ಉಡುಪಿ : ಕಾಲೇಜು ವಿದ್ಯಾರ್ಥಿಗಳ ದೂರು ಪರಿಹಾರಕ್ಕೆ ಟೆಲಿಗ್ರಾಮ್ ವೇದಿಕೆ !
Team Udayavani, Aug 27, 2022, 3:57 PM IST
ಉಡುಪಿ: ರಾಜ್ಯದ ಸರಕಾರಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ತಮ್ಮ ತರಗತಿ ಪ್ರತಿನಿಧಿಯ ಮೂಲಕ ಟೆಲಿಗ್ರಾಮ್‌ನಲ್ಲಿ ದೂರು ದುಮ್ಮಾನ ಹೇಳಿಕೊಳ್ಳುವ ಹಾಗೂ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ವ್ಯವಸ್ಥೆಯನ್ನು ಕಾಲೇಜು ಶಿಕ್ಷಣ ಇಲಾಖೆ ಸೃಜಿಸಿದೆ.
ಇದಕ್ಕಾಗಿ ಇಲಾಖೆಯು ಪ್ರಥಮ ಹಾಗೂ ದ್ವಿತೀಯ ಪದವಿ ವಿದ್ಯಾರ್ಥಿಗಳ ದೂರುಗಳನ್ನು ಟೆಲಿಗ್ರಾಮ್ ಮೂಲಕ ಪಡೆಯಲು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸಂದೇಶವನ್ನು ನೇರವಾಗಿ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಕಳುಹಿಸಲು ಗ್ರೂಪ್ ಸೃಷ್ಟಿ ಮಾಡಿದೆ.
ಆ. 25ರ ಗಡುವು
ಇಲಾಖೆಯಿಂದ ಇಎಂಐಎಸ್ ಮೂಲಕ ಟೆಲಿಗ್ರಾಮ್‌ನಲ್ಲಿ ಸಿಆರ್‌ಯುಜಿ ಫಸ್ಟ್ ಇಯರ್ ಹಾಗೂ ಸಿಆರ್ ಯುಜಿ ಸೆಕೆಂಡ್ ಇಯರ್ ಎಂದು ಎರಡು ಗ್ರೂಪ್ ಸೃಷ್ಟಿಸಿದೆ. ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2021-22ನೇ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪದವಿ ತರಗತಿಗಳಿಗೆ ಕ್ಲಾಸ್ ರೆಪ್ರಸೆಂಟೇಟಿವ್(ತರಗತಿ ಪ್ರತಿನಿಧಿ)ಗಳನ್ನು ಪ್ರತ್ಯೇಕ ಟೆಲಿಗ್ರಾಮ್ ಗ್ರೂಪ್‌ಗೆ ಆ. 25ರೊಳಗೆ ಸೇರಿಸಬೇಕು. ವಿದ್ಯಾರ್ಥಿ ಪ್ರತಿನಿಧಿಯನ್ನು ಹೊರತು ಪಡಿಸಿ ಬೇರ್ಯಾರನ್ನು ಸೇರಿಸ ಬಾರದು ಎಂದು ಇಲಾಖೆ ಸೂಚನೆ ನೀಡಿದೆ.
ಮಾಹಿತಿ ನೀಡಲು, ದೂರು ಪಡೆಯಲು
ವಿದ್ಯಾರ್ಥಿ ಪ್ರತಿನಿಧಿಗಳು ಕಾಲೇಜು ಅಥವಾ ತರಗತಿಗೆ ಸಂಬಂಧಿಸಿದ ಯಾವುದೇ ದೂರುಗಳಿದ್ದರೂ ವಿದ್ಯಾರ್ಥಿಗಳ ಪರವಾಗಿ ಟೆಲಿಗ್ರಾಮ್ ಗ್ರೂಪ್‌ನಲ್ಲಿ ಸಲ್ಲಿಸಬಹುದು. ಸಂಬಂಧಪಟ್ಟ ಅಧಿಕಾರಿಗಳು ಪ್ರತಿಕ್ರಿಯಿಸಲಿದ್ದಾರೆ. ಶೈಕ್ಷಣಿಕ ಅಥವಾ ಆಡಳಿತಾತ್ಮಕ ವಿಷಯವನ್ನು ಆಯಾ ವಿಭಾಗಕ್ಕೆ ವರ್ಗಾಯಿಸಿ, ತುರ್ತು ಪರಿಹಾರ ಕಲ್ಪಿಸುವ ಕಾರ್ಯ ಆಗಲಿದೆ. ಕಾಲೇಜು ಅಥವಾ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಯಾವುದೇ ಮಾಹಿತಿ ನೀಡಬೇಕಾದರೂ ಈ ಗ್ರೂಪ್ ಬಳಕೆ ಮಾಡಿಕೊಳ್ಳಲಾಗುತ್ತದೆ. ರಾಜ್ಯದ 430 ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳು ಇದರಲ್ಲಿ ಇರುವುದರಿಂದ ಕೂಡಲೇ ಮಾಹಿತಿ ರವಾನೆಗೂ ಅನುಕೂಲವಾಗಲಿದೆ.
