![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jul 30, 2018, 11:28 AM IST
ಉಪ್ಪುಂದ: ಇಲ್ಲಿಗೆ ಸಮೀಪದ ಕರ್ಕಿಕಳಿ ಬಳಿ ತೀರಕ್ಕೆ ಸನಿಹ ಸಮುದ್ರದಲ್ಲಿ ದೋಣಿ ಮಗುಚಿದ ಘಟನೆ ರವಿವಾರ ಮುಂಜಾನೆ ಸಂಭವಿಸಿದೆ. ಅದೃಷ್ಟವಶಾತ್ ಮೀನುಗಾರರು ಅಪಾಯದಿಂದ ಪಾರಾಗಿದ್ದಾರೆ.
ಶ್ರೀ ಮಹಾಸತಿ ಕೃಪಾ ನಾಡ ದೋಣಿಯ ಮೀನುಗಾರರಾದ ಮಂಜುನಾಥ ಖಾರ್ವಿ, ಪಾಂಡುರಂಗ ಖಾರ್ವಿ, ರವೀಂದ್ರ ಖಾರ್ವಿ, ಸುಂದರ ಮೊಗವೀರ ಪಾರಾದವರು.
ರವಿವಾರ ಮುಂಜಾನೆ ಮೀನುಗಾರಿಕೆಗೆ ತೆರಳಿದ ಸಂದರ್ಭ ಏಕಾಏಕಿ ಬೃಹತ್ ಅಲೆಗಳು ಅಪ್ಪಳಿಸಿ ದೋಣಿ ಮಗುಚಿಕೊಂಡಿದೆ. ಮೀನುಗಾರರು ತತ್‌ಕ್ಷಣ ನೀರಿಗೆ ಧುಮುಕಿದ್ದರಿಂದ ಅಪಾಯವಿಲ್ಲದೆ ಪಾರಾದರು.
ಅನಂತರ ದಡದಲ್ಲಿರುವ ಮೀನುಗಾರರಿಗೆ ಮಾಹಿತಿ ರವಾನಿಸಿದರು. ಸ್ಥಳೀಯ ಮೀನುಗಾರರು ಸ್ಥಳಕ್ಕೆ ಬಂದು ಸಹಾಯಹಸ್ತ ಚಾಚುವಲ್ಲಿ ಯಶಸ್ವಿಯಾದರು. ಸುಮಾರು 50ಕ್ಕೂ ಹೆಚ್ಚು ಮೀನುಗಾರರು ಮಗುಚಿದ ಪಲ್ಟಿಯಾದ ದೋಣಿಯನ್ನು ದಡಕ್ಕೆ ತರುವಲ್ಲಿ ಶ್ರಮಿಸಿದರು.
ಅಪಾರ ನಷ್ಟ
ಅಲೆಗಳ ರುದ್ರನರ್ತನದಿಂದ ದೋಣಿಗೆ ಹಾನಿಯಾಗಿದ್ದು, ಎಂಜಿನ್ ಒಡೆದು ಹೋಗಿ ಸುಮಾರು 3 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಮೀನುಗಾರರು ತಿಳಿಸಿದ್ದಾರೆ. ಬಲೆ ಕೊಚ್ಚಿ ಹೋಗಿದೆ.
ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.