ಪರಿಸರಸ್ನೇಹಿ ಪ್ರತಿಪಾದಕ ಗ್ರಂಥ ಬಿಡುಗಡೆ
Team Udayavani, Sep 10, 2019, 5:38 AM IST
ಉಡುಪಿ: ಭೂತಾನಿನ ಮಾಜಿ ಶಿಕ್ಷಣ ಸಚಿವ ಠಾಕೂರ್ ಸಿಂಗ್ ಪೌಡ್ಯೆಲ್ ಬರೆದ “ಮೈ ಗ್ರೀನ್ ಸ್ಕೂಲ್’ ಪುಸ್ತಕದ ಕನ್ನಡ ಅವತರಣಿಕೆ “ನನ್ನ ಪರ್ಣಿ ಶಾಲೆ’ಯನ್ನು ಮಣಿಪಾಲದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಿಎಲ್‌ಐಎಲ್ ಅಟ್ ಇಂಡಿಯಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಪುಸ್ತಕವನ್ನು ಬಿಡುಗಡೆಗೊಳಿಸಿದ ಮಾಹೆ ವಿ.ವಿ. ಕುಲಪತಿ ಡಾ|ಎಚ್. ವಿನೋದ ಭಟ್ ಅವರು, ಭಾರತೀಯ ಶಿಕ್ಷಣ ಪದ್ಧತಿಗೆ ಮರೆಯಲಾಗದ ಕೊಡುಗೆ ಸಲ್ಲಿಸಿರುವ ಡಾ| ರಾಧಾಕೃಷ್ಣನ್ ಅವರ ಸ್ಮರಣೀಯ ದಿನದಂದು ಬಹುಭಾಷೀಯ ಸಮ್ಮೇಳನವನ್ನು ಆಯೋಜಿಸಿದ್ದು ಶ್ಲಾಘನೀಯ. ಭಾರತೀಯ ಆಯಾಮದಲ್ಲಿ ಹೊಸ ಬೋಧನಕ್ರಮದ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿರುವ ಯೂರೋಪ್ ಮತ್ತು ಭಾರತೀಯ ಪಾಲುದಾರ ಸಂಸ್ಥೆಗಳು ಉತ್ತಮ ಕೆಲಸ ನಿರ್ವಹಿಸುತ್ತಿವೆ ಎಂದರು.
ಪ್ರಕೃತಿಯ ಘನಿಷ್ಠ ಸಂಬಂಧದೊಂದಿಗೆ ಒಬ್ಬ ವ್ಯಕ್ತಿಯ ಸಮಗ್ರ ಬೆಳವಣಿಗೆ ಸಾಧ್ಯ ಎಂಬುದನ್ನು ಪುಸ್ತಕದಲ್ಲಿ ಪ್ರತಿಪಾದಿಸಿದ್ದೇನೆ. ವ್ಯಕ್ತಿಯು ಪ್ರಕೃತಿಯೊಂದಿಗೆ ಬಾಳುವೆ ನಡೆಸುವ ಬದುಕಿನ ಸಂಸ್ಕೃತಿ ಶಾಲಾ ಮಟ್ಟದಲ್ಲಿ ಜಾರಿಗೊಂಡರೆ ಬಲಿಷ್ಠ ಪರಿಸರಸ್ನೇಹಿ ಮತ್ತು ಮಾನವಿಕ ಸೂಕ್ಷ್ಮತೆಗಳನ್ನು ಒಳಗೊಂಡ ವ್ಯಕ್ತಿಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ತನ್ನ ಪುಸ್ತಕದ ಬಗ್ಗೆ ಪೌಡ್ಯೆಲ್ ಹೇಳಿದರು.ಮಣಿಪಾಲ್ ಯುನಿವರ್ಸಲ್ ಪ್ರಸ್ ಮುಖ್ಯ ಸಂಪಾದಕಿ ಪ್ರೊ|ನೀತಾ ಇನಾಂದಾರ್ ಸ್ವಾಗತಿಸಿ ಪೌಡ್ಯೆಲ್ ಅವರನ್ನು ಭೇಟಿಯಾದಾಗ ಪುಸ್ತಕವನ್ನು ಅನುವಾದಿಸಲು ಪ್ರೇರಣೆ ದೊರಕಿತು ಎಂದರು. ಅನುವಾದ ಕಾರ್ಯದಲ್ಲಿ ಡಾ| ಎನ್. ಟಿ. ಭಟ್ ಅವರ ಸಹಕಾರವನ್ನು ಸ್ಮರಿಸಿಕೊಂಡರು. ಡಾ| ಎನ್.ಟಿ. ಭಟ್ ಶುಭಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.