ಕಟ್ಟಕಡೆಯ ಬಡವನಿಗೆ ಶ್ರೇಷ್ಠ ಆರೋಗ್ಯ ಸೇವೆ
Team Udayavani, Nov 20, 2017, 10:55 AM IST
ಉಡುಪಿ: ಕಟ್ಟಕಡೆಯ ಬಡವನಿಗೂ ಉನ್ನತ ಆರೋಗ್ಯ ಸೇವೆ ಕೊಡುವುದು ನಮ್ಮ ಗುರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಬಿಆರ್‌ಎಸ್ ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯನ್ನು ರವಿವಾರ ಉದ್ಘಾಟಿಸಿ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ಇದೇ ಸಂದರ್ಭ ದೂರ ನಿಯಂತ್ರಣದಲ್ಲಿ ಜಿಲ್ಲೆಯ 4 ಇಂದಿರಾ ಕ್ಯಾಂಟೀನ್‌ಗಳಿಗೆ ಶಿಲಾನ್ಯಾಸ ನಡೆಸಿ ಉಡುಪಿ ಜಿಲ್ಲೆ ಯನ್ನು ಬಯಲು ಶೌಚಮುಕ್ತ ಜಿಲ್ಲೆ ಎಂದು ಘೋಷಿಸಿದರು.
ಈ ಆಸ್ಪತ್ರೆಯಲ್ಲಿ ಹಿಂದೆ 70 ಹಾಸಿಗೆಗಳು ಇದ್ದವು. ಈಗ ಇದನ್ನು 200ಕ್ಕೇರಿಸಲಾಗಿದೆ. ಇದರ ಸೇವೆ ಜ. 15ರ ಬಳಿಕ ಪೂರ್ಣಪ್ರಮಾಣದಲ್ಲಿ ಸಿಗಲಿದೆ. ಈ ಆಸ್ಪತ್ರೆಯಲ್ಲಿ ಕಟ್ಟಕಡೆಯ ಬಡವನಿಗೆ ಉಚಿತವಾಗಿ ಸೇವೆ ದೊರಕಲಿದೆ. ಈಗ 70 ಹಾಸಿಗೆಗಳ ಆಸ್ಪತ್ರೆ ಇರುವಲ್ಲಿ 400 ಹಾಸಿಗೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸಲಾಗುವುದು. ಇದರಿಂದ ಬಂದ ಹಣದಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸೇವೆ ಒದಗಿಸ ಲಾಗುವುದು. ಒಂದು ವೇಳೆ ತಾಯಿ ಮಕ್ಕಳ ಆಸ್ಪತ್ರೆಯ ರೋಗಿಗಳಿಗೆ ಇನ್ನೂ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ನೀಡ ಲಾಗುವುದು. ಇದರ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
ಜ. 1ರಿಂದ 500 ಇಂದಿರಾ ಕ್ಯಾಂಟೀನ್
ಜ. 1ರಿಂದ ರಾಜ್ಯದಲ್ಲಿ 500 ಇಂದಿರಾ ಕ್ಯಾಂಟೀನ್ ಆರಂಭಿಸ ಲಾಗುವುದು. ಇದರಲ್ಲಿ ಬೆಂಗ ಳೂರಿ ನಲ್ಲಿ 200, ಜಿಲ್ಲಾ ಮತ್ತು ತಾಲೂಕು ಕೇಂದ್ರ ಗಳಲ್ಲಿ 300 ಕ್ಯಾಂಟೀನ್ ಸೇರಿವೆ. ದೇಶದ ಬಡವ ರನ್ನು ಮೇಲಕ್ಕೆತ್ತಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲಿ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಅ. 2: ಬಯಲು ಶೌಚಮುಕ್ತ ರಾಜ್ಯ
ಬಯಲು ಶೌಚ ಮುಕ್ತ ಜಿಲ್ಲೆಯಾಗಿ ಉಡುಪಿ ಜಿಲ್ಲೆ ಯನ್ನು ಘೋಷಿಸಲಾಗಿದೆ. ಇದೇ ಮೊದಲ ಜಿಲ್ಲೆ ಯಾಗಿದೆ. ಬಯಲು ಶೌಚ ಮುಕ್ತ ರಾಜ್ಯವಾಗಿ ಕರ್ನಾಟಕ ರೂಪುಗೊಳ್ಳಬೇಕು. ಇದು ಮುಂದಿನ ಅ. 2ರೊಳಗೆ ಸಾಧ್ಯವಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕಾಂಗ್ರೆಸ್‌ಮುಕ್ತ ಹೇಗೆ ಸಾಧ್ಯ?
