ಕಾರ್ಯಕ್ರಮಗಳಿಂದ ಬಾಂಧವ್ಯ ವೃದ್ಧಿ: ನರಸಿಂಹ ಹಳಗೇರಿ
Team Udayavani, Mar 9, 2017, 3:06 PM IST
ಕುಂದಾಪುರ: ಒತ್ತಡದ ಜೀವನ, ಜಂಜಾಟಗಳಿಂದಾಗಿ ಮನುಷ್ಯನ ಸಂಬಂಧಗಳು ಕಳಚಿ ಹೋಗುತ್ತಿದ್ದು, ವಧು – ವರರ ವೇದಿಕೆಗಳ ಸಮಾಜಮುಖೀ ಕಾರ್ಯಕ್ರಮಗಳಿಂದ ಸಮಾಜ ಬಾಂಧವರ ನಡುವೆ ಬಾಂಧವ್ಯ ವೃದ್ಧಿಸುವ ಮಹತ್ಕಾರ್ಯ ಯಶಸ್ವಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಬೈಂದೂರು ವಲಯ ಸಂಚಾಲಕ ನರಸಿಂಹ ಹಳಗೇರಿ ಹೇಳಿದರು.
ಕುಂದಾಪುರ ತಾಲೂಕು ಪರಿಶಿಷ್ಟ ಜಾತಿ ವಧು ವರರ ವೇದಿಕೆ ಮತ್ತು ಗಂಗೊಳ್ಳಿಯ ಡಾ| ಬಿ. ಆರ್. ಅಂಬೇಡ್ಕರ್ ಯುವಕ ಮಂಡಲ ಆಶ್ರಯದಲ್ಲಿ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ರವಿವಾರ ಜರಗಿದ ಕರಾವಳಿಯ ಕಾಸರಗೋಡು ಜಿಲ್ಲೆಯಿಂದ ಕುಂದಾಪುರ ತಾಲೂಕಿನ ಶಿರೂರು ವ್ಯಾಪ್ತಿಯ ಪರಿಶಿಷ್ಟ ಜಾತಿ ವಧು – ವರರ ಮುಖಾಮುಖೀ 2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ.ಜಾ. ಸಮಾಜದ ಅವಿವಾಹಿತರನ್ನು ಮುಖ್ಯವಾಹಿನಿಗೆ ತರುವಲ್ಲಿ ವೇದಿಕೆ ಉತ್ತಮ ಕಾರ್ಯ ಮಾಡಿದೆ. ವಧು-ವರ ನೋಡುವುದಕ್ಕೆ ಸಾಕಷ್ಟು ಹಣ ಮತ್ತು ಸಮಯ ವ್ಯಯಿಸುವುದಕ್ಕಿಂತ ಸಾಮೂಹಿಕ ವೇದಿಕೆ ಕಲ್ಪಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದರು.
ವೇದಿಕೆ ಅಧ್ಯಕ್ಷ ಮೋನಪ್ಪ ಅದ್ಯಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ವೇದಿಕೆ ಯಾವುದೇ ಶುಲ್ಕ ತೆಗೆದುಕೊಳ್ಳದೇ ಸಮಾಜಸೇವಾ ಮನೋಭಾವದಿಂದ ನಡೆಸುವ ವಧು-ವರರ ಮುಖಾಮುಖೀ ಕಾರ್ಯಕ್ರಮದ ಪ್ರಯೋಜನವನ್ನು ಪ.ಜಾ. ಬಾಂಧವರು ನಿರೀಕ್ಷಿತ ಮಟ್ಟದಲ್ಲಿ ಪಡೆದುಕೊಳ್ಳದಿರುವುದು ಬೇಸರದ ಸಂಗತಿ ಎಂದರು.
ಅತಿಥಿ ಮಂಗಳೂರು ವಿ.ವಿ. ರಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ| ಲಕ್ಷ್ಮಣ ಕುಕ್ಕುಡೆ, ಬೈಂದೂರು ಉಪವಲಯ ಅರಣ್ಯಾಧಿಧಿಕಾರಿ ಸದಾಶಿವ ಕೆ. ಗಂಗೊಳ್ಳಿ, ಬೈಂದೂರು ಸ.ಪ.ಪೂ. ಕಾಲೇಜು ಉಪಪ್ರಾಂಶುಪಾಲೆ ಜ್ಯೋತಿ, ಕೋಡಿಕಲ್ ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕ ಜಯಂತ್, ಸಾಮಾಜಿಕ ಕಾರ್ಯಕರ್ತ ಭರತ್ ಎಸ್. ಕರ್ಕೇರ, ಪಡುಬಿದ್ರಿ ವಧುವರರ ವೇದಿಕೆ ಮುಂದಾಳು ಭಾಸ್ಕರ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು. ವಿವಾಹಾಕಾಂಕ್ಷಿ ವಧು-ವರರ ಮುಖಾಮುಖೀ ಯನ್ನು ಈ ಸಂದರ್ಭ ನಡೆಸಲಾಯಿತು.
ಸತೀಶ್ ಜಿ. ಗಂಗೊಳ್ಳಿ ಸ್ವಾಗತಿಸಿದರು. ವೇದಿಕೆ ಕಾರ್ಯದರ್ಶಿ ಭಾಸ್ಕರ ಎಚ್. ಜಿ. ವರದಿ ವಾಚಿಸಿದರು. ಶೀನ ಕಾವ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಅರುಣ ಕುಮಾರ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.