ಇನ್ನು 45 ದಿನ ಮರಳು ಕಷ್ಟ! ಅಳೆದು ತೂಗು’ವ ನಿಯಮದಿಂದ ಅಡ್ಡಿ
Team Udayavani, Dec 7, 2019, 5:08 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ತೂಕ ಮಾಡಿ ಮರಳು ನೀಡಬೇಕೆಂದು ಜಿಲ್ಲಾಡಳಿತ ಕಠಿನ ನಿಲುವು ತಳೆದ ಕಾರಣ ಇನ್ನೂ 45 ದಿನಗಳ ಕಾಲ ಮರಳು ದೊರೆಯುವ ಸಾಧ್ಯತೆ ಕಡಿಮೆಯಿದೆ. ವೇ ಬ್ರಿಡ್ಜ್ ಬೇಗ ರಚನೆಯಾದರೆ, ನಿಯಮದಲ್ಲಿ ಸಡಿಲಿಕೆಯಾದರೆ ಮಾತ್ರ ಬೇಗ ದೊರೆಯಬಹುದು.
ಮರಳು ಏಲಂ ವಹಿಸಿಕೊಂಡಾ ಗಲೇ ಟೆಂಡರ್ ಶರತ್ತಿನಲ್ಲಿ ವೇ ಬ್ರಿಡ್ಜ್ ಮೂಲಕ ಲಾರಿ ಸಹಿತ ತೂಕ ಮಾಡಿ ಮರಳು ವಿತರಿಸಬೇಕೆಂದು ಸೂಚಿಸಲಾಗಿತ್ತು. ನದಿಯಿಂದ ಸಾಂಪ್ರದಾಯಿಕವಾಗಿ ತೆಗೆದು, ಸ್ಟಾಕ್ ಯಾರ್ಡ್‌ನಲ್ಲಿ ಸಂಗ್ರಹಿಸಿ ನೀಡಬೇಕೆಂದು ನಿಯಮವಿದೆ. ಆದರೆ ಬೇಡಿಕೆ, ಗ್ರಾಹಕರ ಒತ್ತಡದಿಂದಾಗಿ ವೇ ಬ್ರಿಡ್ಜ್ ಸ್ಥಾಪನೆಗೆ ಮೊದಲೇ, ಮರಳು ತೆಗೆಯುವಲ್ಲಿಯೇ ಲಾರಿಗೆ ತುಂಬಿಸಿ ನೀಡಲಾಗುತ್ತಿತ್ತು. ಇದಕ್ಕೆ ಗಣಿ ಇಲಾಖೆ ಮತ್ತು ಜಿಲ್ಲಾಡಳಿತ ಕಡಿವಾಣ ಹಾಕಿದೆ. ಗ್ರಾಹಕರಿಗೆ ಕಡಿಮೆ ಪ್ರಮಾಣದ ಮರಳು ವಿತರಣೆಯಾಗುವ ಸಾಧ್ಯತೆಯಿದೆ, ತೂಗಿಯೇ ಮರಳು ನೀಡಬೇಕೆಂದು ಕಡ್ಡಾಯ ಮಾಡಿದ್ದು, ಎರಡು ದಿನಗಳಲ್ಲಿ ವೇ ಬ್ರಿಡ್ಜ್ ಹಾಕಿ ಮರಳು ನೀಡಲು ಆದೇಶಿಸಲಾಗಿದೆ. ಅಲ್ಲಿಯ ವರೆಗೆ ಮರಳುಗಾರಿಕೆಗೆ ನೀಡಿದ ಅನುಮತಿಯನ್ನು ಅಮಾನತಿನಲ್ಲಿ ಇರಿಸಲಾಗಿದೆ.
ಮರಳು ತೆಗೆಯುವುದಕ್ಕೆ ಆಕ್ಷೇಪವಿಲ್ಲ, ಸಾಗಾಟಕ್ಕೆ ಮಾತ್ರ. ಆದರೆ ಮರಳು ತೆಗೆದವರಿಗೆ ಮಾರಾಟವಾಗದೆ ಹಣ ನೀಡಲು ಸಾಧ್ಯವಿಲ್ಲ ಎಂದು ಕಾರಣ ನೀಡಿ ಮರಳುಗಾರಿಕೆ ನಿಲ್ಲಿಸಲಾಗಿದೆ. ವೇ ಬ್ರಿಡ್ಜ್ ಹಾಕಲು ಕನಿಷ್ಠ 45 ದಿನಗಳು ಬೇಕು ಎಂದು ಗುತ್ತಿಗೆದಾರರು ಹೇಳಿದ್ದಾರೆ.
ಈ ಮಧ್ಯೆ “ಉದಯವಾಣಿ’ಯಲ್ಲಿ ವರದಿ ಪ್ರಕಟವಾದ ಬಳಿಕ ಲೋಡ್ ಮಾಡಿ ಸಾಗಾಟಕ್ಕೆ ತಡೆಯೊಡ್ಡಿ ಬಳ್ಕೂರಿನ ಮೈದಾನವೊಂದರಲ್ಲಿ ಬಾಕಿಯಾಗಿದ್ದ ನೂರಾರು ಲಾರಿಗಳನ್ನು ಗಣಿ ಇಲಾಖೆ ಅಧಿಕಾರಿಗಳು ಗುರುವಾರ ಬಿಡುಗಡೆ ಮಾಡಿದ್ದಾರೆ. ಹಿರಿಯಡ್ಕದಲ್ಲಿ ಸಮಸ್ಯೆ ಇಲ್ಲ. ಅಲ್ಲಿ ಆ್ಯಪ್ ಮೂಲಕ ಮರಳು ಬುಕಿಂಗ್ ಮಾಡಿ ನೀಡಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.