ಶಿಥಿಲವಾಯಿತು 15 ವರ್ಷ ಹಳೆಯ ಯುಜಿಡಿ ಪೈಪ್‌ಲೈನ್
ನಗರವೆಲ್ಲ ಗಬ್ಬೆದ್ದು ನಾರುತ್ತಿದೆ: ಬೇಕಿದೆ ಶಾಶ್ವತ ಪರಿಹಾರ
Team Udayavani, Aug 3, 2019, 5:01 AM IST
ಉಡುಪಿ: ಅಡ್ಕದಕಟ್ಟೆ ಮಾರ್ಗ ಹಾಗೂ ಮೂಡು ತೋಟ ಮಧ್ಯದಿಂದ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕಕ್ಕೆ (ಎಸ್‌ಟಿಪಿ) ಹಾದು ಹೋಗುವ ಒಳಚರಂಡಿ ಪೈಪ್‌ಲೈನ್ ಸ್ಥಳೀಯರ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಈ ಮಾರ್ಗದ ಒಳಚರಂಡಿ ಪೈಪ್ ಒಡೆದು ಹೊರಗೆ ಹರಿಯುತ್ತಿರುವ ಕೊಳಚೆ ನೀರು ಸ್ಥಳೀಯರ ನಿ¨ªೆಗೆಡಿಸಿದೆ.
ದುರಸ್ತಿ ಭಾಗ್ಯ ದೊರಕಿಲ್ಲ
ನಗರದ ವಿವಿಧ ಭಾಗಗಳ ಕೊಳಚೆ ನೀರು ಒಳಚರಂಡಿ (ಯುಜಿಡಿ) ನಿಟ್ಟೂರು ಅರ್ಕದ ಕಟ್ಟೆ ಹಾಗೂ ಮೂಡು ತೋಟದ ಮೂಲಕ ನಿಟ್ಟೂರು ಶುದ್ಧೀಕರಣ ಘಟಕಕ್ಕೆ ಹರಿದು ಹೋಗುತ್ತದೆ. ಇದೀಗ ವಿಷ್ಣು ಮೂರ್ತಿ ದೇವಸ್ಥಾನ ಹಾಗೂ ಮೂಡುತೋಟದಿಂದ ಎಸ್‌ಟಿಪಿಗೆ ಹೋಗುವ ಪೈಪ್ ಲೈನ್ ಒಡೆದು ಹೋಗಿ 10 ದಿನ ಕಳೆದರೂ ನಗರಸಭೆ ಅಧಿಕಾರಿಗಳಿಂದ ದುರಸ್ತಿ ಭಾಗ್ಯ ದೊರಕಿಲ್ಲ.
ಸಾಂಕ್ರಾಮಿಕ ರೋಗದ ಭೀತಿ
ನಿಟ್ಟೂರು ಎಸ್‌ಟಿಪಿಗೆ ಪೈಪ್‌ಲೈನ್ ಮೂಲಕ ಹಾದು ಹೋಗಬೇಕಾದ ಕೊಳಚೆ ನೀರು ಹಾಗೂ ಮಲಮೂತ್ರ ಒಡೆದ ಪಿಟ್‌ನಿಂದ ಹೊರಕ್ಕೆ ಹರಿಯುತ್ತಿದೆ. ಇದರಿಂದಾಗಿ ಪರಿಸರದ ನೈರ್ಮಲ್ಯ ಹಾಳಾಗಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಭೀತಿ ಮನೆ ಮಾಡಿದೆ. ಈಗಾಗಲೇ ಹಲವರು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಅಲ್ಲದೇ, ಪೈಪ್ ಲೈನ್ ಸಮೀಪದ ನಿವಾಸಿಗಳು ಮನೆ ಖಾಲಿ ಮಾಡಿ ಬೇರೆ ಪ್ರದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ. ಖಾಲಿಯಾಗಿರುವ ಮನೆಗಳಿಗೆ ಬರಲು ಬಾಡಿಗೆದಾರರು ಹಿಂದೇಟು ಹಾಕುತ್ತಿದ್ದು, ಇದರಿಂದ ಮನೆ ಮಾಲಿಕರು ಚಿಂತೆಗೀಡಾಗಿದ್ದಾರೆ.
