದಯವಾಣಿ ಸಚಿತ್ರ ವರದಿಯನ್ನು ಎರಡೆರಡು ಬಾರಿ ಪ್ರಕಟಿಸಿತ್ತು.

ಈ ಪರಿಣಾಮ ಗ್ರಾ. ಪಂ.ನ ಆಡಳಿತ ಹೊತ್ತಿರುವ ಮಂದಿ ತಮ್ಮ ಜವಾಬ್ದಾರಿ ಅರಿತು ಸಮಸ್ಯೆ ಪರಿಹರಿಸಿ ನೀರಿನ ಸಂಪರ್ಕ ನೀಡಿದ್ದು ಸಾರ್ವಜನಿಕ ವಲಯದಲ್ಲಿ ಮುಕ್ತ ಪ್ರಶಂಸೆಗೆ ಪಾತ್ರವಾಗಿದೆ.

75 ವರ್ಷಗಳ ಸಮಸ್ಯೆ
ಕನ್ನಡಬೆಟ್ಟು ಕಾಲೋನಿಯಲ್ಲಿ 5 ಮನೆಗಳಲ್ಲಿ ಸುಮಾರು 40 ಮಂದಿ ಜನರಿದ್ದು ಇವರ ನಿತ್ಯ ಉಪಯೋಗದ ನೀರಿಗಾಗಿ ಇಲ್ಲಿನ ನಿವಾಸಿಗಳು ಕಳೆದ 75ವರ್ಷಗಳಿಂದ ಪರದಾಟ ನಡೆಸುತ್ತಿದ್ದರು. ಅಡುಗೆ ತಯಾರಿಕೆಗೆ, ಪಾತ್ರೆ ತೊಳೆಯಲು, ಶೌಚಾಲಯ ಹೀಗೆ ಹತ್ತು ಹಲವು ಕೆಲಸಗಳಿಗೆ ನೀರಿನ ಅವಶ್ಯಕತೆ ಇದ್ದು ಇಲ್ಲಿನ ನಿವಾಸಿಗಳು ನಿತ್ಯ ನೀರಿಗಾಗಿ ಕಣ್ಣೀರು ಹಾಕುವಂತಾಗಿತ್ತು. ಈ ಕಾಲನಿಯ ಎಲ್ಲಾ ಮನೆಗಳ ಮಂದಿ ತಮ್ಮ ಬಟ್ಟೆ ಬರೆ ಸಹಿತ ಪಾತ್ರೆಗಳನ್ನು ತೊಳೆಯಲು ಸುಮಾರು 1 ಕಿ.ಮೀ. ನಷ್ಟು ದೂರ ಸಾಗಿ ನದಿ ನೀರನ್ನು ಬಳಕೆ ಮಾಡುತ್ತಿದ್ದರು. ಇತ್ತೀಚೆಗೆ ಆ ನದಿಯಲ್ಲಿ ಮೊಸಳೆಗಳು ಕಾಣಸಿಕ್ಕಿದ್ದು ಈ ಭಾಗದ ಜನ ನೀರಿಗೆ ಇಳಿಯಲೂ ಇದೀಗ ಭಯವುಂಟಾಗಿತ್ತು.

ಬಾವಿ ತೋಡಿದ್ದರೂ ಪ್ರಯೋಜನವಾಗಿರಲಿಲ್ಲ
ತಮ್ಮ ನಿತ್ಯ ಕಾರ್ಯಕ್ಕೆ ಬೇಕಾದ ನೀರಿಗಾಗಿ ಪರದಾಟ ನಡೆಸುವುದರಿಂದ ನೊಂದ ಕಾಲನಿ ಜನರೇ ಒಟ್ಟಾಗಿ ಒಂದು ಬಾವಿಯನ್ನು ನಿರ್ಮಿಸಿದ್ದರು. 5 ಮನೆಗಳಿಗೆ ನೀರಿನ ದಾಹ ತೀರಿಸುತ್ತಿದ್ದ ಈ ಒಂದು ಬಾವಿಯೂ 5 ಮನೆಯ ಬಳಕೆಗೆ ಬಾರದೇ ಸಂಪೂರ್ಣ ಬತ್ತಿ ಹೋಗಿದ್ದು ಇಲ್ಲಿನ ನಿವಾಸಿಗಳು ಸುಮಾರು ದೂರ ಕ್ರಮಿಸಿ ಖಾಸಗಿ ಮಾಲಿಕರ ಬಾವಿಯಿಂದ ನೀರು ತರಬೇಕಾಗಿತ್ತು. ಇಲ್ಲವೇ ನದಿ ನೀರನ್ನೇ ಆಶ್ರಯಿಸಬೇಕಾಗಿತ್ತು.

ಮನವಿ ನೀಡಲಾಗಿತ್ತು
ಬಹು ವರ್ಷದ ನೀರಿನ ಸಮಸ್ಯೆಗಾಗಿ ಈ ಭಾಗದ ಜನ ಸ್ಥಳೀಯ ಗ್ರಾ.ಪಂ, ತಾ.ಪಂ, ಜಿಲ್ಲಾ ಪಂ. ನಿಂದ ಹಿಡಿದು ಕಾರ್ಕಳ ಶಾಸಕರಿಗೆ ಹಾಗೂ ಜಿಲ್ಲಾದಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.

