ಕರಾವಳಿಯಲ್ಲಿ ಜಿಎಸ್‌ಟಿ ಇಳಿಕೆಯೇ ಹೆಚ್ಚು ಲಾಭ
ರಿಯಲ್ ಎಸ್ಟೇಟ್ ರಂಗಕ್ಕೆ ಕೇಂದ್ರದ 25 ಸಾವಿರ ಕೋಟಿ ರೂ. ನೆರವು
Team Udayavani, Nov 12, 2019, 5:15 AM IST
ಉಡುಪಿ/ಮಂಗಳೂರು: ಅಪೂರ್ಣ ರಿಯಲ್ ಎಸ್ಟೇಟ್ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಲು ಕೇಂದ್ರ ಸರಕಾರ ಘೋಷಿಸಿರುವ 25 ಸಾವಿರ ಕೋಟಿ ರೂ. ನೆರವು ಉಭಯ ನಗರಗಳಲ್ಲಿನ ಉದ್ಯಮಕ್ಕೆ ಬಹಳ ದೊಡ್ಡ ಲಾಭ ತಂದುಕೊಡದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಾಕಿ ಪ್ರಾಜೆಕ್ಟ್ಗಳು ಕಡಿಮೆ ಸಂಖ್ಯೆಯ ಲ್ಲಿರುವುದು ಮತ್ತು ಸಣ್ಣ-ಮಧ್ಯಮ ವರ್ಗದ ವಸತಿ ಪ್ರಾಜೆಕ್ಟ್ ಕಡಿಮೆಯಿರುವ ಕಾರಣ ಈ ನೆರವಿನಿಂದ ಬಹಳ ಅನುಕೂಲವಾಗದು ಎನ್ನುತ್ತಾರೆ ರಿಯಲ್ ಎಸ್ಟೇಟ್ ಉದ್ಯಮಿಗಳು.
ಮಿಶ್ರ ಪ್ರತಿಕ್ರಿಯೆ
ಉಭಯ ನಗರಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಬೆಳೆಯುತ್ತಿದೆ. ಆದರೆ 3 ವರ್ಷಗಳ ಹಿಂದೆ ಆಗಿದ್ದ ನೋಟು ರದ್ದತಿ, ಬಳಿಕ ಬಂದ ಜಿಎಸ್‌ಟಿ ದೇಶಾದ್ಯಂತ ಈ ಉದ್ಯಮಕ್ಕೆ ಭಾರೀ ಹೊಡೆತ ನೀಡಿತ್ತು. ಈಗ ಇಡೀ ಉದ್ಯಮದ ಪುನಶ್ಚೇತನಕ್ಕೆ ಕೇಂದ್ರ ಈ ನೆರವು ಘೋಷಿಸಿದೆ. ಆದರೆ ಈ ಬಗ್ಗೆ ರಿಯಲ್ ಎಸ್ಟೇಟ್ ವಲಯಕ್ಕೆ ಸ್ಪಷ್ಟ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.
ಪ್ರಸ್ತುತ ಯಾವುದೇ ಪ್ರಾಜೆಕ್ಟ್ ಕೈಗೆತ್ತಿಕೊ ಳ್ಳುವುದಿದ್ದರೂ ರೇರಾ ಕಾಯಿದೆಯಡಿ ನೋಂದಣಿ ಕಡ್ಡಾಯ. ಅಂತಿಮ ಹಂತದಲ್ಲಿ ಕಾಮಗಾರಿ ಬಾಕಿಯಾದ ಕೈಗೆಟುಕುವ ಹಾಗೂ ಮಧ್ಯಮ ಆದಾಯ ವರ್ಗದ ವಸತಿ ಯೋಜನೆಗಳಿಗೆ ಕೇಂದ್ರದ ಈ ಸೌಲಭ್ಯ ಸಿಗುತ್ತದೆ. ಎಲ್ಲ ಪ್ರಾಜೆಕ್ಟ್ಗಳು ಶೇ. 100ರಷ್ಟು ನೋಂದಣಿಯಾಗಿದ್ದರೂ ಯೋಜನೆಯ ಸೌಲಭ್ಯದಿಂದ ದೂರ ಉಳಿಯಲಿದ್ದಾರೆ ಎನ್ನುತ್ತಾರೆ ಬಿಲ್ಡರ್‌ಗಳು.
37 ಅಪೂರ್ಣ ಪ್ರಾಜೆಕ್ಟ್
ಮಂಗಳೂರು ಮತ್ತು ನಗರಸಭೆ ವ್ಯಾಪ್ತಿಯಲ್ಲಿ 37 ಅಪೂರ್ಣ ಪ್ರಾಜೆಕ್ಟ್ ಗಳಿವೆ. ಜಿಎಸ್‌ಟಿ ಕಡಿತಗೊಳಿಸದಿದ್ದಲ್ಲಿ ಚೇತರಿಕೆ ಕಷ್ಟ. ಆದಾಗ್ಯೂ ಕರಾವಳಿಯಲ್ಲಿ ನಷ್ಟದಿಂದ ಪ್ರಾಜೆಕ್ಟ್ ನಿಂತುಹೋದ ಉದಾಹರಣೆಗಳು ಕಡಿಮೆ ಎನ್ನುತ್ತಾರೆ ಸಿಟಿ ರಿಯಲ್ ಎಸ್ಟೇಟ್‌ನ ರವೀಂದ್ರ ರಾವ್.