ಮಾಹಿತಿ ಸೋರಿಕೆ ಆಗದು
ಟೆಲಿಗ್ರಾಮ್ ಗ್ರೂಪ್‌ಗೆ ಸೇರಿಸುವ ಸಂದರ್ಭದಲ್ಲಿ ಯಾವುದೇ ವಿದ್ಯಾರ್ಥಿಗಳ ವೈಯಕ್ತಿಕ ಮಾಹಿತಿಯನ್ನು ಪಡೆಯುವುದಿಲ್ಲ ಮತ್ತು ಪಡೆದ ಮಾಹಿತಿ ಸುರಕ್ಷಿತವಾಗಿರುತ್ತದೆ. ವಾಟ್ಸ್ ಆ್ಯಪ್ ಗ್ರೂಪ್ ರೀತಿಯಲ್ಲಿಯೇ ಟೆಲಿಗ್ರಾಮ್ ಗ್ರೂಪ್ ಕಾರ್ಯ ನಿರ್ವಹಿಸಲಿದೆ. ಇಲಾಖೆಯಿಂದ ತೆಗೆದುಕೊಳ್ಳುವ ಹೊಸ ಕ್ರಮ, ಶೈಕ್ಷಣಿಕ ಚಟುವಟಿಕೆ, ವಿದ್ಯಾರ್ಥಿ ಸಂಬಂಧಿಸಿದ ಕಾರ್ಯಕ್ರಮಗಳ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚು ಅನುಕೂಲವಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಏನಿದು ಟೆಲಿಗ್ರಾಮ್ ಗ್ರೂಪ್?
ವಾಟ್ಸ್‌ಆ್ಯಪ್, ಫೇಸ್‌ಬುಕ್ ಮೆಸೆಂಜರ್ ಮಾದರಿಯಲ್ಲೇ ಟೆಲಿಗ್ರಾಮ್ ಹಲವು ಮಂದಿ ಏಕಕಾಲದಲ್ಲಿ ಆನ್‌ಲೈನ್ ವ್ಯವಸ್ಥೆಯಲ್ಲಿ ಚರ್ಚಿಸಬಹುದಾದ ವೇದಿಕೆಯಾಗಿದೆ. ಇಲ್ಲಿಯೂ ಪ್ರತ್ಯೇಕ ಗ್ರೂಪ್‌ಗ್ಳನ್ನು ರಚಿಸಿಕೊಳ್ಳಬಹುದು. ಚಾಟ್, ವೀಡಿಯೋ ಕಾಲಿಂಗ್, ಫೈಲ್ ಶೇರಿಂಗ್ ಹೀಗೆ ಹಲವು ಅವಕಾಶಗಳು ಇದರಲ್ಲಿವೆ.
ಸರಕಾರಿ ಕಾಲೇಜಿನ ವಿದ್ಯಾರ್ಥಿಗಳ ದೂರು- ದುಮ್ಮಾನಗಳನ್ನು ಒಮ್ಮೆಗೇ ಆಲಿಸಲು, ತುರ್ತು ಸಂದೇಶಗಳನ್ನು ರವಾನಿಸಲು ಅನುಕೂಲ ಆಗುವಂತೆ ಆನ್‌ಲೈನ್ ವೇದಿಕೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಎಲ್ಲ ಕಾಲೇಜುಗಳಲ್ಲೂ ವಿದ್ಯಾರ್ಥಿಗಳ ಪ್ರತಿನಿಧಿಗಳು ಇರುತ್ತಾರೆ. ಟೆಲಿಗ್ರಾಮ್ ಮೂಲಕ ವಿದ್ಯಾರ್ಥಿ ಪ್ರತಿನಿಧಿಗಳ ಗ್ರೂಪ್ ರಚಿಸಲು ನಿರ್ದೇಶನ ನೀಡಿದ್ದೇವೆ.
– ಡಾ| ಅಪ್ಪಾಜಿ ಗೌಡ, ನಿರ್ದೇಶಕ, ಕಾಲೇಜು ಶಿಕ್ಷಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.