ಖಾಸಗಿಯವರ ಜಮೀನಿನಲ್ಲಿ ಪೈಪ್‌ಲೈನ್‌ ಅಳವಡಿಸಬೇಕಾಗಿದ್ದರಿಂದ ಅವರ ಮನವೊಲಿಸಿ ನೀರು ಸಂಪರ್ಕ ನೀಡಬೇಕಾಗಿತ್ತು. ಆದರೆ ಖಾಸಗಿಯವರು ನಕಾರಾತ್ಮಕ ಧೋರಣೆ ತೋರಿದ್ದರಿಂದ ಇದು ಅಸಾಧ್ಯವಾಗಿತ್ತು. ಆದರೆ ಈ ಬಾರಿ ಕಾರ್ಕಳ ತಾಳುಕು ಪಂಚಾಯತ್‌ ಉಪಾಧ್ಯಕ್ಷ ಗೋಪಾಲ ಮೂಲ್ಯ, ಮುಂಡ್ಕೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಶುಭಾ ಪಿ. ಶೆಟ್ಟಿ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ, ಮಾಜಿ ಆಧ್ಯಕ್ಷ ಸತ್ಯಶಂಕರ ಶೆಟ್ಟಿಯವರ ಪರಿಶ್ರಮದ ಫಲವಾಗಿ ಕೊನೆಗೂ ಮಾನವೀಯ ನೆಲೆಯಲ್ಲಿ ಒಪ್ಪಿದ ಖಾಸಗಿ ಜಮೀನಿನ ಮಾಲಕ ಪೇರ್ಗುತ್ತು ಶಿವರಾಮ ಶೆಟ್ಟಿ, ಕಾಳು ಯಾನೆ ಸುಂದರ ಸಾಲ್ಯಾನ್‌, ಮುಕುಂದ ಪ್ರಭು ಮನೆಯವರು ಮನ ಮಾಡಿ ನೀರು ಸಂಪರ್ಕದ ಪೈಪ್‌ ಲೈನ್‌ ಅಳವಡಿಕೆಗೆ ಜಮೀನು ಮೂಲಕ ಸಂಪರ್ಕಕ್ಕೆ ಒಪ್ಪಿಗೆ ನೀಡಿದರು.

ಸಮಸ್ಯೆ ಪರಿಹಾರ
ಖಾಸಗಿ ಜಾಗದ ಸಮಸ್ಯೆ ಇರುವುದರಿಂದ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲು ಸಾಧ್ಯವಾಗಿರಲಿಲ್ಲ. ಪೈಪ್‌ ಲೆ„ನ್‌ ಅಳವಡಿಸಲು ಇದೀಗ ಖಾಸಗಿಯವರು ನಮ್ಮ ವಿನಂಈ ಭಾಗದ ನೀರಿನ ಸಮಸ್ಯೆ ಪರಿಹಾರವಾಗಿದೆ.
-ಗೋಪಾಲಮೂಲ್ಯ, ಕಾರ್ಕಳ ತಾ.ಪಂ. ಉಪಾಧ್ಯಕ್ಷ

ಶಾಶ್ವತ ಪರಿಹಾರ
ಮುಂಡ್ಕೂರು ಗ್ರಾಮ ಪಂಚಾಯತ್‌ನ ಸತತ ಪರಿಶ್ರಮದ ಫಲವಾಗಿ ನಮ್ಮ 5 ಮನೆಗಳ 75 ವರ್ಷಗಳ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿದೆ. ಪೈಪ್‌ಲೈನ್‌ ಅಳವಡಿಕೆಗೆ ಜಮೀನು ಮೂಲಕ ಅವಕಾಶ ನೀಡಿದ ಜಮೀನಿನ ಮಾಲಕರಾದ ಪೇರ್ಗುತ್ತು ಶಿವರಾಮ ಶೆಟ್ಟಿ, ಕಾಳು ಯಾನೆ ಸುಂದರ ಸಾಲ್ಯಾನ್‌, ಮುಕುಂದ ಪ್ರಭು ಮನೆಯವರಿಗೆ ಕೃತಜ್ಞತೆಗಳು.
-ವಸಂತಿ, ಸ್ಥಳೀಯರು

ಟಾಪ್ ನ್ಯೂಸ್

1-weewewe

ODI; ವಿಜಯ್‌ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Manipal: ಕಾರು ಅಪಘಾತ: ಪ್ರಯಾಣಿಕರು ಪಾರು

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

Road Mishap: ಕಾರು-ಮೊಪೆಡ್‌ ಪರಸ್ಪರ ಢಿಕ್ಕಿ: ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-weewewe

ODI; ವಿಜಯ್‌ ಹಜಾರೆ ಟ್ರೋಫಿ ಇಂದಿನಿಂದ:ಕರ್ನಾಟಕಕ್ಕೆ ಮುಂಬಯಿ ಸವಾಲು

1-knna

87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ದೂರಿ ಚಾಲನೆ :ಹಿಂದಿ ಹೇರಿಕೆಯ ವಿರುದ್ಧ ಕಹಳೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.