ಭಕ್ತರಿಗೆ ಕಿರಿಕಿರಿ
ಅರ್ಕದ ಕಟ್ಟೆಯಲ್ಲಿ ಪೈಪ್ ಹೊಡೆದು ಹೋಗಿರುವ ಜಾಗದಿಂದ ಕೂಗಳತೆ ದೂರದಲ್ಲಿ ವಿಷ್ಣುಮೂರ್ತಿ ದೇವಸ್ಥಾನ ಇದೆ. ದೇವಸ್ಥಾನಕ್ಕೆ ಬರುವ ಭಕ್ತರು ಕೊಳಚೆ ನೀರಿನ ದುರ್ನಾತದಿಂದ ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ. ಭಕ್ತರು ಹಾಗೂ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಕ್ಷಾಮ
ಒಳಚರಂಡಿಯಿಂದ ಸೊರಿಕೆಯಿಂದ ವಿಷ್ಣು ಮೂರ್ತಿನಗರ ಹಾಗೂ ಮುಡುತೋಟ ಸಮೀಪದ 20ಕ್ಕಿಂತ ಹೆಚ್ಚಿನ ಬಾವಿ ನೀರು ಹಾಳಾಗಿದೆ. ಹೀಗಾಗಿ ಈ ಪ್ರದೇಶದ ಜನರು ಬಾವಿ ಕೊರೆಸಲು ಹಿಂದೇಟು ಹಾಕುತ್ತಿದ್ದಾರೆ.
ಪೈಪ್ ಲೈನ್ ಶಿಥಿಲಗೊಂಡಿದೆ
ನಗರದಿಂದ ನಿಟ್ಟೂರು ಕೊಳಚೆ ನೀರು ಶುದ್ಧೀಕರಣ ಘಟಕ್ಕೆ ಹೋಗುವ ಪೈಪ್ ಅಲ್ಲಲ್ಲಿ ಒಡೆದು ಹೋಗುತ್ತಿದೆ. 2005ರಲ್ಲಿ ಒಳಚರಂಡಿ ಪೈಪ್‌ಲೈನ್‌ಗಳನ್ನು ಆಳವಡಿಸಲಾಗಿತ್ತು. ಈ ಪೈಪ್ ಆಳವಡಿಸಿ ಸುಮಾರು 15 ವರ್ಷಗಳು ಕಳೆದಿದ್ದು, ಇದೀಗಾ ಪೈಪ್‌ಗ್ಳು ಶಿಥಿಲಾವಸ್ಥೆಗೆ ತಲುಪಿದೆ.
ಬೇಕಿದೆ ಶಾಶ್ವತ ಪರಿಹಾರ!
ನಗರದಿಂದ ನೀರು ಶುದ್ಧೀಕರಣ ಘಟಕಕ್ಕೆ ಹೋಗುವ ಎಲ್ಲ ಒಳಚರಂಡಿ ಪೈಪ್ ಲೈನ್‌ಗಳನ್ನು ಬದಲಾಯಿಸಿದರೆ ಮಾತ್ರ ಸಮಸ್ಯೆ ಮುಕ್ತಿ ಸಿಗಲು ಸಾಧ್ಯ. ಕಳೆದ ಹಲವು ತಿಂಗಳಿನಿಂದ ನಗರ ಸಭೆ ಅಧಿಕಾರಿಗಳು ನಗರದ ವಿವಿಧ ಕಡೆ ಯುಜಿಡಿ ಪೈಪ್ ಲೈನ್ ದುರಸ್ತಿ ಮಾಡಿದರೂ ತಿಂಗಳಾಗುವುದರ ಒಳಗಾಗಿ ಮತ್ತೆ ಹಾಳಾಗುತ್ತಿದೆ.
2ತಿಂಗಳುಗಳಲ್ಲಿ
6 ಬಾರಿ ದುರಸ್ತಿ
ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ಯುಜಿಡಿ ಪೈಪ್‌ಲೈನ್ ಒಡೆದು ಹೋಗಿದೆ. 2 ತಿಂಗಳುಗಳಲ್ಲಿ 6 ಬಾರಿ ದುರಸ್ತಿ ಮಾಡಲಾಗಿದೆ. ನಗರಸಭೆ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.
-ಸಂತೋಷ್ ನಿಟ್ಟೂರು, ವಾರ್ಡ್ ಸದಸ್ಯ, ನಗರಸಭೆ ಉಡುಪಿ.
ಬದಲಿಸುವ ನಿರ್ಧಾರವಾಗಿಲ್ಲ
ನಗರದಲ್ಲಿ ಒಡೆದು ಹೋದ ಯುಜಿಡಿ ಪೈಪ್‌ಲೈನ್ ದುರಸ್ತಿ ನಗರಸಭೆಯಿಂದ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಪೈಪ್ ಲೈನ್ ಬದಲಿಸುವ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ.
-ಆನಂದ ಕೊಲ್ಲೋಳಿಕರ್, ಪೌರಾಯುಕ್ತರು, ನಗರಸಭೆ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranking: ಐಸಿಸಿ ನೂತನ ರ್‍ಯಾಂಕಿಂಗ್ ಪ್ರಕಟ: ಶಾಹೀನ್ ಅಫ್ರಿದಿ ಮತ್ತೆ ನಂ.1
Kalidas Samman: ವರ್ಣಚಿತ್ರಕಾರ ರಘುಪತಿ ಭಟ್ ಅವರಿಗೆ ರಾಷ್ಟ್ರೀಯ ಕಾಳಿದಾಸ್ ಪ್ರಶಸ್ತಿ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.