ನಮ್ಮ ವಿರೋಧಿಗಳು ಕಾಂಗ್ರೆಸ್‌ಮುಕ್ತ ರಾಜ್ಯ ಮಾಡು ತ್ತೇವೆಂದು ಹೇಳುತ್ತಿದ್ದಾರೆ. ನಾವು ಬಡವರ ಪರ ವಾಗಿ ಹತ್ತು ಹಲವು ಯೋಜನೆಗಳನ್ನು ರೂಪಿಸು ತ್ತಿದ್ದೇವೆ. ವಿರೋಧಿಗಳು ಕೇವಲ ಭ್ರಮೆಯಲ್ಲಿದ್ದಾರೆ. ಬಡವರು, ಕಾರ್ಮಿಕರು, ಮಹಿಳೆಯರು ನಮ್ಮ ಪರ ಇದ್ದಾರೆ. ಇವರು ಯಾತ್ರೆ ಮಾಡಿದರೆ ಆಗುತ್ತದೆಯೆ? ಅಧಿಕಾರಕ್ಕಾಗಿ ಪರಿವರ್ತನೆ ಸಾಧ್ಯವೆ? ಧರ್ಮ, ಜಾತಿಗಳ ನಡುವೆ ಬೆಂಕಿ ಹಾಕುವವರಿಂದ ಪರಿ ವರ್ತನೆಯೆ? ನಮ್ಮ ಬಡವರ ಕಾಳಜಿಯ ಕೆಲಸಕ್ಕೆ ಡಾ|ಬಿ.ಆರ್. ಶೆಟ್ಟಿಯವರು ಕೈಜೋಡಿಸಿದ್ದಾರೆಂದು ಸಿದ್ದರಾಮಯ್ಯ ತಿಳಿಸಿದರು.
ಜ. 15: ಆರೋಗ್ಯ ಸಚಿವರು ಬರ್ತಾರೆ
ಆರೋಗ್ಯ ಸಚಿವ ರಮೇಶ್ ಕುಮಾರ್ ಅವರು ಮಾತನಾಡಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿಯೂ ಬಿಪಿಎಲ್‌ಕಾರ್ಡ್, ಸರಕಾರಿ ಪ್ಯಾಕೇಜ್ ಸೌಲಭ್ಯಗಳು ಸಿಗುತ್ತವೆ. ತಾಯಿ ಮಕ್ಕಳ ಆಸ್ಪತ್ರೆ ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯುತ್ತದೆ. ಜ. 15ರ ಬಳಿಕ ಪೂರ್ಣಪ್ರಮಾಣದ ಸೇವೆ ಆರಂಭವಾಗುವಾಗ ನಾನು ಎಲ್ಲಿದ್ದರೂ ಬರುತ್ತೇನೆ ಎಂದರು.
ವೈದ್ಯರಿಗೆ ಪರೋಕ್ಷ ಚಾಟಿ
ಚಿಕಿತ್ಸೆ ಸಿಗದೆ ಸತ್ತು ಹೋದರೆ ಯಾರು ಗತಿ? ಹೆಣ ಬಿಡಿಸಿಕೊಳ್ಳಲು ಪರದಾಡುತ್ತಿದ್ದರೆ ಆ ಗೋಳನ್ನು ಯಾರ ಬಳಿ ಹೇಳಿಕೊಳ್ಳಬೇಕು? ಇಂತ ಹವ ರಿಗೆ ಪರಿಹಾರ ದೊರಕಿಸಿಕೊಡಲು ಜನಪರ ವಾಗಿ ಹೊರಟಿ ದ್ದೇವೆ ಎಂದು ವೈದ್ಯರ ಮುಷ್ಕರವನ್ನು ನೇರವಾಗಿ ಪ್ರಸ್ತಾ ವಿಸದೆ ರಮೇಶ್‌ಕುಮಾರ್ ಅಸಮಾಧಾನ ವ್ಯಕ್ತ ಪಡಿಸಿದರು. ಯಾರು ಗೆಲ್ಲುತ್ತಾರೆ? ಯಾರು ಸೋಲು ತ್ತಾರೆ ಎನ್ನುವುದು ಮುಖ್ಯವಲ್ಲ. ಜನರು ತೀರ್ಮಾನ ಮಾಡುತ್ತಾರೆ. ಜನಪರ ಮಸೂದೆಯನ್ನು ವಿರೋಧಿಸುವವರ ನಿಜ ಸ್ವರೂಪ ಅರ್ಥವಾಗುತ್ತದೆ ಎಂದು ಹೇಳಿದರು.
