ವರ್ಷ ಕಳೆದರೂ ತೆಕ್ಕಟ್ಟೆ ಗ್ರಾ.ಪಂ.ಗೆ ಪೂರ್ಣಕಾಲಿಕ ಪಿಡಿಒ ಇಲ್ಲ
Team Udayavani, Jul 5, 2018, 6:00 AM IST
ತೆಕ್ಕಟ್ಟೆ : ಕುಂದಾಪುರ ತಾಲೂಕಿನ ದೊಡ್ಡ ಗ್ರಾ.ಪಂ.ಗಳಲ್ಲಿ ತೆಕ್ಕಟ್ಟೆ ಕೂಡ ಒಂದು. ಆದರೆ ಕಳೆದ ಒಂದು ವರ್ಷದಿಂ ಇಲ್ಲಿ ಪೂರ್ಣಕಾಲಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಯೇ ಇಲ್ಲ!
ಇದರಿಂದ ಗ್ರಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅಡಚಣೆ ಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಪೂರ್ಣಕಾಲಿಕ ಪಿಡಿಓ ಇಲ್ಲ
ಈ ಹಿಂದೆ ಗ್ರಾ.ಪಂ. ಪಿಡಿಒ ಆಗಿ ಕಾರ್ಯ ನಿರ್ವಹಿಸುತಿದ್ದ ದೀಪಾ ಎನ್ನುವವರು ದಕ್ಷ ಅಧಿಕಾರಿ ಎಂದು ಗುರುತಿಸಿಕೊಂಡಿದ್ದರು. ಆದರೆ ಏಕಾಏಕಿ ಅವರ ವರ್ಗಾವಣೆಯಾಗಿದ್ದು, ಇದನ್ನು ಗ್ರಾಮಸಭೆಯಲ್ಲೂ ಪ್ರಸ್ತಾಪ ಮಾಡುವ ಮೂಲಕ ಗ್ರಾಮಸ್ಥರು ತೀವ್ರ ರೀತಿಯಲ್ಲಿ ಪ್ರತಿಭಟಿಸಿದ್ದರು. ಆದರೂ ಏನೂ ಪ್ರಯೋಜನವಾಗಿಲ್ಲ. ಆ ನಂತರದಲ್ಲಿ ಇಲ್ಲಿಗೆ ಬೇರಾವುದೇ ಅಧಿಕಾರಿಯ ನಿಯುಕ್ತಿ ಆಗಿಲ್ಲ. ಇದರಿಂದ ಪಂಚಾಯತ್‌ನ ಅಭಿವೃದ್ಧಿ ನಿರ್ಣಯಗಳು ಹಾಗೇ ಬಾಕಿ ಉಳಿದಿವೆ.
ಮೂರು ಗ್ರಾ.ಪಂ.ಗಳಿಗೆ ಒಬ್ಬರೇ ಪಿಡಿಓ !
ತೆಕ್ಕಟ್ಟೆಯಲ್ಲಿ ಪಿಡಿಒ ಇಲ್ಲದ್ದರಿಂದ ವೀರಶೇಖರ್ ಎಂಬುವವರನ್ನು ತಾತ್ಕಾಲಿಕ ವಾಗಿ ಇಲ್ಲಿಗೆ ನಿಯುಕ್ತಿಗೊಳಿಸಲಾಗಿದೆ. ಆರೆ ಅವರು ಮರವಂತೆ, ಬೇಳೂರು ಗ್ರಾ.ಪಂ.ಗಳ ಜತೆ ತೆಕ್ಕಟ್ಟೆ ಬಗ್ಗೆಯೂ ಗಮನಹರಿಸಬೇಕಿದೆ. ಇದರಿಂದ ಅವರ ಮೇಲೂ ಒತ್ತಡ ಸೃಷ್ಟಿಯಾಗಿದ್ದು, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ.
2 ದಿನಗಳಲ್ಲಿ ಪಿಡಿಒ ನೇಮಕ
ಕಳೆದ ಒಂದು ವರ್ಷದಿಂದಲೂ ತೆಕ್ಕಟ್ಟೆ ಗ್ರಾ.ಪಂ.ನಲ್ಲಿ ಪ್ರಭಾರ ಪಿಡಿಓ ಅವರು ಕಾರ್ಯ
ನಿರ್ವಹಿಸುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ಎರಡು ತಿಂಗಳು ಪಿಡಿಓಗಳಿಗೆ ವಿಶೇಷ ತರಬೇತಿ ನಡೆಯುತ್ತಿದ್ದು ಇನ್ನು 2 ದಿನಗಳಲ್ಲಿ ಪೂರ್ಣಕಾಲಿಕ ಪಿಡಿಒ ಒಬ್ಬರನ್ನು ತೆಕ್ಕಟ್ಟೆ ಗ್ರಾ.ಪಂ.ಗೆ ನೇಮಿಸುತ್ತೇವೆ.
– ಕಿರಣ್ ಪಡೆ°àಕರ್, ಇಒ,ತಾ.ಪಂ. ಕುಂದಾಪುರ
ಒತ್ತಡದ ಕೆಲಸ
ಈಗಿನ ಪಿಡಿಒ ಅವರಿಗೆ ಮೂರು ಗ್ರಾ.ಪಂ.ಗಳ ಜವಾಬ್ದಾರಿಯಿದ್ದು, ಒತ್ತಡದಲ್ಲಿ ಕೆಲಸ ಮಾಡಬೇಕಿದೆ. ಆದರೂ ಅವರು ಕಡತಗಳಿಗೆ ಸಹಿ ಹಾಕಲು ಸ್ಪಂದಿಸುತ್ತಿದ್ದಾರೆ. ಕೂಡಲೇ ಇಲ್ಲಿಗೆ ಪೂರ್ಣಕಾಲಿಕ ಪಿಡಿಒ ನೇಮಕವಾದರೆ ಉತ್ತಮ.
– ಶೇಖರ್ ಕಾಂಚನ್ ಕೊಮೆ, ಅಧ್ಯಕ್ಷರು ಗ್ರಾ.ಪಂ.ತೆಕ್ಕಟ್ಟೆ
– ಟಿ. ಲೋಕೇಶ್ ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್ ವಿಚಾರವಾಗಿ ವಾಗ್ವಾದ
Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.