21 ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ವೈಭವದ “ಗಂಧದ ಕುಡಿ’ ಕಲರವ
Team Udayavani, Mar 26, 2019, 6:30 AM IST
ಕಟಪಾಡಿ: ದೇಶ ವಿದೇಶಗಳಿಂದ 21 ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು ಜಗತ್ತಿನ ಅತ್ಯುತ್ತಮ ಚಿತ್ರಗಳ ಸಾಲಿಗೆ ಸೇರಿದ ‘’ಗಂಧದ ಕುಡಿ’’ಚಲನಚಿತ್ರದ ಬಿಡುಗಡೆಯ ಪ್ರಯುಕ್ತ ‘’ಗಂಧದ ಕುಡಿ ಕಲರವ’’ ವಿಶೇಷ ಕಾರ್ಯಕ್ರಮ ಮಂಗಳೂರಿನ ಕೆನರಾ ಸಿ.ಬಿ.ಎಸ್.ಸಿ.ಶಾಲಾ ಆವರಣದಲ್ಲಿ ರವಿವಾರ ವೈಭವದಿಂದ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ದ.ಕ .ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮಾತನಾಡಿ, ಕಮರ್ಷಿಯಲ್ ಚಿತ್ರಗಳು ಉದ್ಯಮವಾಗಿ ಬೆಳೆಯುತ್ತಿರುವ ಈ ಕಾಲದಲ್ಲಿ ಪರಿಸರದ ಕಥೆಯನ್ನು ಆಧರಿಸಿ ಚಿತ್ರ ನಿರ್ಮಿಸಿದ ನಿರ್ಮಾಪಕರ ಸಾಹಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಗರಗಳು ವೇಗವಾಗಿ ಬೆಳೆಯುತ್ತಿವೆೆ.ಹಾಗೆಯೇ ಮರಗಳು ವೇಗವಾಗಿ ನಾಶವಾಗುತ್ತಿವೆ. ಪರಿಸರ ದ ಕಾಳಜಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಥೆ ಹೊಂದಿರುವ ಈ ಚಿತ್ರವನ್ನು ಹೆತ್ತವರು ತಮ್ಮ ಮಕ್ಕಳಿಗೆ ತೋರಿಸಬೇಕೆಂದು ಅವರು ಹೇಳಿದರು.
ಕನ್ನಡದ ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಗಂಧದ ಮರ ಕೆತ್ತಿದರೂ ಸುಟ್ಟರೂ ತನ್ನ ಸುವಾಸನೆ ಬಿಡುವುದಿಲ್ಲ. ಹಾಗೆಯೇ ಈ ಚಿತ್ರ ಕೂಡ ಯಶಸ್ಸಿನ ಗಂಧದ ಪರಿಮಳವನ್ನೇ ಬೀರಲಿ ಎಂದು ಶುಭ ಹಾರೈಸಿದರು.
ತೆರೆ ಕಾಣುವ ಮುನ್ನವೇ 21 ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು
ನಿರ್ಮಾಪಕ ಕೆ.ಸತ್ಯೇಂದ್ರ ಪೈ ಮಾತನಾಡುತ್ತಾ, ಹೇರಳವಾಗಿ ಸಿಗುತ್ತಿದ್ದ ನೀರನ್ನು ಇದೀಗ ಹಣ ತೆತ್ತು ಖರೀದಿಸುವಂತಅಗಿದೆ. ಮುಂದಕ್ಕೆ ನಗರೀಕರಣದ ಭರದಲ್ಲಿ ಪರಿಸರ ನಾಶವಾದರೆ ಆಮ್ಲಜನಕವನ್ನೂ ಖರೀದಿಸುವ ಕಾಲ ಬರಬಹುದು. ಆ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಉತ್ತಮ ಸಂದೇಶವನ್ನು ನೀಡುವ ಸದುದ್ದೇಶದಿಂದ ಚಿತ್ರವನ್ನು ನಿರ್ಮಿಸಿದ್ದು, ಚಿತ್ರ ತೆರೆ ಕಾಣುವ ಮುನ್ನವೇ 21 ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಅಂತಹ ಚಿತ್ರದ ಸಮಗ್ರ ಯಶಸ್ಸು ಸಂತೋಷ್ ಶೆಟ್ಟಿಗೆ ಸಲ್ಲಬೇಕು ಎಂದಿದ್ದು ಅಗಲಿದ ನಿರ್ದೇಶಕನನ್ನು ಸ್ಮರಿಸಿದರು. ಬಹು ನಿರೀಕ್ಷಿತ ಗಂಧದ ಕುಡಿ ಚಿತ್ರವು ಮಾ.29ರಂದು ರಾಜ್ಯದಾದ್ಯಂತ ತೆರೆಕಾಣಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂತೋಷ್ ಶೆಟ್ಟಿ ಅವರ ತಾಯಿ ಲೀಲಾ ಶಂಕರ ಶೆಟ್ಟಿಯನ್ನು ನಿರ್ದೇಶಕರ ಪರವಾಗಿ ಸಮ್ಮಾನಿಸಲಾಯಿತು.
ಚಲನಚಿತ್ರ ರಂಗದ ಹಿರಿಯ ನಟ ರಮೇಶ್ ಭಟ್, ಶಿವಧ್ವಜ್, ಜ್ಯೋತಿ ರೈ,ರೂಪದರ್ಶಿ ತƒಪ್ತಿ ಅರವಿಂದ್, ನಿವೃತ್ತ ನ್ಯಾಯಾಧೀಶ ಪಿ.ಷಣ್ಮುಗಂ, ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ನ್ಯಾಯವಾದಿ ಅಮƒತ ಕಿಣಿ, ವಾಮನ್ ನಾಯಕ್, ಪತ್ರಕರ್ತ ಜಗನ್ನಾಥ್ ಶೆಟ್ಟಿ ಬಾಳ, ರೊನಾಲ್ಡ್ ಮಾರ್ಟಿನ್, ಶರತ್ ಪೂಜಾರಿ, ಜೀತ್ ಮಿಲನ್ ರೋಚ್, ನ್ಯಾಯವಾದಿ ಮಮತಾ ಅಧಿಕಾರಿ, ಕೆನರಾ ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಲಕ್ಷಿ$¾à ನಾರಾಯಣ್, ರೊ| ಪಾಸ್ಟ್ ಗವರ್ನರ್ ಭರತೇಶ್‌ಅಧಿರಾಜ್ ಸೇರಿದಂತೆ ಚಿತ್ರ ತಂಡದ ಸದಸ್ಯರು ಉಪಸ್ಥಿತರಿದ್ದರು.
ನಿರ್ಮಾಪಕರಲ್ಲೊಬ್ಬರಾದ ಕೃಷ್ಣ ಮೋಹನ್ ಪೈ ಸ್ವಾಗತಿಸಿದರು. ಸವಿ ಸವಿ ನೆನಪು ಖ್ಯಾತಿಯ ಆರ್.ಜೆ.ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
ಖ್ಯಾತ ಗಾಯಕ ಪ್ರಕಾಶ್ ಮಹದೇವ್ ಹಾಗೂ ಜೂನಿಯರ್ ವಿಷ್ಣುವರ್ಧನ್ ತಂಡದಿಂದ ಸಾಂಸ್ಕƒತಿಕ ವೈವಿಧ್ಯ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.