ಉಚಿತ ಸೇವೆ: ತಪ್ಪಿದಲ್ಲಿ ಧರಣಿ
ಜ. 15ರ ಬಳಿಕ ನೂರಾರು ಬಡರೋಗಿಗಳಿಗೆ ಶ್ರೇಷ್ಠ ದರ್ಜೆಯ ಸೇವೆ ದೊರಕಲಿದೆ. ಆಗಲೇ ಈಗ ಕೆಲವರು ಕೇಳುವ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆ. ಬಡವರಿಗೆ ಇಲ್ಲಿ ಉಚಿತ ಸೇವೆ ದೊರಕಬೇಕು. ಒಂದು ವೇಳೆ ತಪ್ಪಿದಲ್ಲಿ ಧರಣಿ ಕುಳಿತುಕೊಳ್ಳುವವರಲ್ಲಿ ನಾನೇ ಮೊದಲಿಗ ಎಂದು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಆಹಾರ ಸಚಿವ ಯು.ಟಿ.ಖಾದರ್, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಗೋವಿಂದರಾಜು, ಶಾಸಕರಾದ ಗೋಪಾಲ ಪೂಜಾರಿ, ವಿನಯಕುಮಾರ ಸೊರಕೆ, ಐವನ್ ಡಿ’ಸೋಜಾ, ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನರಸಿಂಹಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ ಮೊದಲಾದವರು ಉಪಸ್ಥಿತರಿದ್ದರು. ಬಿಆರ್‌ಎಸ್ ಸಂಸ್ಥೆ ಜನರಲ್ ಮೆನೇಜರ್ ಕುಶಲ ಶೆಟ್ಟಿ ವಂದಿಸಿದರು.
ಇನ್ನಷ್ಟು ಸೇವೆಗೆ ಬದ್ಧ: ಡಾ| ಶೆಟ್ಟಿ
ನನಗೆ ಜಗತ್ತಿನ ವಿವಿಧೆಡೆ 88 ಆಸ್ಪತ್ರೆಗಳಿವೆ. ನನ್ನ ಊರಿನಲ್ಲಿ ಸುಸಜ್ಜಿತ ಆಸ್ಪತ್ರೆಯ ಸೇವೆ ನೀಡಲೆಂದು ಪ್ರಸ್ತಾವನೆ ಸಲ್ಲಿಸಿದೆ. ನಮ್ಮ ಗುರಿ ಗುಣಮಟ್ಟದ ಸೇವೆ ಕೈಗೆಟಕುವ ದರದಲ್ಲಿ ಸಿಗ ಬೇಕು. ಇಂದಿರಾ ಗಾಂಧಿಯವರ ನೂರನೆಯ ಜನ್ಮದಿನದ ಪ್ರಯುಕ್ತ ಇನ್ನಷ್ಟು ಸೇವೆಗೂ ಸಿದ್ಧನಿದ್ದೇನೆ ಎಂದು ಬಿಆರ್‌ಎಸ್ ಸಂಸ್ಥೆ ಅಧ್ಯಕ್ಷ ಡಾ| ಬಿ.ಆರ್.ಶೆಟ್ಟಿ ಹೇಳಿದರು. ಉಪಾಧ್ಯಕ್ಷೆ ಡಾ| ಸಿ.ಆರ್. ಶೆಟ್ಟಿ ಪ್ರಸ್ತಾವನೆಗೈದರು.
ಕೂಸಮ್ಮ = ತಾಯಿ + ಮಕ್ಕಳು
ಸಂಸ್ಥೆಯ ಸಲಹೆಗಾರ ಬಿ.ಎಸ್.ಶೆಟ್ಟಿ ಮಾತನಾಡಿ, “ಕೂಸಮ್ಮ’ ಶಬ್ದದಲ್ಲಿ ಕೂಸು= ಮಗು, ಅಮ್ಮ=ತಾಯಿ ಹೀಗೆ ಒಂದೇ ಶಬ್ದದಲ್ಲಿ ತಾಯಿ ಮತ್ತು ಮಕ್ಕಳು ಸೇರಿವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.