ಉಡುಪಿಯಲ್ಲಿ ಬೃಹತ್ ಮರ ಧರಾಶಾಹಿ
Team Udayavani, Jul 9, 2018, 7:00 AM IST
ಉಡುಪಿ: ನಗರದ ಬಾಲಕಿಯರ ಸ.ಪ.ಪೂ. ಕಾಲೇಜು ಎದುರಿನ ಬೃಹತ್ ಅಶ್ವತ್ಥ ಮರ ರವಿವಾರ ಮುಂಜಾವ ಧರೆಗುರುಳಿದೆ. ರಜೆ ಆದ್ದರಿಂದ ಮತ್ತು ಬೆಳಗ್ಗೆ 6 ಗಂಟೆಯ ಸುಮಾರಿಗೆ ಘಟನೆ ನಡೆದಿರುವುದರಿಂದ ಭಾರೀ ಅನಾಹುತವೊಂದು ತಪ್ಪಿಹೋಗಿದೆ.
ಮೊದಲು ಅಶ್ವತ್ಥ ಮರದ ಒಂದು ಭಾಗ ಮುರಿದು ಕಾಲೇಜು ಆವರಣದೊಳಗಿದ್ದ ಮಾವಿನ ಮರದ ಮೇಲೆ ಬಿದ್ದಿದೆ. ಬಳಿಕ ಮಾವಿನಮರ ಬುಡಸಮೇತ ಕಿತ್ತು ಕಟ್ಟಡಕ್ಕೆ ತೀರ ಸನಿಹದಲ್ಲೇ ನೆಲಕ್ಕುರುಳಿದೆ. ಬಳಿಕ ಅಶ್ವತ್ಥಮರವೂ ಬಲಬದಿ ರಸ್ತೆಗೆ ಉರುಳಿದೆ.
ಇತರ ದಿನಗಳಲ್ಲಿ ಕಾಲೇಜಿನಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿರುತ್ತಿದ್ದರು. ಇಲ್ಲೇ ಶಿಕ್ಷಕರ ತರಬೇತಿ ಸಂಸ್ಥೆ (ಡಯಟ್) ಕೂಡ ಇದೆ. ಕೆಥೋಲಿಕ್ ಸೆಂಟರ್ ಕಟ್ಟಡದಿಂದ ಹರ್ಷ ಹೊಸ ಶೋರೂಂಗೆ ತೆರಳುವ ರಸ್ತೆ ಇದಾಗಿದ್ದು ವಾರದ ಇತರ ದಿನಗಳಲ್ಲಿ ದಟ್ಟನೆ ಇರುತ್ತದೆ. ರಜೆ ಇದ್ದುದರಿಂದ ಎಲ್ಲರೂ ಪಾರಾಗಿದ್ದಾರೆ.
ವಿದ್ಯುತ್ ಕಂಬಗಳಿಗೆ ಹಾನಿ
ಮರ ವಿದ್ಯುತ್ ತಂತಿಗೆ ಬಿದ್ದು ಇಲ್ಲಿನ 5 ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಒಂದು ವಿದ್ಯುತ್ ಕಂಬ ಮರದ ಅಡಿ ಇದೆ. ಕಂಬಗಳನ್ನು ಪುನರ್‌ನೆಡುವ ಕೆಲಸವನ್ನು ಮೆಸ್ಕಾಂ ಸಿಬಂದಿ ಬೆಳಗ್ಗಿನಿಂದಲೇ ಆರಂಭಿಸಿ ಸಂಜೆಯವರೆಗೂ ನಡೆಸಿದರು. ಶಾಲೆಯ ಮುಖ್ಯ ದ್ವಾರಕ್ಕೆ ಅಡ್ಡಲಾಗಿ ಮರ ಬಿದ್ದಿರುವುದರಿಂದ ಈ ದ್ವಾರದಿಂದ ಪ್ರವೇಶ ಕಷ್ಟಸಾಧ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Editorial: ಗಿಫ್ಟ್ ಡೀಡ್: ಸುಪ್ರೀಂಕೋರ್ಟ್‌ನಿಂದ ಕಣ್ತೆರೆಸುವ ತೀರ್ಪು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Overview: ಕೊಪ್ಪಳ ಜಿಲ್ಲಾಸ್ಪತ್ರೆಗೆ ಬಿಜೆಪಿ ಸತ್ಯ ಶೋಧನಾ ತಂಡ ಭೇಟಿ
ಪಟ್ನಾದಲ್ಲಿ ಸುಮಾರು 500 ವರ್ಷಗಳ ಹಿಂದಿನ ದೇಗುಲ ಪತ್ತೆ
ಪ್ರಸಾರಕ ಸಂಸ್ಥೆಗಳ ಶುಲ್ಕ ಹೆಚ್ಚಳ: ಚಾನೆಲ್‌ಗಳ ದರವೂ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.