ಪರ್ಯಾಯ “ಉಗ್ರಾಣ’ಕ್ಕೆ ಬರಲಿದೆ ಧವಸ ಧಾನ್ಯ…
Team Udayavani, Jan 6, 2018, 11:50 AM IST
ಉಡುಪಿ: ಪರ್ಯಾಯ ಪೂಜಾ ಉತ್ಸವ ಸಮೀಪಿಸುತ್ತಿದೆ ಎನ್ನುವಾಗ ಹೊರೆಕಾಣಿಕೆ ಆಗಮನವೂ ಆರಂಭವಾಗುತ್ತದೆ. ಇವುಗಳೆಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುವ ಸ್ಥಳವೇ ಗೋದಾಮು, ಸಾಂಪ್ರದಾಯಿಕ ಹೆಸರು “ಉಗ್ರಾಣ’. ಶ್ರೀಕೃಷ್ಣಮಠದ ಪಾರ್ಕಿಂಗ್ ಪ್ರದೇಶದಲ್ಲಿ ಪಲಿಮಾರು ಪರ್ಯಾಯದ ಉಗ್ರಾಣವನ್ನು ಸಿದ್ಧಪಡಿಸಲಾಗಿದೆ. ಇದರ ಉದ್ಘಾಟನೆಯನ್ನು ಶುಕ್ರವಾರ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಉದ್ಘಾಟಿಸಿದರು. ಸ್ವಾಗತ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪರ್ಯಾಯಕ್ಕೆ ಹೊರೆಕಾಣಿಕೆ ಆರಂಭವೂ ಸ್ವಾಮೀಜಿಯವರ ಪುರಪ್ರವೇಶದ ಬಳಿಕ ಆರಂಭಗೊಳ್ಳುತ್ತದೆ. ಇದು ಜ. 15-16ರವರೆಗೂ ಮುಂದುವರಿಯುತ್ತದೆ. ಕರಾವಳಿಯಾದ್ಯಂತದಿಂದ ಜನರು ಹೊರೆಕಾಣಿಕೆ ಸಮರ್ಪಿಸಲಿದ್ದಾರೆ. ಇದರಲ್ಲಿ ತೆಂಗಿನ ಕಾಯಿ, ಸಿಂಗಾರದ ಹೂವು, ಬೇಳೇಕಾಳು, ತರಕಾರಿ, ಎಣ್ಣೆ, ತುಪ್ಪ ಹೀಗೆ ತರಹೇವಾರಿಗಳಿರುತ್ತವೆ. ಇವುಗಳು ಪರ್ಯಾಯೋತ್ಸವದಂದು ಆಗಮಿಸುವ ಸಾವಿರಾರು ಭಕ್ತರ ಭೋಜನಕ್ಕಾಗಿ. ಈ ಸಾಮಗ್ರಿಗಳನ್ನು ವಿಂಗಡಿಸಿಡುವುದೂ ಒಂದು ಕಲೆಯೇ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಯುವ ಬ್ರಾಹ್ಮಣ ಪರಿಷತ್ ಕಾರ್ಯಕರ್ತರು ಉಗ್ರಾಣವನ್ನು ನಿರ್ವಹಿಸುತ್ತಾರೆ.
“ಪ್ರಸ್ತುತದ ಉಗ್ರಾಣ 200×40 ಅಡಿ= 8,000 ಚದರಡಿ ವಿಸ್ತೀರ್ಣವಿದೆ. ಇದು ಸಿಪ್ಪೆ ಇರುವ ತೆಂಗಿನ ಕಾಯಿ ದಾಸ್ತಾನಿಗೆ ಸಾಕಾಗುವುದಿಲ್ಲ. ಆದ ಕಾರಣ ಇನ್ನೊಂದು ನಾಲ್ಕೈದು ಸಾವಿರ ಚದರಡಿಯ ಉಗ್ರಾಣವನ್ನು ನಿರ್ಮಿಸಲಿದ್ದೇವೆ’ ಎಂದು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಬಾಲಾಜಿ ರಾಘವೇಂದ್ರ ಆಚಾರ್ಯ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ
Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ
ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…
Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.