ಲ್ಯಾಂಡ್ ಟ್ರೇಡ್ಸ್‌ನ ಶ್ರೀನಾಥ್ ಹೆಬ್ಟಾರ್ ಪ್ರಕಾರ, ಜಿಎಸ್‌ಟಿ, ಟ್ಯಾಕ್ಸ್ ನಲ್ಲಿ ರಿಯಾಯಿತಿ ನೀಡಿದರೆ ಅನುಕೂಲ. ಬಡ್ಡಿದರ, ಜಿಎಸ್‌ಟಿಯಲ್ಲಿ ಇಳಿಸಿದರೆ ಗ್ರಾಹಕರಿಗೂ ಸಹಾಯವಾಗಬಹುದು.
ಸಿದ್ಧ ಮನೆಗೆ ಬೇಡಿಕೆ
ಜನರಿಗೆ ಸಿದ್ಧ ಮನೆ ಬೇಕು. ಆದರೆ ಪ್ರಾಜೆಕ್ಟ್ ಪೂರ್ಣಗೊಳಿಸಲು ಬಿಲ್ಡರ್‌ಗಳ ಬಳಿ ಹಣಕಾಸು ಇರದೆ ಕೆಲವು ಅರ್ಧಕ್ಕೆ ನಿಂತಿವೆ. ಸರಕಾರದ ನೆರವಿನಿಂದ ಕುಸಿದ ರಿಯಲ್ ಎಸ್ಟೇಟ್ ಉದ್ಯಮ ಚೇತರಿಕೆಯಾದೀತು. ಆದರೆ ಮಂಗಳೂರಿಗೆ ಇದರಿಂದ ಅನುಕೂಲ ಕಡಿಮೆ. ಬೆಂಗಳೂರು, ಮುಂಬಯಿ, ಕೋಲ್ಕತ್ತಾ ಗಳಂಥ ನಗರಗಳಿಗೆ ಪೂರಕ ಎನ್ನುತ್ತಾರೆ ಅಭೀಷ್ ಬಿಲ್ಡರ್ನ ಪುಷ್ಪರಾಜ್ ಜೈನ್.
ಮಂಗಳೂರಿಗೆ
ಸಹಕಾರಿಯಾಗದು
ರಿಯಲ್ ಎಸ್ಟೇಟ್ ಜನರಲ್ ಸೆಕ್ಟರ್‌ಗೆ ಕೇಂದ್ರದ ಈ ಯೋಜನೆ ಸಹಾಯ ಆಗದು. ಲೋ ಹೌಸ್ ಮತ್ತು ಮೀಡಿಯಂ ಹೌಸಿಂಗ್ ಪ್ರಾಜೆಕ್ಟ್ ಗಳಿಗೆ ಸ್ವಲ್ಪ ಸಹಾಯವಾಗಬಹುದು. ಮಂಗಳೂರಿನಲ್ಲಿ ಇಂತಹ ಪ್ರಾಜೆಕ್ಟ್ ಗಳು ಇಲ್ಲ.
– ನವೀನ್ ಕಾಡೋìಜ, ಅಧ್ಯಕ್ಷರು, ಕ್ರೆಡಾೖ
ಈ ನೆರವು ಹೇಗೆ ಸಿಗುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. ಉಡುಪಿಯಲ್ಲಿ ಕೆಲವೇ ಕೆಲವು ಪ್ರಾಜೆಕ್ಟ್ಗಳಿವೆ. ರೇರಾ ಕಾಯ್ದೆ ಅನುಷ್ಠಾನಗೊಳ್ಳುವ ಮುನ್ನ ನಡೆದ ಕೆಲವು ಪ್ರಾಜೆಕ್ಟ್ಗಳು ಬಾಕಿಯಿವೆ. ಇವುಗಳಿಗೂ ನೆರವು ಅಗತ್ಯವಿದೆ. ಇದಕ್ಕೆ ಏನು ಕ್ರಮ ಕೈಗೊಂಡಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ.
– ಜೆರ್ರಿ ವಿನ್ಸೆಂಟ್ ಡಯಾಸ್
ಅಧ್ಯಕ್ಷರು, ಉಡುಪಿ ಬಿಲ್ಡರ್ ಅಸೋಸಿಯೇಶನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
Ballari: ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು; ಮೃತರ ಸಂಖ್ಯೆ 4ಕ್ಕೆ
ICC; ಚಾಂಪಿಯನ್ಸ್ ಟ್ರೋಫಿ ಸುತ್ತಲಿನ ಬಿಕ್ಕಟ್ಟು: ಶುಕ್ರವಾರ ಮಹತ್ವದ ತೀರ್ಮಾನ?
Jasprit Bumrah ನಾಯಕತ್ವದ ಜವಾಬ್ದಾರಿಯನ್ನು ಆನಂದಿಸುತ್ತಾರೆ: ರವಿಶಾಸ್ತ್ರಿ
Lebanon; ಇಸ್ರೇಲ್, ಹೆಜ್ಬುಲ್ಲಾ ಕದನ ವಿರಾಮಕ್ಕೆ ಒಪ್ಪಿಗೆ: ಯುಎಸ್ ಸಮನ್ವಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.