ತೆಂಕ ಗ್ರಾಮ: ಸುಂಟರಗಾಳಿ; ಹಲವು ಮನೆಗಳಿಗೆ ಹಾನಿ
Team Udayavani, Jul 21, 2017, 8:10 AM IST
ಪಡುಬಿದ್ರಿ: ಗುರುವಾರ ಮುಂಜಾವ 2.30ರ ಸುಮಾರಿಗೆ ಬೀಸಿದ ಸುಂಟರ ಗಾಳಿ, ಮಳೆಯಿಂದ ತೆಂಕ ಗ್ರಾಮದ ಹಲವು ಮನೆಗಳಿಗೆ ಹಾನಿ ಸಂಭವಿಸಿದೆ. ತೆಂಗು, ಮಾವು, ಹಲಸು, ಈಚಲ, ಹಾಳೆ, ಆಲ ಸಹಿತ 50ಕ್ಕೂ ಹೆಚ್ಚಿನ ಮರಗಳು ಧರಾಶಾಯಿಯಾಗಿವೆ. ಡಜನ್‌ಗೂ ಮಿಕ್ಕಿದ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ತೆಂಕ ಗ್ರಾಮವೊಂದರಲ್ಲೇ 3 ಲಕ್ಷ ರೂ.ಗೂ ಮಿಕ್ಕಿ ನಷ್ಟ ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ.
ತೆಂಕ ಗ್ರಾಮದ ಸಂದು ದಾಂತಿ ಗರಡಿ ಸಮೀಪದ ನಾರಾಯಣ ಪೂಜಾರಿ ಅವರ ಮನೆಯ ಪೂರ್ವ, ಪಶ್ಚಿಮ ಗೋಡೆ, ಮಾಡಿನ ಮೇಲೆ ಮರಗಳು ಉರುಳಿವೆ. ಮನೆಯ ಅಕ್ಕಪಕ್ಕದಲ್ಲಿ ನವೀನ್‌ಚಂದ್ರ ಪೂಜಾರಿಯವರಿಗೆ ಸೇರಿರುವ ತೋಟದ 4-5 ತೆಂಗಿನ ಮರಗಳ ಸಹಿತ ಮಾವು, ಹಾಳೆ, ಈಚಲ, ಹಲಸು, ಆಲ ಮುಂತಾದ ಮರಗಳು ಉರುಳಿ ಬಿದ್ದಿವೆ. ಈ ತೋಟದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳೂ ಹಾನಿಗೊಳಗಾಗಿವೆ. ಬಲವಾದ ಗಾಳಿ ಅನೇಕ ಬಲಿತ, ಬಲಯುತ ಮರಗಳನ್ನು ಅವುಗಳ ನಡುವಿನಿಂದಲೇ ತುಂಡರಿಸಿದೆ.
ಗರಡಿಯ ಪೂರ್ವ ದಿಕ್ಕಿನಲ್ಲಿರುವ ಗೋಪ ಶೆಟ್ಟಿ ಅವರ ಮನೆ ಹಿಂಬದಿ ಗೋಡೆ, ಮಾಡು ಕುಸಿದಿದೆ. ಈ ಮನೆಯ ಹೆಂಚುಗಳೂ ಹಾರಿ ಹೋಗಿದ್ದು ಸುಮಾರು 60,000 ರೂ. ನಷ್ಟ ಸಂಭವಿಸಿದೆ. ಪೂಲ ಲೀಲಾ ಆರ್. ಶೆಟ್ಟಿ , ಪೂಂದಾಡು ಸುಂದರ ಮೇಸಿŒ ಅವರ ಮಗ ವಿಠಲ ಅವರ ಮನೆಗೆ ಮರದ ರೆಂಬೆ ಬಿದ್ದು ನಷ್ಟ ಸಂಭವಿಸಿದೆ.
ತೆಂಕ ಗ್ರಾಮ ಹಾಗೂ ಅಲ್ಲಿನ ಗರಡಿ ಬದಿಯಿಂದ ಪೂಂದಾಡುವರೆಗೆ ಸುಮಾರು 12 ವಿದ್ಯುತ್ ಕಂಬಗಳು ಧೆರೆಗೊರಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಅಂಗಡಿ ಮಾಲಿಕನಿಗೆ ಹಲ್ಲೆ: ಇಬ್ಬರ ಸೆರೆ
Sringeri: ನನಗೆ ಯಾರ ಬೆಂಬಲವೂ ಬೇಡ….: ಡಿಕೆ ಶಿವಕುಮಾರ್ ಮಾರ್ಮಿಕ ಮಾತು
Bengaluru:1 ಕಿ.ಮೀ. ಬೆನ್ನಟ್ಟಿ ಕಾಡುಪ್ರಾಣಿ ಬೇಟೆಗಾರರ ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು
Bengaluru: ನಾಯಿ ಕಚ್ಚಿ 4 ವರ್ಷದ ಬಾಲಕನಿಗೆ ಗಾಯ: ಶ್ವಾನ ಮಾಲಿಕನ ವಿರುದ್ಧ ಪ್ರಕರಣ ದಾಖಲು
chikkamagaluru: ಹೆಬ್ಬಾಳ್ಕರ್ ನಿಂದನೆ ಪ್ರಕರಣ; ಸಿ.ಟಿ.ರವಿಗೆ ಬೆದರಿಕೆ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.