ಉಡುಪಿ ಸಂಗೀತ ಸಭಾ ತೀರ್ಥ ವಿಟ್ಟಲ್ ಸಂಗೀತೋತ್ಸವ ಸಂಪನ್ನ
Team Udayavani, Feb 28, 2017, 12:58 PM IST
ಉಡುಪಿ: ಉಡುಪಿ ಸಂಗೀತ ಸಭಾದ ಆಶ್ರಯದಲ್ಲಿ ಉಡುಪಿಯ ಅಜ್ಜರಕಾಡು ಟೌನ್ ಹಾಲ್‌ನಲ್ಲಿ “ತೀರ್ಥ ವಿಟ್ಟಲ್’ ಮರಾಠಿ ಅಭಂಗ್, ನಾಟ್ಯ ಸಂಗೀತ ಮತ್ತು ಭಕ್ತಿ ಸಂಗೀತೋತ್ಸವ ಕಾರ್ಯಕ್ರಮ ರವಿವಾರ ಸಂಪನ್ನ ಗೊಂಡಿತು.
ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಆಭರಣ ಸಂಸ್ಥೆಯ ಸುಭಾಸ್ ಕಾಮತ್, ಮಹೇಶ್ ಕಾಮತ್, ಸಂಧ್ಯಾ ಕಾಮತ್, ವೀಣಾ ಕಾಮತ್, ಸಂಗೀತ ಸಭಾದ ಸಂಸ್ಥಾಪಕ ವಿಜಯನಾಥ ಶೆಣೈ, ಟಿ. ರಂಗ ಪೈ, ಶಶಿಕಲಾ ಭಟ್ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಅಂತಾರಾಷ್ಟ್ರೀಯ ಗಾಯಕರಿಂದ “ಗಾನಸುಧೆ’
ಈ ಸಂಗೀತ ಸಂಭ್ರಮದಲ್ಲಿ ಮರಾಠಿ ಸಂಗೀತದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸುಪ್ರಸಿದ್ಧ ಗಾಯಕರಾದ ಭರತ್ ಬಳುವಳ್ಳಿ ಮುಂಬಯಿ ಮತ್ತು ನೀಲಾಕ್ಷಿ ಪೆಂಢಾರ್ಕರ್, ಮರಾಠಿ ಮತ್ತು ಹಿಂದಿ ಚಲನಚಿತ್ರದಲ್ಲಿ ಹಿನ್ನೆಲೆ ಸಂಗೀತಗಾರರಾಗಿ ದುಡಿದ ಹೆಸರಾಂತ ಕಲಾವಿದರಾದ ಆದಿತ್ಯ ವೋಕ್ – ಆರ್ಗನ್, ಸತ್ಯಜಿತ್ ಪ್ರಭು – ಕೀಬೋರ್ಡ್, ವರದ್ ಕತಾಪುರ್‌ಕರ್ – ಫೂÉéಟ್, ಕೃಷ್ಣ ಮಸ್ಲೆ – ಪಕ್ವಾಜ್, ಮಂದಾರ್ ಗೋಗೆr – ತಾಳವಾದ್ಯ, ಪ್ರಸಾದ್
ಪೆಢೆÂ – ತಬಲಾ ವಾದನದ ಮೂಲಕ ಪಕ್ಕವಾದ್ಯದಲ್ಲಿ ಸಹಕರಿಸಿದ್ದರು.
ಅರ್ಥಪೂರ್ಣವಾಗಿ ಮೂಡಿಬಂದ ವಿಶಿಷ್ಟ ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಸಂಗೀತಾ ಸಕ್ತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.